ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನೀಳ್ಗತೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪ್ರಕ್ಷುಬ್ಧತೆ ಭಾಗ-||

ಪ್ರಕ್ಷುಬ್ಧತೆ - || #file MY ❤ [ ಹರಿಯುವ ನದಿಯು ಕೇಳಲಾರದು ಶರಧಿಯ ದಾರಿಯನ್ನು, ಹುಟ್ಟುವ ಪ್ರೀತಿಯು ಹಾಗೆ ಕಾರಣ ಹೇಳದೆ, ಅನುಮತಿ ಪಡೆಯದೆ ಹೃದಯದ ಗರ್ಭದಲ್ಲಿ ಚಿಗುರೊಡೆಯುವುದು, ಆರಂಭ ಹೇಗೆಂದು ಖಚಿತವಾಗಿ ಹೇಳಲಾಗದು ಆದರೆ ಜೊತೆಯಾದ ಸಂಗಾತಿಯ ಉಸಿರು ಸಹ ತಂಗಾಳಿಯಂತೆ ಭಾವಿಸುವಷ್ಟು ಗಾಢವಾಗಿ ಜೀವದ ಅಣುವಣುವಲ್ಲಿ ಬೆರೆತು ಹೋಗುವುದು. ನನಗೂ ಹಾಗೆ ಆಗಿತ್ತಲ್ಲವೇ ಯಾವುದೋ ಮುಸ್ಸಂಜೆ ಸಮಯದಲ್ಲಿ ಬೆಟ್ಟದ ಮೇಲೆ ಪ್ರಶಾಂತವಾಗಿ ಕುಳಿತಾಗ ಕಂಡಿದ್ದಳವಳು ಅವಳ ಮುಗ್ಧ ನೋಟ ಎದೆಗೆ ನೇರ ದಾಳಿ ಮಾಡಿದಂತಿತ್ತು. ಒಂದೇ ಕ್ಷಣ ಅವಳನ್ನ ನೋಡಿದ್ದು ಆದರೆ ನನ್ನ ಮುಖವನ್ನೇ ಮರೆಯುವಷ್ಟರ ಮಟ್ಟಿಗೆ ಮೋಡಿ ಮಾಡಿದ ಹುಡುಗಿಯವಳು! ಮತ್ತೆ ಮತ್ತೆ ನೋಡಬೇಕಿನಿಸುವ ಮನದ ಹಠಕ್ಕೆ ಕಟ್ಟು ಬಿದ್ದು ಪ್ರತಿದಿನ ಅದೇ ಸಮಯ ಅದೇ ಜಾಗಕ್ಕೆ ಹೋಗಿ ಕಾದು ಕೂರಲು ಶುರು ಮಾಡಿದ್ದೆ. ಆಫೀಸ್ ನಿಂದ ಬರುವಾಗ ದಾರಿಯಲ್ಲಿ ಬೆಟ್ಟದ ಮೇಲಿನ ದೇವಸ್ಥಾನದ ಕಟ್ಟೆಗೆ ಕೂತು ಸೂರ್ಯಾಸ್ತ ನೋಡುವುದೆಂದರೆ ನನಗೆ ತುಂಬಾ ಖುಷಿ. ಆ ದಿನಗಳಲ್ಲಿ ಅದು ನನ್ನ ದಿನಚರಿಯ ಮುಖ್ಯ ಭಾಗವಾಗಿತ್ತು. ಆದರೆ ಅವತ್ತಿನ ಸೂರ್ಯಾಸ್ತ ಎಂದಿಗಿಂತ ವಿಶೇಷವಾಗಿತ್ತು. ಕಾರಣ ಅವಳನ್ನ ಮೊದಲ ಬಾರಿ ನೋಡಿದೆ. ಹುಡುಗಿಯರ ಗುಂಪೊಂದು ದೇವಸ್ಥಾನಕ್ಕೆ ಆಗಮಿಸಿತ್ತು. ಆ ಗುಂಪಲ್ಲಿ ಅವಳೂ ಒಬ್ಬಳು. ನನ್ನ ಕಠೋರ ಹೃದಯ ಅವಳ ಕಡೆಗೆ ಆಕರ್ಷಿತವಾಗಲು ಕಾರಣ ಬಹುಶಃ ವಟವಟ ಮಾತಾಡುವ ಹುಡುಗಿಯರ ಗುಂಪಿನ ನಡ...

ಪ್ರಕ್ಷುಬ್ಧತೆ

ಈ ಸಂಜೆ ಏಕೆ ಜಾರುತಿದೆ..ಸದ್ದಿಲ್ಲದಂತೆ ಸಾಗುತಿದೆ.. ಹಿತವಾದ ಹಾಡನ್ನು ಗುನುಗುತ್ತ ಸ್ನಾನ ಮಾಡುತ್ತಿದ್ದ ಮಗನನ್ನು ಅನ್ನಪೂರ್ಣಮ್ಮನವರು ಕೂಗಿ ಹೇಳಿದರು "ವಿಶ್ವಾ..ನಾಳೆ ಅಂಬುಜಾ ಅತ್ತೆ ಮಗಳು ದಿಪ್ತಿ ಮದುವೆ ಇದೆ ಕಣೋ ನಾನು ನಿಮ್ಮಪ್ಪಾಜಿ ಇವತ್ತು ಮಧ್ಯಾಹ್ನ ಹೊರಡ್ತಾ ಇದೀವಿ. ನಿಂಗೆ ರಾತ್ರಿ ಅಡಿಗೆನೂ ರೇಡಿ ಮಾಡಿ ಫ್ರೀಜ್ ನಲ್ಲಿ ಇಟ್ಟಿದೀನಿ, ಬಿಸಿ ಮಾಡ್ಕೊಂಡು ತಿನ್ನು, ಆಚೆ ಎಲ್ಲೂ ತಿನ್ನಕ್ಕೆ ಹೋಗ್ಬೇಡ, ನಿಂಗೆ ಹೊರಗಿನ ಊಟಾ ಒಗ್ಗಲ್ಲ! ನೀನೂ ನಾಳೆ ಬೆಳಿಗ್ಗೆನೇ ಮದುವೆಗೆ ಬಂದ್ಬಿಡು ಆಯ್ತಾ." "ಅಮ್ಮಾss.. ಎಷ್ಟು ಸಲ ಹೇಳೋದು, ನಂಗೆ ಈ ಮದುವೆ, ಫಂಕ್ಷನ್ ಅಂದ್ರೆ ಆಗಲ್ಲ ಅಂತ. ನೀನು ಅಪ್ಪ ಹೋಗ್ಬನ್ನಿ ನಾನಂತೂ ಬರಲ್ಲ.. ಬರಲ್ಲ ಅಂದ್ರೆ ಬರಲ್ಲ ಅಷ್ಟೇ!" ಖಡಾಖಂಡಿತವಾಗಿ ಹೇಳಿದ ವಿಶ್ವಾಸ್. ಲೋ ಮಗನೇ ನೀನು ಮೊಂಡು ಅಂದ್ರೆ ನಿಮ್ಮಮ್ಮ ನಾನು ಜಗಮೊಂಡು, ನಿನ್ನ ಹೇಗೆ ಕರ್ಸಿಕೊಳ್ಳೊದು ಅಂತ ನಂಗೊತ್ತಿಲ್ವ, ಅಂದುಕೊಂಡು ಮನಸ್ಸಲ್ಲೇ ನಕ್ಕರು ಅನ್ನಪೂರ್ಣಮ್ಮ.                     ******* ಆಫೀಸಿನಿಂದ ಬಂದವನೇ ಬೆಡ್ ಮೇಲೆ ಮೈ ಚೆಲ್ಲಿದ ವಿಶ್ವಾಸ್. ಅಮ್ಮಾ.. ಎಂದು ಕೂಗುವಷ್ಟರಲ್ಲಿ ಬೆಳಗ್ಗೆ ಅಮ್ಮ ಹೇಳಿದ್ದು ನೆನಪಾಗಿ ಥೋ..ಮದುವೆಗೆ ಹೋಗಿದಾರಲ್ಲಾ ಎಂದುಕೊಂಡು ಸುಮ್ಮನಾದ.  ಆಗಲೇ ಫೋನ್...

ಕ್ಷಿತಿಜಾ

     ಅವತ್ತು ಫ್ರೆಂಡ್ ಶಿಪ್ ಡೇ ಇಡೀ ಕಾಲೇಜ್ ಸ್ನೇಹದ ಕಡಲಲ್ಲಿ ಮಿಂದೆಳುತಿತ್ತು. ಎಲ್ಲರೂ ಒಬ್ಬರ ಕೈಗೊಬ್ಬರು ಬ್ಯಾಂಡ್ ಕಟ್ಟುತ್ತಾ ಉಡುಗೊರೆ ವಿನಿಮಯ ಮಾಡಿಕೊಳ್ಳುವ ಭರದಲ್ಲಿದ್ದರು. ನನ್ನ ಹೊರತು, ಕಾರಿಡಾರ್ ನ ಒಂದು ಮೂಲೆಯಲ್ಲಿ ಒಬ್ಬಳೇ ಕೂತು ಗೋಡೆಗೆ ತಲೆಯಾನಿಸಿ ನಡೆಯುತ್ತಿದ್ದ ಸಂಭ್ರಮವನ್ನು ಮನಸ್ಸಿಲ್ಲದ ಮನಸ್ಸಿನಿಂದ ನೋಡುತ್ತಾ ಕುಳಿತಿದ್ದೆ. ನನಗ್ಯಾರು ಫ್ರೆಂಡ್ಸ್ ಇಲ್ಲ ಅಂತಲ್ಲ, ಇದ್ದ ಒಬ್ಬ ಸ್ನೇಹಿತನ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದೆ. ಅವನಿಲ್ಲದೆ ಎಲ್ಲ ಸಂಭ್ರಮಗಳು ಶೂನ್ಯವಾಗಿ, ನನಗೆ ನಾನೇ ಅಪರಿಚಿತಳೆನ್ನುವಷ್ಟು ಒಂಟಿತನ‌. ಬಾಹ್ಯ ಪ್ರಪಂಚಕ್ಕೆ ಕಣ್ಣು ತೆರೆದಿದ್ದವು, ಅಂತರಂಗದಲ್ಲಿ ನೆನಪುಗಳ ಮೆರವಣಿಗೆ ನಡೆದಿತ್ತು.      ನನಗಿನ್ನು ನೆನಪಿದೆ ಅವತ್ತು ಬೋರ್ಡಿಂಗ್ ಸ್ಕೂಲ್ ನಲ್ಲಿ ನನ್ನ ಮೊದಲ ದಿನ. ಯಾರೊಬ್ಬರೂ ಪರಿಚಯವಿರಲಿಲ್ಲ. ಅಪರಿಚಿತರ ಮಧ್ಯೆ  ವ್ಯಾಸಂಗ ಮುಂದುವರಿಸಬೇಕಿತ್ತು‌. 7 ನೇ ತರಗತಿವರೆಗೂ ಸ್ವಚ್ಛಂದವಾಗಿ ಹಾರಾಡಿಕೊಂಡು ಊಟ ಪಾಠ ಮಾಡಿಕೊಂಡಿದ್ದವಳಿಗೆ ಪಂಜರದಲ್ಲಿ ಹಾಕಿದಂತೆ ಅನಿಸಿದ್ದು ಸುಳ್ಳಲ್ಲ. ನನಗೆ ಬೋರ್ಡಿಂಗ್ ಹೋಗೋಕೆ ಇಷ್ಟ ಇಲ್ಲ ಅಂತ ಅಪ್ಪ-ಅಮ್ಮನ್ನ ಕೇಳ್ಕೊಂಡು ಸಾಕಾಗಿತ್ತು. ಆದರೆ ಅವರು ಕೇಳಬೇಕಲ್ಲ, "ಇಲ್ಲೇ ಇದ್ರೆ ಮುದ್ದಿನಿಂದ ಹಾಳಾಗೋಗ್ತಿಯಾ ಇಂಡಿಪೆಂಡೆಂಟ್ ಆಗೋದ್ಯಾವಾಗ ಅಂತ.. ಅಲ್ಲಿ ನಿನ್ನ ಹಾಗೆ ಎಷ್ಟೋ ಜನ ಮಕ್ಕಳು ಬಂದಿರ್ತಾ...