ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow

ನೀ ನನ್ನ ಒಲವು..❤ ಸಂಚಿಕೆ-53

ಕೋರ್ಟ್ ತೀರ್ಮಾನದ ಪ್ರಕಾರ ಅಥ್ರೇಯ, ಅವನ ಅನುಚರರು, ಹಾಗೂ ದೇಶದ್ರೋಹಿ ಕಾರ್ಯದಲ್ಲಿ ಸಹಾಯ ಮಾಡಿದ್ದ ಇನ್ನಿತರರು  ಜೀವಾವಧಿ ಶಿಕ್ಷೆಗೊಳಗಾದರು.  ಆಪ್ತಮಿತ್ರನಿಂದಾದ ಮೋಸಕ್ಕೆ ರಘುನಂದನ್ ರೈ ಹೆಸರಿಗೆ ಕಳಂಕದ ಕಲೆಯೊಂದು ಉಳಿದು ಹೋಯಿತು. ಮೀಡಿಯಾದಲ್ಲಿ ಸುದ್ದಿ ಪುಂಖಾನುಪುಂಖವಾಗಿ ಘ್ರಾಸವಾಗತೊಡಗಿತು. ಇದರಿಂದಾಗಿ ವ್ಯವಹಾರದ ಮೇಲೆ ಕೂಡ ದುಷ್ಪರಿಣಾಮ ಬೀರತೊಡಗಿತು. ಅವರ ಆರೋಗ್ಯದ ಸ್ಥಿತಿಯಲ್ಲಿ ಸಹ ಏರುಪೇರುಗಳು ಕಾಣತೊಡಗಿದವು.  ತಂದೆಗಾದ ಆಘಾತ ಪ್ರಸಕ್ತ ವಿದ್ಯಮಾನಗಳಿಂದ ಅವರು ಅನುಭವಿಸುತ್ತಿರುವ ಮಾನಸಿಕ ಒತ್ತಡವನ್ನು ಗಮನಿಸಿದ ಮಾನ್ವಿ, ವ್ಯವಹಾರವನ್ನು ಸ್ಥಗಿತಗೊಳಿಸಿ, ಕೆಲವು ಕಾಲ ವಿದೇಶಕ್ಕೆ ತೆರಳಿ ಅವರನ್ನು ಅಲ್ಲಿಯೇ ಇರಲು ಒತ್ತಾಯ ಮಾಡಿದಳು.  ಮಗಳ ಮಾತಿಗೆ ಒಮ್ಮತ ಸೂಚಿಸಿದ ರಘುನಂದನ್ ಅದಕ್ಕೆ ಬದಲಾಗಿ ಮಗಳನ್ನು ಒಬ್ಬ ಸುಸಂಸ್ಕೃತ ಗೃಹಿಣಿಯಾಗಿ ಕಾಣುವ ತಮ್ಮ ಆಸೆಯನ್ನು ತಿಳಿಸಿದರು. ತನ್ನ ಆಜನ್ಮ ಶತೃವಿನೊಂದಿಗೆ ಮುಂದಿನ ಬದುಕನ್ನು ಊಹಿಸಲು ಸಾಧ್ಯವಾಗದಿದ್ದರೂ ತನ್ನ ತಂದೆಯ ನೆಮ್ಮದಿಗಾಗಿ ಸುಮ್ಮನೆ ತಲೆದೂಗಿದಳಾಕೆ.      ಬೆಂಗಳೂರಿಗೆ ಹೊರಟವರನ್ನು  ಬೀಳ್ಕೊಡಲು ಏರ್ಪೋರ್ಟ್ ಗೆ ಬಂದಿದ್ದರು  ರಘುನಂದನ್ ಹಾಗೂ ಮಾನಸ. ಆಲಾಪ್ ಸಂಜೀವಿನಿ, ವಿನಾಯಕ್ ಸುಲೋಚನರನ್ನು ಹೊರತುಪಡಿಸಿ ಹಿಂದಿನ ಕಾರಿನಲ್ಲಿ ಬರುತ್ತಿದ್ದ ಹರ್ಷ ಪರಿ ಮಾನ್ವಿ ಮತ್ತು ಪ್ರಸನ್ನ ಇನ್ನೂ  ಏರ್ಪೋರ್ಟ್ ಗೆ ತಲುಪಿರಲಿಲ್ಲ. "ಆಲಾಪ್, ಎಲ್ಲಿ

ನೀ ನನ್ನ ಒಲವು..❤ ಸಂಚಿಕೆ-52

ಪ್ಯಾರಡೈಸ್ ಗ್ಲಾಸ್ ಹೌಸ್ ಹಿಂದೊಮ್ಮೆ ಹರ್ಷನನ್ನ ಭೇಟಿಯಾಗುವ ಕನಸು ಹೊತ್ತು ಕಾಲಿಟ್ಟ ಅದೇ ಮದುವೆ ಮಂಟಪ. ಸ್ವರ್ಗವೇ ಧರೆಗಿಳಿದಂತೆ ಜಗಮಗ ಬೆಳಕು,  ಹೂವಿನ ರಾಶಿ ರಾಶಿ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ಹಿಡಿದು ಎಲ್ಲೆಡೆಯೂ  ಅಥ್ರೇಯನ ಸೆಕ್ಯೂರಿಟಿಗಳ ಗುಂಪು ಪಹರೆ ಕಾಯುತ್ತಿದ್ದರು. ರೆಡ್ ಯುನಿಫಾರ್ಮ್ ಧರಿಸಿದ ಮ್ಯಾರೇಜ್ ಮ್ಯಾನೇಜ್ಮೆಂಟ್ ಟೀಮಿನವರು ತಮ್ಮ ಕಾರ್ಯಗಳಲ್ಲಿ ನಿರತರಾಗಿ ಲವಲವಿಕೆಯಿಂದ ಓಡಾಡುತ್ತಿದ್ದರು. ಬಂಧುಗಳು ಹಾಗೂ ಆಮಂತ್ರಿತ ಗಣ್ಯರ ಹೊರತು ಒಂದು ನೊಣ ಕೂಡ ಒಳಗೆ ಬರಲು ಅವಕಾಶವಿರದಂತೆ ಬಿಗಿ ಭದ್ರತೆಯನ್ನು ವಹಿಸಲಾಗಿತ್ತು.  ಆಗರ್ಭ ಶ್ರೀಮಂತ ರಘುನಂದನ್ ಏಕಮೇವ ಸುಪುತ್ರಿಯ ಮದುವೆಗೆ ಆಯ್ದ ಗಣ್ಯಾತಿಗಣ್ಯರ ಆಗಮನವೂ ಆಗಿತ್ತು. ಸೋದರ ಸಂಬಂಧಿಗಳು ಸ್ನೇಹಿತರ ಒಡನಾಟ ಓಡಾಟ ಸಂಭ್ರಮದ ಮೆರುಗು ಹೆಚ್ಚಿಸಿತ್ತು.  ಪರಿ ಎಲ್ಲೆಡೆಗೂ ದೃಷ್ಟಿ ಹಾಯಿಸಿದಳು. ಆಡಂಬರದ ಮದುವೆ ಮಂಟಪ ಬಿಕೋ ಎನ್ನಿಸಿತ್ತು. ಅವಕಾಶಗಳು ವಿಫಲವಾದರೆ, ಮಾಡಿದ ಉಪಾಯಗಳು ಕೈ ತಪ್ಪಿದರೆ, ವಿಧಿಯ ನಿರ್ಧಾರ ಬೇರೆಯೇ ಆಗಿದ್ದರೆ ಇದೇ ಮಂಟಪದಲ್ಲಿ ಹರ್ಷ ಮಾನ್ವಿಯ ಮದುವೆ ನಿಶ್ಚಿತ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ ಹರ್ಷ ತನ್ನವನಾಗಬಹುದು. ಆದರೆ ಮಾನ್ವಿಯ ಜೀವನ?? ಅವಳ ಚಿಂತೆಯನ್ನು ಗ್ರಹಿಸಿದ ಸಂಜೀವಿನಿ ಪರಿಯ ಕೈ ಅಮುಕಿದಳು. ಎಲ್ಲ ಒಳ್ಳೆಯದೇ ಆಗುತ್ತೆ. ಭರವಸೆಯ ಸ್ಪರ್ಶವದು. ಕಣ್ಣಲ್ಲೇ ಮುಗುಳ್ನಕ್ಕಳು ಪರಿ. 

ನೀ ನನ್ನ ಒಲವು..❤ ಸಂಚಿಕೆ-51

  ಆಸ್ಪತ್ರೆಯಿಂದ ಮನೆಗೆ ಬಂದ ಮಾನ್ವಿಯನ್ನು ಹೊಸ್ತಿಲಲ್ಲೇ ನಿಲ್ಲಿಸಿ ಆರತಿ ತರಲು ಹೇಳಿದರು ಅವಳ ತಾಯಿ ಮಾನಸ. ಮಿಸೆಸ್ ಅರುಣಾರ (ಅಥ್ರೇಯನ ಪತ್ನಿ) ಪ್ರಕಾರ  ಈ ಆಚರಣೆ ಸಂಪ್ರದಾಯ ಎಲ್ಲಾ ಟೈಮ್ ವೇಸ್ಟ್‌!! ಆದರೂ ಸಂಬಂಧಿ ಮನದಿಚ್ಚೆಯನುಸಾರ ಬಿಗುಮಾನದಲ್ಲಿ ತಾವು ಆರತಿಗೆ ಕೈ ಜೋಡಿಸಿದ್ದರು. ಒಳಗೆ ಬಂದ ಮಾನ್ವಿಯ ಯೋಗಕ್ಷೇಮ ವಿಚಾರಿಸಿದರು. ಕೇವಲ ಫಾರ್ಮ್ಯಾಲಿಟಿಗೆ!! ಮಾತಿನಲ್ಲಿ ಆಸಕ್ತಿಯೇ ಇರಲಿಲ್ಲ. ಅರುಣಾ ಅವರನ್ನು ಮೊದಲ ಬಾರಿಗೆ ನೋಡುತ್ತಿದ್ದಂತೆ ಅಚೇತನನಾದ ಪ್ರಸನ್ನ ಅನ್ಯಮನಸ್ಕನಾಗಿ  ಹೆಜ್ಜೆ  ಹಿಂದೆ ಹಾಕಿದ್ದ. ಯಾವುದೋ ಟ್ರಾನ್ಸ್ ನಲ್ಲಿದ್ದಂತೆ ಶ್ವಾಸಿಸುವದನ್ನು ಮರೆತು ಪಕ್ಕಕ್ಕೆ ಜರುಗಿ, ಕೆಟ್ಟ ಕನಸಿನಿಂದ ಎಚ್ಚರಗೊಂಡಂತೆ ಗಂಭೀರ ನಿಟ್ಟುಸಿರು ಬಿಟ್ಟ‌. ಅವನ ಮನಸ್ಸು ಹತೋಟಿಗೆ ಬರಲು ಕೆಲವು ಕ್ಷಣಗಳೇ ಹಿಡಿದವು. ಅವನನ್ನೇ ಗಮನಿಸುತ್ತಿದ್ದ ಪರಿಗೆ ಅವನ ಬದಲಾದ ವರ್ತನೆ ಸಂಶಯ ಹುಟ್ಟು ಹಾಕಿತು. ಹರ್ಷನ ಬಳಿ ಬಂದ ಅರುಣಾ ಅವನ ಭುಜಕ್ಕೆ ಕೈಹಾಕಿ "ಹೌ ಆರ್ ಯು ಸನ್?" ಕೇಳಿದರು. ಅವರದ್ದೇನಿದ್ದರೂ  ಜನನಿಮಿತ್ಯ ಒಂದೆರಡು ಕಳಕಳಿಯ ಮಾತುಗಳು. "ಗುಡ್ ಮಾಮ್" ಅಷ್ಟೇ ಕ್ಲುಪ್ತವಾಗಿ ಉತ್ತರಿಸಿದ  ಹರ್ಷನಿಗೆ ನಿಜವಾದ ಸಂಕಲ್ಪ್ ನ ಬಗ್ಗೆ ಕನಿಕರ ಉಂಟಾಯಿತು.  ಮಾನ್ವಿಯ ಬಳಿ ಬಂದ ಅಥ್ರೇಯ ಅವಳನ್ನು ಬಳಸಿ "ಡಿಯರ್, ನನ್ನ ಫ್ರೆಂಡ್ ರಘು,  ನಿನ್ನ ಮತ್ತು ಸಂಕಲ್ಪ್ ಮದುವೆಯನ್ನು ಇನ್ನೂ ಕೆಲವು ದಿ