ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅನೂಹ್ಯ

ಅನೂಹ್ಯ ಬದುಕಿನ ದಾರಿಯಲ್ಲಿ ಅಚಾನಕ್ಕಾಗಿ ಸಿಕ್ಕ ಅನಾಮಿಕನೊಬ್ಬ ಹೇಳದೆ ಕೇಳದೆ ಮನಸ್ಸು ದೋಚಿಬಿಟ್ಟಿದ್ದ. ನನಗೆ ಅದರ ಪರಿವು ಇರಲಿಲ್ಲ. ನಿದ್ರೆಯಿಲ್ಲದೆ ಕಳೆದ ಇರುಳುಗಳಲ್ಲಿ ಇಣುಕಿ ಕಾಡುವ ಅವನ ನೆನಪುಗಳು ಸಹ ನನಗೆ ಇಡೀ ದಿನದ ದಿನಚರಿಯೆಂದೇ ಭಾಸವಾಗುತ್ತಿತ್ತು. ಬಹುಶಃ ಅವನಿಗೂ ಇದರ ಕಲ್ಪನೆ ಇರಲಿಲ್ಲವೇನೋ!  ನಾನು ಮಾತ್ರ ಪ್ರತಿದಿನ ಹೊಸತೊಂದು ಕನಸುಗಳ ಪೊಣಿಸುತ್ತಲೇ ಇದ್ದೆ!  ಹೀಗೊಂದು ದಿನ ಅವನು ನನ್ನೆದುರು ಮೊಣಕಾಲುರಿ ಕೈ ಚಾಚಿ ನನ್ನ ಪ್ರೀತಿಗಾಗಿ ಹಂಬಲಿಸಬಹುದೇ?!  ಹೀಗೊಮ್ನೆ ಅವನು ನನ್ನ ಕಣ್ಣಲ್ಲಿ ಕಣ್ಣಿಟ್ಟು ತನ್ನ ಪ್ರೀತಿಯನ್ನು ಮನಸಾರೆ ಹೇಳಬಹುದೇ?! ಎಂದೆಲ್ಲಾ ಕನಸು ಕಾಣುತ್ತಿದ್ದೆ. ನಮ್ಮ ಬದುಕು ನಾವು ಅಂದುಕೊಂಡ ಹಾಗೆ ನಡೆದು ಹೋಗುವಂತಿದ್ದರೆ ವಿಧಿಗೆ ಕೆಲಸವಿಲ್ಲದೆ ನಿರುದ್ಯೋಗಿಯಾಗಿ ಇಲ್ಲೆ ಎಲ್ಲೋ ಭೂಮಿ ಮೇಲೆ ಕೆಲಸಕ್ಕಾಗಿ ಅಲೆಯುತ್ತಿತ್ತೇನೋ ಅಲ್ವಾ.. ಬಹಳ ದಿನಗಳ ಕಠಿಣ ಪರಿಶ್ರಮದ ನಂತರ ಸಿಕ್ಕ ಒಂದು ಒಳ್ಳೆಯ ಅವಕಾಶವನ್ನು ಸಾಧನೆಯ ಮೆಟ್ಟಿಲಾಗಿ ಮಾಡಿಕೊಳ್ಳುವ ಗುರಿಯಿಟ್ಟುಕೊಂಡು ಆ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದೆ. ನಮ್ಮ ಟೀಮ್ ನಲ್ಲಿ ಇದ್ದದ್ದು ಒಟ್ಟು ಏಳು ಜನರು. ನಾಲ್ಕು ಜನ ಹುಡುಗರು, ಮೂರು ಜನ ಹುಡುಗಿಯರು. ಒಂದೇ ಮಾತಿನಲ್ಲಿ ಹೇಳುವುದಾದರೆ ಎಲ್ಲರೂ ಯುವಜನಾಂಗದವರೇ. ಟೀಮ್ ಲೀಡರ್ ಒಬ್ಬನನ್ನು ಹೊರತು ಪಡಿಸಿ ಉಳಿದ ಎಲ್ಲರೂ ತುಂಬಾ ಫ್ರೆಂಡ್ಲಿಯಾಗಿದ್ದರು. ಒಬ್ಬರಿಗೊಬ್ಬರು ಪರಸ್ಪರ ಚೇಷ್ಟ ಮಾಡ

ಏಕಾಂತ

ಜೀವನದ ಚಿಂತೆಗಳ ಸಂತೆಯ  ಸುಳಿಯಿಂದ ಹೊರಳಿ ಹೊರಬಂದು ಪಡೆಯಬೇಕೊಂದು ಏಕಾಂತ  ಮುಂದೆ ಹೊಗಳಿ ಹಿಂದೆ ತೆಗಳಿ ಹಲ್ಲುಗಿಂಜುವ ಕಪಟ ವೇದಿಕೆಯಿಂದ ದೂರಹೋಗಿ ಪಡೆಯಬಹುದೇ ಏಕಾಂತ ಎಲ್ಲರ ಮಧ್ಯದಲ್ಲಿರುವ ಬಡ ಒಂಟಿತನಕ್ಕಿಂತ  ಶ್ರೀಮಂತ ನನ್ನ ಏಕಾಂತ ನಾನರಿಯದ ನನ್ನ ತಪ್ಪು ಒಪ್ಪುಗಳ  ಗ್ರಹಿಸಿ ತಿದ್ದುವದು ಏಕಾಂತ ಬೇಸರಿಸಿಕೊಳ್ಳದೆ ನನ್ನ ಕ್ಷುಲ್ಲಕ ಕಥೆಗಳನ್ನು  ಆಹ್ಲಾದಿಸುವ ಏಕಾಂತ ಯಾರರಿಯದ ನೋವುಗಳ ಕಣ್ಣೀರಿನ ಮೂಟೆ  ಹೊತ್ತು ನನ್ನೊಡನೆ ನೊಂದಿಹ ಏಕಾಂತ ಬೆತ್ತಲಾಗದೆ ಕತ್ತಲೆಯಲ್ಲೂ  ಬೆಳಕು ಬಿತ್ತರಿಸುವ ಏಕಾಂತ ಚಿತ್ತದೊಲುಮೆಗೆ ಭಾವನೆಗಳ  ಬೈತಿರಿಸಿ ಸುರಿಯುವ ಏಕಾಂತ ಅನಿರ್ವಚನ ಆಲಾಪಗಳಿಗೂ  ಅವಕಾಶ ನೀಡುವ ಏಕಾಂತ ಅಗಮ್ಯದಾದಿಗೆ ಅನುಸರಿಸುವ  ಪ್ರಥಮೇಯ ಮಾರ್ಗ ಏಕಾಂತ ಆತ್ಮನ್ಯೂನ್ಯತೆ ಆತ್ಮಪ್ರಶಂಸೆಗಳ ನಡುವಿನಲ್ಲಿ  ಆತ್ಮವಿಮರ್ಶೆಗೆ ಅನುವಾದ ಏಕಾಂತ ಅರಿಯದೆ ಮುಗ್ದತೆಯಲ್ಲಿ ಜಾರಿಸಿ ನನ್ನನ್ನು ನನಗೆ ಭೇಟಿಮಾಡಿಸುವ ಏಕಾಂತ..       -----------

ಭ್ರಮೆ

ನೀನೊಂದು ಸುಂದರ ಸುಳ್ಳು ನನ್ನೊಳಗಿನ ಸ್ಪೂರ್ತಿಯ ನೆರಳು ಪ್ರತಿ ಕ್ಷಣವೂ ನಿನ್ನೊಡನೆ ಕಳೆಯುವಾಸೆ ನಾಳೆಗಳ ಹಾಳೆಯಲ್ಲಿ ನಿನನ್ನೇ ಗೀಚುವಾಸೆ  ಮುಂಜಾವಿನ ಮಂಜಿನ ಹನಿಗಳಂತೆ ತಂಗಾಳಿಯ ಸಿಹಿ ತಂಪಿನಂತೆ ನಿನ್ನೆದೆಯಲ್ಲೊಂದು ಕನಸಾಗುವಾಸೆ.. ನಡೆದಷ್ಟು ದಾರಿ ನಿನ್ನ ಹೆಸರಲ್ಲೇ ಸವಿದಾಗಿದೆ ಇನ್ನಷ್ಟು ನೆನಪುಗಳು ನಿನ್ನನ್ನೇ ಅವಲಂಬಿಸಿವೆ ಮನಸ್ಸಿನ ಪ್ರತಿ ಮಿಡಿತದ ರೂವಾರಿ ನೀ ನಿನ್ನೊಲವಿನ ಸಂದಾಯಕ್ಕೆ ನಾ ದುಬಾರಿಯಾಗುವಾಸೆ.. ಕ್ಷಣ ಕ್ಷಣವೂ ಕೂತುಹಲ ಬಾಳು ನಿನ್ನಿಂದಲೇ ನೀನಿರದೇ ನಿಂತಂತೆ ಭುವಿ ಸುಮ್ಮನೆ ನನ್ನೊಳ ಆಸೆಗಳಿಗೆ ರೆಕ್ಕೆ ನೀನೇ ಹಾರದಂತೆ ಪಂಜರದಿ ಬಂದಿಸಿದ್ದು ನೀನೇ ವಿಚಿತ್ರ ಪ್ರೀತಿಗೆ ದೂರು ನೂರಾರು ಅವೆಲ್ಲ ಕಡೆಗಣಿಸಿ ನಿನ್ನಲ್ಲೇ ಅನುರಕ್ತಳಾಗುವಾಸೆ.. ಸಾವಿರ ಅನುಭವವನ್ನು ಮೀರಿದ ಅನುಭೂತಿ ವಿಶೇಷವೆನಗೆ ಈ ಭಾವನೆಗಳ ಸಂಗತಿ ಅನುಸರಿಸಿವೆ ಹೆಜ್ಜೆಗಳು ನೀನಡೆವ ದಾರಿಯನ್ನೇ ಕಲ್ಲು ಮುಳ್ಳು ಪರಿವೆಯಿಲ್ಲ ನಾನಿನ್ನು ನಿನ್ನ ನೆರಳೇ! ಜಗದ ನಿಯಮಕ್ಕೆ ವ್ಯತಿರಿಕ್ತವಾಗಿ ನಾ ಪೂರ್ತಿ ನಿನ್ನ ವಶವಾಗುವಾಸೆ.. ನೀ ನನ್ನವನಲ್ಲ ನನಗೆಂದೂ ಸಿಗುವುದಿಲ್ಲ ಬಲ್ಲೆ ನಾ ಬದುಕಿನ ಕಹಿ ಸತ್ಯವನ್ನೆಲ್ಲ ಆದರೂ ಮನ ಮಿಡಿಯುವದು  ಎಟುಕದ ಚಂದ್ರನೇ ಬೇಕೆನ್ನುವದು ಅದಕ್ಕೆ ಪೊಷಿಸಿ ನೀರೆರೆದೆ ಒಂದು ಭ್ರಮೆಯ ಆ ಭ್ರಮೆಯಲ್ಲಾದರೂ ನೀ ನನ್ನವನೆಂಬಾಸೆ..                 *****