ಅವತ್ತು ಫ್ರೆಂಡ್ ಶಿಪ್ ಡೇ ಇಡೀ ಕಾಲೇಜ್ ಸ್ನೇಹದ ಕಡಲಲ್ಲಿ ಮಿಂದೆಳುತಿತ್ತು. ಎಲ್ಲರೂ ಒಬ್ಬರ ಕೈಗೊಬ್ಬರು ಬ್ಯಾಂಡ್ ಕಟ್ಟುತ್ತಾ ಉಡುಗೊರೆ ವಿನಿಮಯ ಮಾಡಿಕೊಳ್ಳುವ ಭರದಲ್ಲಿದ್ದರು. ನನ್ನ ಹೊರತು, ಕಾರಿಡಾರ್ ನ ಒಂದು ಮೂಲೆಯಲ್ಲಿ ಒಬ್ಬಳೇ ಕೂತು ಗೋಡೆಗೆ ತಲೆಯಾನಿಸಿ ನಡೆಯುತ್ತಿದ್ದ ಸಂಭ್ರಮವನ್ನು ಮನಸ್ಸಿಲ್ಲದ ಮನಸ್ಸಿನಿಂದ ನೋಡುತ್ತಾ ಕುಳಿತಿದ್ದೆ. ನನಗ್ಯಾರು ಫ್ರೆಂಡ್ಸ್ ಇಲ್ಲ ಅಂತಲ್ಲ, ಇದ್ದ ಒಬ್ಬ ಸ್ನೇಹಿತನ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದೆ. ಅವನಿಲ್ಲದೆ ಎಲ್ಲ ಸಂಭ್ರಮಗಳು ಶೂನ್ಯವಾಗಿ, ನನಗೆ ನಾನೇ ಅಪರಿಚಿತಳೆನ್ನುವಷ್ಟು ಒಂಟಿತನ. ಬಾಹ್ಯ ಪ್ರಪಂಚಕ್ಕೆ ಕಣ್ಣು ತೆರೆದಿದ್ದವು, ಅಂತರಂಗದಲ್ಲಿ ನೆನಪುಗಳ ಮೆರವಣಿಗೆ ನಡೆದಿತ್ತು. ನನಗಿನ್ನು ನೆನಪಿದೆ ಅವತ್ತು ಬೋರ್ಡಿಂಗ್ ಸ್ಕೂಲ್ ನಲ್ಲಿ ನನ್ನ ಮೊದಲ ದಿನ. ಯಾರೊಬ್ಬರೂ ಪರಿಚಯವಿರಲಿಲ್ಲ. ಅಪರಿಚಿತರ ಮಧ್ಯೆ ವ್ಯಾಸಂಗ ಮುಂದುವರಿಸಬೇಕಿತ್ತು. 7 ನೇ ತರಗತಿವರೆಗೂ ಸ್ವಚ್ಛಂದವಾಗಿ ಹಾರಾಡಿಕೊಂಡು ಊಟ ಪಾಠ ಮಾಡಿಕೊಂಡಿದ್ದವಳಿಗೆ ಪಂಜರದಲ್ಲಿ ಹಾಕಿದಂತೆ ಅನಿಸಿದ್ದು ಸುಳ್ಳಲ್ಲ. ನನಗೆ ಬೋರ್ಡಿಂಗ್ ಹೋಗೋಕೆ ಇಷ್ಟ ಇಲ್ಲ ಅಂತ ಅಪ್ಪ-ಅಮ್ಮನ್ನ ಕೇಳ್ಕೊಂಡು ಸಾಕಾಗಿತ್ತು. ಆದರೆ ಅವರು ಕೇಳಬೇಕಲ್ಲ, "ಇಲ್ಲೇ ಇದ್ರೆ ಮುದ್ದಿನಿಂದ ಹಾಳಾಗೋಗ್ತಿಯಾ ಇಂಡಿಪೆಂಡೆಂಟ್ ಆಗೋದ್ಯಾವಾಗ ಅಂತ.. ಅಲ್ಲಿ ನಿನ್ನ ಹಾಗೆ ಎಷ್ಟೋ ಜನ ಮಕ್ಕಳು ಬಂದಿರ್ತಾ...
ಆಗಾಗ ಮನದಲ್ಲಿ ಪುಟಿಯುವ ಭಾವನೆಗಳಿಗೆ ಅಕ್ಷರಗಳ ಬಣ್ಣ ಬಳಿಯುವ ಹವ್ಯಾಸಿಯ ಪದಗಳ ಪಯಣ..