ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕಥೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕೊಲ್ಲುವವನಿಗಿಂತ ಕಾಯುವವನು ದೊಡ್ಡವನೇ?!

ಎಂತಹ ಬರಸಿಡಿಲ ಕಷ್ಟದ ನಡುವೆಯೂ ಆಕೆಯದು ಅಚಲ ನಂಬಿಕೆ. ಬತ್ತದ ಭಕ್ತಿಯ ಪರಾಕಾಷ್ಠೆ‌‌.  ದೇವರ ಸಾನಿಧ್ಯಕ್ಕೆ ಹಾತೊರೆಯುತ್ತಿತ್ತು ಅವಳ ಮನಸ್ಸು. ಕುಳಿತರೂ ನಿಂತರೂ ಮಲಗಿದರೂ ನಡೆದಾಡಿದರೂ ಮಾತಿಗೂ ಮೊದಲು ದೇವರ ಹೆಸರೊಂದು ಅವಳ ಬಾಯಲ್ಲಿ ಸದಾಕಾಲವೂ ಉಲಿದಾಡುತ್ತಿತ್ತು. ಆಕೆ ಅಷ್ಟೇನೂ ಸ್ಥಿತಿವಂತಳಲ್ಲ‌. ಹುಟ್ಟಿದಾಗಿನಿಂದ ಕಂಡದ್ದು ಕಡುಬಡತನ‌‌. ಹಾಸುವುದಕ್ಕಿದ್ದರೆ ಹೊದೆಯಲಿಕ್ಕಿಲ್ಲ, ಹೊದ್ದರೆ ಹಾಸಲಿಕ್ಕಿಲ್ಲ.  ಅಪ್ಪ ಅಮ್ಮ ಅವರಿವರ ಹೊಲದಲ್ಲಿ ಬಿತ್ತನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಊಟಕ್ಕೆ ಒಂದು ತುತ್ತು ಕಡಿಮೆಯಾದರೂ ಸರಿ ದೇವರ ಮುಂದಿನ ದೀಪವನ್ನು ನಂದಲು ಬಿಡುತ್ತಿರಲಿಲ್ಲ ಅವಳ ಅಮ್ಮ‌. ಪಿಳಿಪಿಳಿ ಕಣ್ಣಲ್ಲಿ ಅಮ್ಮ ದೀಪ ಹಚ್ಚುವುದನ್ನು ನೋಡುತ್ತಾ 'ಅವ್ವಾ.. ನೀ ದೇವರ ಮುಂದ ದೀಪ ಯಾಕ್ ಹಚ್ತಿ ದಿನಾ' ಎಂದು ಕೇಳಿದಳು  'ದೇವರು ಎಲ್ಲಿಲ್ಲ ಹೇಳು? ಎಲ್ಲಾ ಕಡೆಗೂ ಅದಾನ. ಆದರೂ ದೇವರು ಅದಾನ ಅನ್ನಾಕ ಜೀವಂತ ಸಾಕ್ಷಿ ಈ ದೀಪ. ಇದು ಹೆಂಗ ಕತ್ತಲಾ ಅಳಿಸಿ ಬೆಳಕ ಚೆಲ್ಲತ್ತಲಾ ಹಂಗೇ ದೇವರು ನಮ್ಮ ಜೀವನದಾಗಿನ ಕಷ್ಟ ಎಲ್ಲಾ ಕಳಿದು ಹೊಸ ಬದುಕು ಕೊಡ್ತಾನ. ನೆನಪಿಟ್ಕೋ ದೇವರ ಮ್ಯಾಲಿನ ನಂಬಿಕಿ ಯಾವತ್ತೂ ಕಳ್ಕೋಬ್ಯಾಡ"  ಅಮ್ಮ ಹೇಳಿದ ಮಾತು ಆ ಪುಟ್ಟ ಗಂಗಮ್ಮಳ ಮನದಲ್ಲಿ ಗಾಢವಾಗಿ ಪ್ರಭಾವ ಬೀರಿತು. ಅದೇ ಸಂಜೆಯ ವೇಳೆ ಗಂಗಮ್ಮಳ ತಾಯಿ ಹೊಲದ ಕೆಲಸ ಮುಗಿಸಿ ಮನೆಗೆ ಬಂದು ಸುಸ್ತಾಗಿ ಜಗಲಿಯ ಮೇಲೆ ಕುಳಿತಿದ್ದಳು. ...

ಪರಿಭ್ರಮಣ

ಜಿಟಿ ಜಿಟಿ ಮಳೆಯಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದೆ. ಅವತ್ತು ಬೆಳಗ್ಗೆ ಏಳೋದು ಸ್ವಲ್ಪ ತಡವಾದ ಕಾರಣ ಮೊದಲನೇ ಬಸ್ ಮಿಸ್ ಆಗಿತ್ತು. ಮುಂದಿನ ಬಸ್ ಬರೋವರ್ಗು ಕಾಯ್ಲೇ ಬೇಕು. ತಡವಾಗಿ ಹೋಗಿದ್ದಕ್ಕೆ ಭೂತದ ಬಾಯಿಂದ ಸಹಸ್ರಾರ್ಚನೆ ಬೇರೆ ಕೇಳಬೇಕು. ಯಾಕ್ ಬೇಕು ಈ ಕೆಲಸ ಸುಮ್ನೆ ಚೆನ್ನಾಗಿರೋ ಹುಡುಗನ್ನ ಮದುವೆ ಆಗಿ ಸೆಟ್ಲ್ ಆಗ್ಬಾರ್ದೆನೋ ಅನ್ನೋ ಅಮ್ಮನ ಮಾತು ನೆನಪಾಯ್ತು. ಮದುವೆ ಆದ್ರೆ ಕೆಲಸಾನೇ ಇರಲ್ವ ಅಲ್ಲಿಯೂ ಜವಾಬ್ದಾರಿ ಹೇಗಲೇರಿದ ಶನಿ ಹಾಗೆ ಗಂಡನ ಸಮಾನವಾಗಿ ದುಡಿದ್ರು ಮನೆಗೆಲಸ ಹಗುರ ಅನ್ನೋ ಹಗುರವಾದ ಮಾತು ಸಂಬಳವಿಲ್ಲದ ಜೀತ, ಕನಿಷ್ಟ ಹೊಗಳಿಕೆ ಇಲ್ಲದ ಪಟ್ಟಾಭಿಷೇಕ, ಆದ್ರೆ ನಾನು ಮದುವೆಯಿಂದ ಮಾರು ದೂರ ಹೋಗೋದು ಇದಕ್ಕಲ್ಲ, ಕಾಯ್ತಿದ್ದೆ ಅವನಿಗೋಸ್ಕರ.. ಅವನಿ.. ಅವನಿ.. ಸಂಧ್ಯಾ ಕೂಗಿದ ಧ್ವನಿಗೆ ಇಡೀ ಬಸ್ ಸ್ಟ್ಯಾಂಡ್ ನಮ್ ಕಡೆ ತಿರುಗಿ ನೋಡ್ತಿತ್ತು. ಯಪ್ಪಾ ಏನ್ ಬಾಯಿನೆ ನಿಂದು!! ಲೌಡ್ ಸ್ಪೀಕರ್ ಬೇಡ, ನೀನಿದ್ರೆ ಮುಗಿತು ಅಂದೆ. "ಓಹ್ ನಿನ್ ಮದ್ವೆಲಿ ಆರ್ಕೆಸ್ಟ್ರಾ ಕರಿಸೋ ಬದ್ಲು ನಂಗೇ ಆರ್ಡರ್ ಕೊಡು ನಾ ಹಾಡ್ತಿನಿ" "ಹ್ಮೂ..ನಿನ್ನ ಹಾಡು ಕೇಳಿ ಜನ ಊಟಾ ಮಾಡದೆ ಮುಯ್ಯಿ ಕೊಟ್ಟು ಹೊಗ್ತಾರೆ ಅಷ್ಟೇ" "ಅದ್ಯಾಕೆ ಊಟಾ ಮಾಡ್ದೆ ಮುಯ್ಯಿ ಕೊಡ್ತಾರೆ" " ನಿನ್ನ ಹಾಡು ನಿಲ್ಲಿಸು ತಾಯೇ ಅಂತಾ.!!" ನಕ್ಕೆ. ಅವಳು ಮುಖ ಗಂಟು ಹಾಕ್ಕೊಂಡ್ಳು ನಾನು ರಮಿಸೋಕೆ ಹೋಗಲಿಲ್ಲ. ಗೊತ್...

ಅನೂಹ್ಯ

ಅನೂಹ್ಯ ಬದುಕಿನ ದಾರಿಯಲ್ಲಿ ಅಚಾನಕ್ಕಾಗಿ ಸಿಕ್ಕ ಅನಾಮಿಕನೊಬ್ಬ ಹೇಳದೆ ಕೇಳದೆ ಮನಸ್ಸು ದೋಚಿಬಿಟ್ಟಿದ್ದ. ನನಗೆ ಅದರ ಪರಿವು ಇರಲಿಲ್ಲ. ನಿದ್ರೆಯಿಲ್ಲದೆ ಕಳೆದ ಇರುಳುಗಳಲ್ಲಿ ಇಣುಕಿ ಕಾಡುವ ಅವನ ನೆನಪುಗಳು ಸಹ ನನಗೆ ಇಡೀ ದಿನದ ದಿನಚರಿಯೆಂದೇ ಭಾಸವಾಗುತ್ತಿತ್ತು. ಬಹುಶಃ ಅವನಿಗೂ ಇದರ ಕಲ್ಪನೆ ಇರಲಿಲ್ಲವೇನೋ!  ನಾನು ಮಾತ್ರ ಪ್ರತಿದಿನ ಹೊಸತೊಂದು ಕನಸುಗಳ ಪೊಣಿಸುತ್ತಲೇ ಇದ್ದೆ!  ಹೀಗೊಂದು ದಿನ ಅವನು ನನ್ನೆದುರು ಮೊಣಕಾಲುರಿ ಕೈ ಚಾಚಿ ನನ್ನ ಪ್ರೀತಿಗಾಗಿ ಹಂಬಲಿಸಬಹುದೇ?!  ಹೀಗೊಮ್ನೆ ಅವನು ನನ್ನ ಕಣ್ಣಲ್ಲಿ ಕಣ್ಣಿಟ್ಟು ತನ್ನ ಪ್ರೀತಿಯನ್ನು ಮನಸಾರೆ ಹೇಳಬಹುದೇ?! ಎಂದೆಲ್ಲಾ ಕನಸು ಕಾಣುತ್ತಿದ್ದೆ. ನಮ್ಮ ಬದುಕು ನಾವು ಅಂದುಕೊಂಡ ಹಾಗೆ ನಡೆದು ಹೋಗುವಂತಿದ್ದರೆ ವಿಧಿಗೆ ಕೆಲಸವಿಲ್ಲದೆ ನಿರುದ್ಯೋಗಿಯಾಗಿ ಇಲ್ಲೆ ಎಲ್ಲೋ ಭೂಮಿ ಮೇಲೆ ಕೆಲಸಕ್ಕಾಗಿ ಅಲೆಯುತ್ತಿತ್ತೇನೋ ಅಲ್ವಾ.. ಬಹಳ ದಿನಗಳ ಕಠಿಣ ಪರಿಶ್ರಮದ ನಂತರ ಸಿಕ್ಕ ಒಂದು ಒಳ್ಳೆಯ ಅವಕಾಶವನ್ನು ಸಾಧನೆಯ ಮೆಟ್ಟಿಲಾಗಿ ಮಾಡಿಕೊಳ್ಳುವ ಗುರಿಯಿಟ್ಟುಕೊಂಡು ಆ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದೆ. ನಮ್ಮ ಟೀಮ್ ನಲ್ಲಿ ಇದ್ದದ್ದು ಒಟ್ಟು ಏಳು ಜನರು. ನಾಲ್ಕು ಜನ ಹುಡುಗರು, ಮೂರು ಜನ ಹುಡುಗಿಯರು. ಒಂದೇ ಮಾತಿನಲ್ಲಿ ಹೇಳುವುದಾದರೆ ಎಲ್ಲರೂ ಯುವಜನಾಂಗದವರೇ. ಟೀಮ್ ಲೀಡರ್ ಒಬ್ಬನನ್ನು ಹೊರತು ಪಡಿಸಿ ಉಳಿದ ಎಲ್ಲರೂ ತುಂಬಾ ಫ್ರೆಂಡ್ಲಿಯಾಗಿದ್ದರು. ಒಬ್ಬರಿಗೊಬ್ಬರು ಪರ...