ಅನೂಹ್ಯ ಬದುಕಿನ ದಾರಿಯಲ್ಲಿ ಅಚಾನಕ್ಕಾಗಿ ಸಿಕ್ಕ ಅನಾಮಿಕನೊಬ್ಬ ಹೇಳದೆ ಕೇಳದೆ ಮನಸ್ಸು ದೋಚಿಬಿಟ್ಟಿದ್ದ. ನನಗೆ ಅದರ ಪರಿವು ಇರಲಿಲ್ಲ. ನಿದ್ರೆಯಿಲ್ಲದೆ ಕಳೆದ ಇರುಳುಗಳಲ್ಲಿ ಇಣುಕಿ ಕಾಡುವ ಅವನ ನೆನಪುಗಳು ಸಹ ನನಗೆ ಇಡೀ ದಿನದ ದಿನಚರಿಯೆಂದೇ ಭಾಸವಾಗುತ್ತಿತ್ತು. ಬಹುಶಃ ಅವನಿಗೂ ಇದರ ಕಲ್ಪನೆ ಇರಲಿಲ್ಲವೇನೋ! ನಾನು ಮಾತ್ರ ಪ್ರತಿದಿನ ಹೊಸತೊಂದು ಕನಸುಗಳ ಪೊಣಿಸುತ್ತಲೇ ಇದ್ದೆ! ಹೀಗೊಂದು ದಿನ ಅವನು ನನ್ನೆದುರು ಮೊಣಕಾಲುರಿ ಕೈ ಚಾಚಿ ನನ್ನ ಪ್ರೀತಿಗಾಗಿ ಹಂಬಲಿಸಬಹುದೇ?! ಹೀಗೊಮ್ನೆ ಅವನು ನನ್ನ ಕಣ್ಣಲ್ಲಿ ಕಣ್ಣಿಟ್ಟು ತನ್ನ ಪ್ರೀತಿಯನ್ನು ಮನಸಾರೆ ಹೇಳಬಹುದೇ?! ಎಂದೆಲ್ಲಾ ಕನಸು ಕಾಣುತ್ತಿದ್ದೆ. ನಮ್ಮ ಬದುಕು ನಾವು ಅಂದುಕೊಂಡ ಹಾಗೆ ನಡೆದು ಹೋಗುವಂತಿದ್ದರೆ ವಿಧಿಗೆ ಕೆಲಸವಿಲ್ಲದೆ ನಿರುದ್ಯೋಗಿಯಾಗಿ ಇಲ್ಲೆ ಎಲ್ಲೋ ಭೂಮಿ ಮೇಲೆ ಕೆಲಸಕ್ಕಾಗಿ ಅಲೆಯುತ್ತಿತ್ತೇನೋ ಅಲ್ವಾ.. ಬಹಳ ದಿನಗಳ ಕಠಿಣ ಪರಿಶ್ರಮದ ನಂತರ ಸಿಕ್ಕ ಒಂದು ಒಳ್ಳೆಯ ಅವಕಾಶವನ್ನು ಸಾಧನೆಯ ಮೆಟ್ಟಿಲಾಗಿ ಮಾಡಿಕೊಳ್ಳುವ ಗುರಿಯಿಟ್ಟುಕೊಂಡು ಆ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದೆ. ನಮ್ಮ ಟೀಮ್ ನಲ್ಲಿ ಇದ್ದದ್ದು ಒಟ್ಟು ಏಳು ಜನರು. ನಾಲ್ಕು ಜನ ಹುಡುಗರು, ಮೂರು ಜನ ಹುಡುಗಿಯರು. ಒಂದೇ ಮಾತಿನಲ್ಲಿ ಹೇಳುವುದಾದರೆ ಎಲ್ಲರೂ ಯುವಜನಾಂಗದವರೇ. ಟೀಮ್ ಲೀಡರ್ ಒಬ್ಬನನ್ನು ಹೊರತು ಪಡಿಸಿ ಉಳಿದ ಎಲ್ಲರೂ ತುಂಬಾ ಫ್ರೆಂಡ್ಲಿಯಾಗಿದ್ದರು. ಒಬ್ಬರಿಗೊಬ್ಬರು ಪರ...
ಆಗಾಗ ಮನದಲ್ಲಿ ಪುಟಿಯುವ ಭಾವನೆಗಳಿಗೆ ಅಕ್ಷರಗಳ ಬಣ್ಣ ಬಳಿಯುವ ಹವ್ಯಾಸಿಯ ಪದಗಳ ಪಯಣ..