ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನನ್ನದಲ್ಲದ ಏಕಾಂತದೊಳಗೊಂದು ಸುತ್ತು

ನನ್ನದಲ್ಲದ ಏಕಾಂತದೊಳಗೊಂದು ಸುತ್ತು. ಉಂಡು ತಿಂದು ಅಲೆದಾಡಿ ಗೆಳತಿಯರೊಂದಿಗೆ ಕಾಡುಹರಟೆ ಹೊಡೆಯುತ್ತ ಸಹಜವಾಗಿ ಸಾಗಿದ್ದ ಬದುಕು ಏಕಾಏಕಿ ತನ್ನ ದಿನಚರಿ ಬದಲಿಸಿದ್ದು ನೀ ಭೇಟಿಯಾಗಿ ನಿನ್ನೊಡನೆ ಸಲಿಗೆ ಅತಿಯಾದ ದಿನಗಳಲ್ಲೇ ನೋಡು.. ನನ್ನ  ಹವ್ಯಾಸಗಳು ಅಭಿರುಚಿಗಳು ಪ್ರಾಮುಖ್ಯತೆಗಳು ಬದಲಾಗಿದ್ದು ಆಗಲೇ...  ಪ್ರತಿ ಮಾತಿಗೂ ನಿನ್ನದೇ ಆಣತಿ, ಪ್ರತಿ ಆಯ್ಕೆಗೂ ನಿನ್ನದೇ ಅನುಮತಿ, ಪ್ರತಿ ಘಳಿಗೆಯೂ ನಿನ್ನದೇ ಕಲರವ ಪ್ರತಿ ಉಸಿರಿಗೂ ನಿನ್ನದೇ ಹೆಸರಿನ ಜಪ!  ನೀ ನನಗೆ ಯಾವ ಪರಿಯಲ್ಲಿ ರೂಢಿಯಾಗಿ ಬಿಟ್ಟೆದ್ದೆ ಎಂದರೆ; ನೀ ನನ್ನ ತೊರೆದು ಹೋಗುವವರೆಗೂ ನನ್ನರಿವಿಗೆ ಬಂದಿರಲಿಲ್ಲ, ನಾನು ನನ್ನ ಖುಷಿಗಳು ನಿನ್ನನ್ನೇ ಅವಲಂಬಿಸಿದ್ದಿವೆಂದು... ಕಣ್ಣ ತುದಿಯಲ್ಲೇ ಇಣುಕುವ ಪ್ರೀತಿಯನ್ನು ಬಚ್ಚಿಡುವುದಾದರೂ ಹೇಗೆ ಹೇಳು ? ಅಂಗೈಯಲ್ಲಿ ತಿದ್ದಿ ತೀಡಿದ ನಿನ್ನ ಹೆಸರಿನ ಅಕ್ಷರಗಳು ಸಹ ಒಲವು ತೋಡಿಕೊಂಡಿದ್ದಾಯಿತು. ನನ್ನ ಪ್ರತಿ ನಿವೇದನೆಗೂ ನೀನ್ನದೋ ವಿರಕ್ತ ಮೌನ. ಆಗಲೇ ಕೆಣಕಬೇಕಿತ್ತು ನಾನು ಕಾರಣ‌. ಸಮಯ ಮೀರಿತು ಗೆಳೆಯ. ಕ್ಷಮಿಸು. ಎಲ್ಲ ಮರೆಮಾಚಿದ ನೀನು ಸಂಭಾವಿತ. ನಾನೇ ಅಪರಾಧಿ.  ಮಿತಿಮೀರಿ ರೂಢಿಯಾಗುವ ಮೊದಲೇ ಯೋಚಿಸಬೇಕಿತ್ತಲ್ಲವಾ.. ಇಷ್ಟೊಂದು ಸಂತೋಷಕ್ಕೆ ಕಾರಣನಾದವನನ್ನು ಒಂದೊಮ್ಮೆ ಮರೆತೂ ಕೂಡ ಬದುಕಬಲ್ಲೇನಾ? ಎಂದು. ಸಲೀಸಾಗಿ ಮರೆತುಬಿಡಲು ನಾನು ಪ್ರೀತಿಸಿದ್ದು ಬರೀ ನಿನ್ನ ರೂಪವನ್ನೋ, ಗುಣವನ್ನೋ ಅಲ್ಲವೋ ಹುಡುಗ, ನಿನ್ನ ಆಂತರ್ಯವನ್ನು