ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನೀ ನನ್ನ ಒಲವು..❤ ಸಂಚಿಕೆ-50

ಹೊಸ ಹೊಸ ಕನಸು ಹೊತ್ತ ಮುಂಜಾವಿನ ಕಿರಣಗಳು ಯತಾರೀತಿ ಭೂಮಿ ಸ್ಪರ್ಶಿಸಿದವು. ಕವಲೊಡೆದ ಮನಸ್ಸಿನ ಹಾದಿಗಳು ಯಾವುದೋ ಒಂದು ತಿರುವಿನಲ್ಲಿ ಒಂದಾಗುವ ನಿರೀಕ್ಷೆಯಲ್ಲಿ ಇದ್ದವು. ಬೆಳಗಿನ ಆರು-ಆರುವರೆ ಸಮಯ.. ರಾತ್ರಿಯಿಡೀ ಸರದಿ ಪ್ರಕಾರ ರಣಹದ್ದಿನಂತೆ ಕಣ್ಣು ಬಿಟ್ಟುಕೊಂಡು ಕಾವಲು ಕಾಯುತ್ತಿದ್ದ ಸೆಕ್ಯೂರಿಟಿಸ಼್ ಆಕಳಿಸುತ್ತ, ಕಣ್ಣು ಮುಚ್ಚಲಾರದಂತೆ ಹರಸಾಹಸ ಪಡುತ್ತಿದ್ದರು ನಿದಿರೆ ಮಂಪರಿನಲ್ಲಿದ್ದವರನ್ನು ಯಾಮಾರಿಸುವುದು ಕಷ್ಟದ ಕೆಲಸವೇನು ಆಗಿರಲಿಲ್ಲ.  ಕುರ್ಚಿಗೊರಗಿ ಕಣ್ಣು ಮುಚ್ಚಿ ವಿಶ್ರಮಿಸುತ್ತಿದ್ದ ಹರ್ಷ ಮೆಲ್ಲಗೆ ಕಣ್ಣುಜ್ಜಿಕೊಳ್ಳುತ್ತ ಎದ್ದು ಕುಳಿತು ಸುತ್ತಲಿನ ವಾತಾವರಣ ಗಮನಿಸಿದ. ಧುಡುಗ್ಗನೇ ಎದ್ದು ಆಸ್ಪತ್ರೆಯ ಕಾರಿಡಾರ್ ಕಡೆಗೆ ಹೆಜ್ಜೆ ಹಾಕಿದ. ಅಲರ್ಟಾದ ಇಬ್ಬರು ಗಾರ್ಡ್ಗಳು ಅವನನ್ನೇ ಹಿಂಬಾಲಿಸಿದರು. ಮುಂದೆ ಮುಂದೆ ಅವಸರದಲ್ಲಿ ಹೆಜ್ಜೆ ಹಾಕುತ್ತಿದ್ದ ಹರ್ಷ ಅಕಸ್ಮಾತ್ತಾಗಿ ಫೋನ್‌ಲ್ಲಿ ವ್ಯಸ್ತನಾಗಿದ್ದ ವ್ಯಕ್ತಿಯೊಬ್ಬನಿಗೆ ಢಿಕ್ಕಿ ಹೊಡೆದು ಬಿಟ್ಟ.  ಕ್ಷಮೆ ಕೇಳಿದ್ದರೆ ವಿಷಯ ಅಲ್ಲಿಗೆ ಮುಗಿದು ಹೋಗಿರುತ್ತಿತ್ತೇನೋ.... ಆದರೆ ಹರ್ಷ ಬೇಕೆಂದೇ ತಪ್ಪೆಲ್ಲ ಎದುರು ವ್ಯಕ್ತಿಯ ಮೇಲೆ ಹಾಕಿ ಜಗಳಕ್ಕೆ ನಾಂದಿ ಹಾಡಿದ್ದ. ಚಿಕ್ಕ ವಿಷಯ ಕಲಾಪವಾಗಿ ಬೆಳೆಯಿತು. ಉಳಿದ ಸೆಕ್ಯೂರಿಟಿ ಗಾರ್ಡ್ಸ್ ಹಾಗೂ ಡೇವಿಡ್ ಗಮನ ಕೂಡ ಈಕಡೆಗೆ ಕೇಂದ್ರಿಕೃತವಾಯಿತು. ಅವರೂ ಓಡಿ ಬಂದರು.  ಕೊನೆಗೆ ನಡೆಯುತ್ತಿದ್ದ ಗಲಾಟೆಯನ್ನು ಇತ್ಯ

ನೀ ನನ್ನ ಒಲವು..❤ ಸಂಚಿಕೆ-49

ಅಥ್ರೇಯನ ನೋಡಿದ್ದೇ ಹರ್ಷನ ಕೋಪ ರೋಷ ಉಕ್ಕಿ ಬಂದಿತ್ತು. ಅವನ ಕೋಟ್ ಗಟ್ಟಿಯಾಗಿ ಹಿಡಿದೆಳೆದು ದವಡೆಗಚ್ಚಿ ಸಿಟ್ಟನ್ನು ತೀರಿಸಿಕೊಳ್ಳುವ ಮೊದಲೇ ಅಥ್ರೇಯ ಜೋರಾಗಿ ನಕ್ಕು...  "ಯಾಕೋ ಮೈ ಡಿಯರ್ ಸನ್... ಇಷ್ಟೊಂದು ಕೋಪ?? ವೆರಿ ಬ್ಯಾಡ್!! ಕೈ ಬಿಡು ಕಂದಾ.." ಪುಟ್ಟ ಮಗುವನ್ನು ರಮಿಸುವಂತೆ ನಟಿಸಿ ಕೈ ತೆಗೆಯಲು ಹೋದ. ಹರ್ಷನ ಸಿಟ್ಟು ಅತೀರೇಕವಾಗಿ ಕುತ್ತಿಗೆಗೆ ಕೈ ಬಿಗಿದವು. ಅಥ್ರೇಯನ ಹಿಂದಿದ್ದ ಅವನ ರೌಡಿ ಬಳಗ ಧಾವಿಸಿ ಬಂದು ಹರ್ಷನನ್ನ ದೂರ ಎಳೆದರು. "ಅಂದರೆ.. ಮೀಟಿಂಗ್ ನಲ್ಲಿ ನಮ್ಮ ಡ್ಯುಪ್ಲಿಕೇಟ್  ಸಂಕಲ್ಪ್ ಗೆ ಎಲ್ಲಾ ನಿಜ ಗೊತ್ತಾಗಿದೆ ಅಂತಾಯ್ತು. " ಮಣಮಣಿಸಿದ ಅಥ್ರೇಯ. "ಥೂ.... ನಿನ್ನಂತವನನ್ನ ಅಪ್ಪ ಎಂದುಕೊಂಡು ಗೌರವದಿಂದ ನೋಡಿದ್ನಾ? ನೀನು ಹೇಳಿದ ಪ್ರತಿಯೊಂದು ಕೆಲಸವನ್ನು ಚಾಚೂ ತಪ್ಪದೇ ಪಾಲಿಸಿದ್ದೆನಾ? ಏನೋ ದ್ರೋಹ ಮಾಡಿದ್ದೇ ನಾ ನಿನಗೆ? ಯಾಕೆ ನನ್ನ ಬದುಕನ್ನು ಹೀಗೆ ಇಂಚಿಂಚಾಗಿ ಕೊಲ್ತಿದೀಯಾ? " ಹರ್ಷನ ಆವೇಶ ಮಾತಿಗಿಳಿದು ಹೀನಾಮಾನವಾಗಿ ಬೈದಿತ್ತು. "ಪ್ಚ್.. ಪ್ಚ್... ಇಷ್ಟೊಂದು ಉದ್ವೇಗ ಒಳ್ಳೆಯದಲ್ಲ ಕಂದಾ.. ಕೂಲ್....  ಇದರಲ್ಲಿ ನಿನ್ನದೂ ತಪ್ಪಿದೆ‌. ಒಂದಲ್ಲ ಎರಡು!! ನನ್ನ ಮಗನ ಹೋಲಿಕೆಯನ್ನೇ ಪಡೆದು ಹುಟ್ಟಿರೋದು ನಿನ್ನ ಮೊದಲನೇ ತಪ್ಪು. ಎರಡನೇಯದು, ಆ ರಾತ್ರಿ ನನ್ನ ವ್ಯವಹಾರದ ಬಗ್ಗೆ ಪೋಲಿಸರಿಗೆ ದೂರು ನೀಡಿದ್ದು!!" ಅಥ್ರೇಯನ ಧ್ವನಿ ಗಡುಸಾಯಿತ

ನೀ ನನ್ನ ಒಲವು..❤ ಸಂಚಿಕೆ-48

ಪ್ರಸನ್ನ ಕೋಪದಿಂದ ಆ ಅದ್ವೈತ್‌ನ ದವಡೆಗೆ ಬಾರಿಸಿ 'ಈ ಸರಿರಾತ್ರಿಯಲ್ಲಿ ಈ ರೀತಿ ಡಾಕ್ಟರ್ ವೇಷದಲ್ಲಿ ಮಾನ್ವಿ ನೋಡಲು ಯಾಕೆ ಬಂದೆ? ಯಾರು ನೀನು?' ಎಂದು ಕೇಳಿದ್ದ. ಆಗ ಅದ್ವೈತ ಕೂಲಾಗಿ.... " ರಿಲ್ಯಾಕ್ಸ್ ಡ್ಯುಡ್, ಅದನ್ನ ಹೇಳೋಕೆ ತಾನೇ ಇಷ್ಟು ದೂರ ಓಡಿಸ್ಕೊಂಡು ಬಂದಿದ್ದು, ಹೇಳ್ತೆನೆ ತಾಳು ಗುರುವೇ.." ಮಾತು ಶುರುವಿಟ್ಟ. "ನಾನು ಇಲ್ಲೇ ಭಾರತದ ಒಂದು ಪ್ರೈವೇಟ್ ಡಿಟೆಕ್ಟಿವ್‌ ಏಜೆನ್ಸಿಯಲ್ಲಿ ಕೆಲಸ ಮಾಡ್ತಿದೀನಿ. ಎರಡು ವರ್ಷಗಳ ಹಿಂದೆ ಒಂದು ಕೇಸ್ ವಿಷಯವಾಗಿ ಕೆನಡಾದ 'ರಾಯಲ್ ಜುಬ್ಲಿ' ಆಸ್ಪತ್ರೆಗೆ ಹೋಗಿದ್ದಾಗ ಮೊದಲನೇ ಸಲ ಡಾ.ಮಾನ್ವಿನಾ ಭೇಟಿಯಾಗಿದ್ದೆ. ಹಾಗೆ ಸ್ನೇಹ ಶುರುವಾಗಿತ್ತು. ಅವಳದು ಮಾತು ಕಡಿಮೆ, ನಾನೇ ಏನೇನೋ ಹೇಳ್ತಾ ಅವಳೊಂದಿಗೆ ಇರೋಕೆ ಇಷ್ಟ ಪಡ್ತಿದ್ದೆ. ನನ್ನ ಕೇಸ್ ಸಂಪೂರ್ಣವಾಗಿ ಮುಗಿದು ಹೋದ್ರು ಕೂಡ ನನಗೆ ಅವಳನ್ನ ಒಂದಿನ ನೋಡದೆ ಇರೋಕೆ ಆಗ್ತಿರಲಿಲ್ಲ. ಏನೋ ನೆಪ ಮಾಡಿಕೊಂಡು ದಿನಕ್ಕೊಮ್ಮೆ ಅವಳನ್ನ ಭೇಟಿ ಮಾಡ್ತಿದ್ದೆ. ಮಾನ್ವಿಗೆ ಅದು ಸರಿ ಬರಲಿಲ್ಲ. ಒಮ್ಮೆ ನೇರಾನೇರ ಕೇಳಿಯೇ ಬಿಟ್ಟಳು.. 'ಏನು ಲವ್ವಾ?' ಅಂತ. ನನಗೆ ಅವಳ ಬೋಲ್ಡ್ ಆ್ಯಟಿಟ್ಯುಡ್  ಮತ್ತೂ ಇಷ್ಟವಾಯ್ತು. ಮೌನವಾಗೇ ಮುಗುಳ್ನಕ್ಕಿದ್ದೆ. ಅವಳ ಬದುಕಲ್ಲಿ ಈ ಪ್ರೀತಿ ಪ್ರೇಮ ಅನ್ನೋ ಪದಗಳೆಲ್ಲ ಯಾವತ್ತೋ ಡಿಲಿಟ್ ಆಗೋಗಿವೆ. ಅವಳ ಸಲುವಾಗಿ ನನ್ನ ಸಮಯ ಹಾಳು ಮಾಡ್ಕೊಬೇಡವೆಂದು ಸಾರಾಸಗಟಾಗ

ನೀ ನನ್ನ ಒಲವು..❤ ಸಂಚಿಕೆ-47

"ಬಾಸ್, ಓ ಫೋಟೋವಾಲಿ ಲಡ್ಕಿ ಟೀಕ್ ಮೇರೆ ಸಾಮ್ನೆ ಖಡಿ ಹೇ! ಪಾಂಚ್ ಮಿನಿಟ್ ಮೆ ಉಸ್ಕಾ ಚಾಪ್ಟರ್ ಖತ್ಮ್ ಕರ್ದೂಂಗಾ ಔರ್ ಉಸ್ಕಾ ಮೊಬೈಲ್ ಆಪ್ಕೆ ಪಾಸ್ ಹೋಗಾ..!"   ಫೋನ್‌ಲ್ಲಿ ಹೀಗೆ ಗತ್ತಿನಿಂದ  ಮಾತಾಡುತ್ತಿದ್ದ, ಮುಂಬೈನ ಕುಖ್ಯಾತ ಶಾರ್ಪ್ ಶೂಟರ್, ರೆಸ್ಕೋರ್ಟ್ ಎದುರು ನಿಂತು ಕಾನ್ಸರ್ಟ್ ಗೆ ಬರುವ ಪ್ರತಿಯೊಬ್ಬರನ್ನೂ ಗಮನಿಸುತ್ತ ಮಕ್ಕಳೊಂದಿಗೆ ಬಂದ ಪರಿ ಸ್ಕಾರ್ಫ್ ಕಟ್ಟಿಕೊಂಡು ಒಳಗೆ ಬರುವುದನ್ನು ನೋಡಿ, ತುಟಿ ಕೊಂಕಿಸಿ ನಕ್ಕು ಅವಳನ್ನು ಹಿಂಬಾಲಿಸಿದ್ದ. ಒಂದು ವೇಳೆ ಹರ್ಷ ಪರಿಯ ಬಳಿ ಬರದಿದ್ದರೆ ಈಗಾಗಲೇ ಸದ್ದಿಲ್ಲದೆ ಪರಿಯ ಜೀವ ಹೋಗಿ, ಅವಳ ಮೊಬೈಲ್ ಅವನ ಕೈಸೇರಿರುತ್ತಿತ್ತೇನೋ ಆದರೆ ಯೋಜನೆ ತಲೆ ಕೆಳಗಾಗಿತ್ರು. ಸನ್ನಿವೇಶ ಪಲ್ಲಟಗೊಂಡಿತ್ತು. ಅನಿರೀಕ್ಷಿತವಾಗಿ ಹರ್ಷ ಪರಿಯ ಸನಿಹ ಬಂದು ಅವಳನ್ನು ಆಲಂಗಿಸಿದ್ದ. ಪ್ರೀತಿ ತೋಡಿಕೊಂಟಿದ್ದ. ಫ್ಲಾಶ್‌ ಲೈಟ್ಸ್ ಅವರ ಮೇಲಿದ್ದವು. ಜನರ ಗಮನ ಕೂಡ.. ಹೀಗಾಗಿ  ಶೂಸ್ನಲ್ಲಿ ಬಚ್ಚಿಟ್ಟಿದ್ದ ಗನ್ ಮತ್ತೆ ಸ್ವಸ್ಥಾನ ಸೇರಿತ್ತು. ಆತ ಸಮಯಕ್ಕಾಗಿ ಹೊಂಚು ಹಾಕಿ ಕಾಯತೊಡಗಿದ್ದ. ಆಗಲೇ ಮಾನ್ವಿ ಯಾವುದೋ ಅನಾಹುತದ ಮುನ್ಸೂಚನೆ ಸಿಕ್ಕು ಅವರಿಬ್ಬರ ಬಳಿ ಓಡಿ ಬರಲು ಹವಣಿಸಿದ್ದಳು. ಓಡಲು ಪ್ರಯತ್ನಿಸುತ್ತಿದ್ದವಳನ್ನು ಪ್ರಸನ್ನ ತಡೆ ಹಿಡಿದಿದ್ದ.  ಹರ್ಷ ಪರಿಯೆದುರು ಮಂಡಿಯೂರಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡ ಆ ಘಳಿಗೆ ಎಲ್ಲರ ಚಪ್ಪಾಳೆ ಶಿಳ್ಳೆ ಕೂಗು ಕೇಕೆಗಳ ಹರ್ಷೊದ್ಘಾ

ನೀ ನನ್ನ ಒಲವು..❤ ಸಂಚಿಕೆ-46

ರಾತ್ರಿಯಿಡೀ ಯಾವುದೋ ಕಾನನ ಪ್ರದೇಶದಲ್ಲಿ ಅರವಳಿಕೆಯ ಮಥನದಲ್ಲಿದ್ದ ಹರ್ಷ‌ ಬೆಳಿಗ್ಗೆ 9 ಗಂಟೆಗೆ ರೈ ಮ್ಯಾನ್ಷನ್ಗೆ ಮರಳಿದ್ದ. ಅವನ ನಿರೀಕ್ಷೆಯಲ್ಲಿ ಅಹೋರಾತ್ರಿ ನಿದ್ರೆಯಿಲ್ಲದೆ ಕಾದು ಕುಳಿತಿದ್ದ ರಘುನಂದನ್ ಕಣ್ಣುಗಳು ಕೋಪದಿಂದಲೋ, ನಿದ್ರಾಹೀನತೆಯಿಂದಲೋ ಕೆಂಪಡರಿದ್ದವು. ಬರುತ್ತಲೇ ಹರ್ಷನನ್ನ ಕೇಳಿದರು.. "ಇಡೀ ರಾತ್ರಿ ಎಲ್ಲಿ ಹೋಗಿದ್ದೆ? ನಿನಗಾಗಿ ಎಲ್ಲೆಲ್ಲಿ ಹುಡುಕಾಡಿದ್ದಿವಿ. ಎಷ್ಟು ಆತಂಕ ಪಟ್ಟೆವು. ಸ್ವಲ್ಪನಾದ್ರೂ ಜವಾಬ್ದಾರಿ ಇದೆಯಾ ನಿನಗೆ? ಫೋನ್ ಬೇರೆ ಸ್ವಿಚಾಫ್ ಮಾಡ್ಕೊಂಡಿದೀಯಾ! ಏನಿತ್ತು ಅಂತಹ ಘನಂದಾರಿ ಕೆಲಸ ನಿನಗೆ? ನಿನ್ನ ತಂದೆ ಈಗಾಗಲೇ ಹತ್ತಿಪ್ಪತ್ತು ಬಾರಿ ಕಾಲ್ ಮಾಡಿ ವಿಚಾರಿಸಿದ್ರು... ಏನಂತ ಉತ್ತರ ಕೊಡೋದು ನಾನು ನನ್ನ ಮಿತ್ರನಿಗೆ?" ಅವರ ಪ್ರಶ್ನೆಗೆ ಉತ್ತರಿಸುವ ಅಗತ್ಯವೇ ಇಲ್ಲವೆಂಬಂತೆ ಹರ್ಷ ಮುಂದೆ ನಡೆದಿದ್ದ "ಸಂಕಲ್ಪ್..,. ಮೈ ಮೇಲೆ ಪ್ರಜ್ಞೆ ಇದೆ ತಾನೇ?? " ಮತ್ತೆ ಕಿರುಚಿದರು ಗಡುಸಾಗಿ. ಮನೆಯ ಆಳು ಕಾಳು ಸದಸ್ಯರು ಮೂಕ ಪ್ರೇಕ್ಷಕರಾಗಿ ಬೆಚ್ಚಿ ನೋಡುತ್ತ ನಿಂತಿದ್ದರು.ಆ ಸಮಯಕ್ಕೆ ಸರಿಯಾಗಿ ಮಾನ್ವಿ ಮತ್ತು ಇತರರು ಅಲ್ಲಿಗೆ ಬಂದರು. ಅವರ ಕೂಗಿಗೆ ನಿಂತು ಹಿಂತಿರುಗಿ ನೋಡಿದವನ ಎದುರಿಗೆ ಅವತ್ತಿನ ದಿನಪತ್ರಿಕೆ ಮತ್ತು ಜೊತೆಗಿದ್ದ ಪಾಂಪ್ಲೆಟ್ ಜೋರಾಗಿ ಬಿಸುಟಿ.... " ಏನಿದು ಹೊಸ ದೊಂಬರಾಟ? ಮ್ಯುಸಿಕ್ ಕಾನ್ಸರ್ಟ್ ಅಂತೆ, ಮೈ ಫುಟ್!! ಇದನ್ನ ಅನೌನ್