ವಿಷಯಕ್ಕೆ ಹೋಗಿ

ನನ್ನದಲ್ಲದ ಏಕಾಂತದೊಳಗೊಂದು ಸುತ್ತು

ನನ್ನದಲ್ಲದ ಏಕಾಂತದೊಳಗೊಂದು ಸುತ್ತು.




ಉಂಡು ತಿಂದು ಅಲೆದಾಡಿ ಗೆಳತಿಯರೊಂದಿಗೆ ಕಾಡುಹರಟೆ ಹೊಡೆಯುತ್ತ ಸಹಜವಾಗಿ ಸಾಗಿದ್ದ ಬದುಕು ಏಕಾಏಕಿ ತನ್ನ ದಿನಚರಿ ಬದಲಿಸಿದ್ದು ನೀ ಭೇಟಿಯಾಗಿ ನಿನ್ನೊಡನೆ ಸಲಿಗೆ ಅತಿಯಾದ ದಿನಗಳಲ್ಲೇ ನೋಡು.. ನನ್ನ  ಹವ್ಯಾಸಗಳು ಅಭಿರುಚಿಗಳು ಪ್ರಾಮುಖ್ಯತೆಗಳು ಬದಲಾಗಿದ್ದು ಆಗಲೇ... 

ಪ್ರತಿ ಮಾತಿಗೂ ನಿನ್ನದೇ ಆಣತಿ, ಪ್ರತಿ ಆಯ್ಕೆಗೂ ನಿನ್ನದೇ ಅನುಮತಿ, ಪ್ರತಿ ಘಳಿಗೆಯೂ ನಿನ್ನದೇ ಕಲರವ ಪ್ರತಿ ಉಸಿರಿಗೂ ನಿನ್ನದೇ ಹೆಸರಿನ ಜಪ!

 ನೀ ನನಗೆ ಯಾವ ಪರಿಯಲ್ಲಿ ರೂಢಿಯಾಗಿ ಬಿಟ್ಟೆದ್ದೆ ಎಂದರೆ; ನೀ ನನ್ನ ತೊರೆದು ಹೋಗುವವರೆಗೂ ನನ್ನರಿವಿಗೆ ಬಂದಿರಲಿಲ್ಲ, ನಾನು ನನ್ನ ಖುಷಿಗಳು ನಿನ್ನನ್ನೇ ಅವಲಂಬಿಸಿದ್ದಿವೆಂದು...


ಕಣ್ಣ ತುದಿಯಲ್ಲೇ ಇಣುಕುವ ಪ್ರೀತಿಯನ್ನು ಬಚ್ಚಿಡುವುದಾದರೂ ಹೇಗೆ ಹೇಳು ? ಅಂಗೈಯಲ್ಲಿ ತಿದ್ದಿ ತೀಡಿದ ನಿನ್ನ ಹೆಸರಿನ ಅಕ್ಷರಗಳು ಸಹ ಒಲವು ತೋಡಿಕೊಂಡಿದ್ದಾಯಿತು. ನನ್ನ ಪ್ರತಿ ನಿವೇದನೆಗೂ ನೀನ್ನದೋ ವಿರಕ್ತ ಮೌನ. ಆಗಲೇ ಕೆಣಕಬೇಕಿತ್ತು ನಾನು ಕಾರಣ‌. ಸಮಯ ಮೀರಿತು ಗೆಳೆಯ. ಕ್ಷಮಿಸು. ಎಲ್ಲ ಮರೆಮಾಚಿದ ನೀನು ಸಂಭಾವಿತ. ನಾನೇ ಅಪರಾಧಿ.


 ಮಿತಿಮೀರಿ ರೂಢಿಯಾಗುವ ಮೊದಲೇ ಯೋಚಿಸಬೇಕಿತ್ತಲ್ಲವಾ.. ಇಷ್ಟೊಂದು ಸಂತೋಷಕ್ಕೆ ಕಾರಣನಾದವನನ್ನು ಒಂದೊಮ್ಮೆ ಮರೆತೂ ಕೂಡ ಬದುಕಬಲ್ಲೇನಾ? ಎಂದು. ಸಲೀಸಾಗಿ ಮರೆತುಬಿಡಲು ನಾನು ಪ್ರೀತಿಸಿದ್ದು ಬರೀ ನಿನ್ನ ರೂಪವನ್ನೋ, ಗುಣವನ್ನೋ ಅಲ್ಲವೋ ಹುಡುಗ, ನಿನ್ನ ಆಂತರ್ಯವನ್ನು. ಅಸ್ತಿತ್ವವನ್ನು ‌. ಅಸ್ಮಿತತೆಯನ್ನು... ನೀ ಸನಿಹ ಇದ್ದರೂ ದೂರವಾದರೂ ನನಗಿನ್ನು ನೀನು ನನ್ನಷ್ಟೇ ಸ್ವಂತ ಎನ್ನುವಷ್ಟು!!


ನೀ ಬಂದು ಹೋದ ಮೇಲೆಯೂ ಹೆಚ್ಚೇನೂ ಬದಲಾಗಿಲ್ಲ ಬಿಡು ಬದುಕು.  ಊಟ ಉಪಚಾರ ಆರೈಕೆಗೇನೂ ಕೊರತೆಯಿಲ್ಲ. ಸುತ್ತಲೂ ಸದಾ ಗಿಜುಗುಡುವ ಸ್ನೇಹಿತರ ಬಳಗ. ಆಗಾಗ ಊರು ಕೇರಿ ಓಡಾಟ ಅಲೆಮಾರಿಯಂತ ಯಥಾರ್ಥ ಜೀವನ. ಬದುಕಿಗಿನ್ನೇನೂ ಬೇಕು ಹೇಳು? 


ಆದರೂ ಎಡಬಿಡದೆ ಕಾಡುವ ನಿನ್ನ ನೆನಪುಗಳ ಹಾವಳಿಗೆ ಎಂತಹ ಅಗಾಧ ನೆಮ್ಮದಿಯೂ ಸೋತು ಶರಣಾಗಿ ಹೋಗುತ್ತದೆ ನೋಡು. ನೀನಿಲ್ಲದ ಬದುಕಲ್ಲಿ ನಾನು ಕೂಡ ಬದುಕಿಲ್ಲ ಎಂದೇ ಗುಮಾನಿ. ನಗುವಿದೆ ಸಂತೋಷವಿಲ್ಲ. ಜೀವವಿದೆ ಆಸೆಗಳಿಲ್ಲ. ಶ್ವಾಸವಿದೆ ಆಕಾಂಕ್ಷೆಗಳಿಲ್ಲ.  ಆತ್ಮವಿದೆ ಅಸ್ತಿತ್ವವಿಲ್ಲ!! 

 ಈಗೀಗ ಮನಸ್ಸು ಏಕಾಂತ ಬಯಸುತ್ತದೆ. ಎಲ್ಲರ ನಡುವಲ್ಲಿಯೂ ನಿನ್ನನ್ನು ಹುಡುಕುತ್ತಲೇ ಇರುತ್ತದೆ. ನೀನೋ ಕೊನೆಯಿಲ್ಲದ ದಿಗಂತ. ಸಿಗುವುದೂ ಇಲ್ಲ. ಇಲ್ಲವಾಗುವುದೂ ಇಲ್ಲ. 

ಏಕಾಂತದಲ್ಲಿ ಕೂಡ ಒಂಟಿಯಾಗಿ ಇರಲಾಗದಂತ ಶಾಪ ಉಳಿಸಿ ಹೋಗಬೇಕಿತ್ತಾ? ಪೆನ್ನು ಪುಸ್ತಕ ನೀ ಬಿಟ್ಟ ಒಂದಷ್ಟು ಭಾವಗಳು ನನ್ನ ಹಿಂಬಾಲಿಸಿ ಬರುತ್ತವೆ. ನಿನ್ನ ಮೇಲಿರುವ ಅಪಾರ ಒಲವು ಕವಲೊಡೆದು ಸಾಹಿತ್ಯದೆಡಗೆ ವಾಲಿದಂತೆ,  ಯಾವತ್ತೂ ಬರಹದ ಗೋಜಿಗೆ ಹೋಗದ ನಾನು  ಕಾಡುವ ನೆನಪುಗಳೊಂದಿಗೆ ಜಿದ್ದಿಗೆ ಬಿದ್ದು ರೇಜಿಗೆ ಎನಿಸುವಷ್ಟು ಗೀಚುತ್ತೇನೆ. 

ಎಷ್ಟು ಬರೆದರೂ ತೃಪ್ತಿ ಎನ್ನುವುದು ಸಿಗುವುದೇ ಇಲ್ಲ! ಅದು ಬಿಡು, ನನ್ನೊಳಗಿನ ನೀನಾದರೂ ಖಾಲಿಯಾಗುತ್ತಿಯಾ? ಅದು ಆಗುವುದಿಲ್ಲವಲ್ಲೋ!!  ಬರೆದಷ್ಟು ಬರೆದಷ್ಟು ಇನ್ನೂ ಆಳವಾಗಿ ಬೇರೂರುತ್ತಿಯ. ಅತೀವವಾಗಿ ಅನುರಕ್ತನಾಗುತ್ತಿಯ ! ಮರೆತಷ್ಟು ಮತ್ತೆ ಜ್ಞಾಪಕವಾಗುತ್ತಿಯ..!

ಸಾಗರದ ಅಲೆಗಳಷ್ಟು ಕನಸು ಹೆಣೆದು ಬಿಟ್ಟವಳು ನಾನು. ನಿನ್ನ ಹೆಗಲಿಗೊರಗಿ ಒಂದೊಂದೇ ಕನಸನ್ನು ನನಸಾಗಿಸುವ ಕನಸು ಅದರಲ್ಲೊಂದು.. 

ಎಣಿಕೆ ತಪ್ಪಾಗಿ ಕಲ್ಪನೆ ಮುಗ್ಗರಿಸಿ ಎಡವಿ ಬಿದ್ದು ಬದುಕು ಮುರಾಬಟ್ಟೆಯಾದಂತಿದೆ ಹುಡುಗ...

 ತುಸು ನೀನೇ ಸಂಬಾಳಿಸಿ ಹೇಳು ಬಾ ಹೃದಯಕ್ಕೆ....
 ಹೀಗೆಲ್ಲ ನಡುರಾತ್ರಿಯ ಹೊತ್ತು ನಿದ್ರೆಗೆಟ್ಟು ಎದ್ದು ಕೂರಬೇಡವೆಂದು, ಕಲಿಸಿದ ತಟ್ಟೆಯ ಎದುರು ಸಪ್ಪೆ ಮುಖ ಹೊತ್ತು ಕಳೆದು ಹೋಗಬೇಡವೆಂದು, ವಿನಾಕಾರಣ ಕಂಬನಿಗರೆದು ನಿನ್ನ ಹೆಸರಿಗೆ ಕಳಂಕ ತರಬೇಡವೆಂದು, ನೀನಿನ್ನು ಸಿಗುವುದು ನೆನಪುಗಳಲ್ಲಿ ಮಾತ್ರ, ಮತ್ತೆಲ್ಲೂ ಹುಡುಕಬೇಡವೆಂದು, ನೀನಿನ್ನು ಇರುಳಿನಲ್ಲಿ ಕಾಣ ಸಿಗುವ ಆಕಾಶದ ಪಾಲಿನವನು. ನಿನ್ನ ಹೊಳಪಿಗೆ  ಅಡ್ಡಿಯಾಗಬೇಡವೆಂದು... ಪ್ರೀತಿಸಿಕೊಂಡ ಮಾತ್ರಕ್ಕೆ ಕೊನೆಯ ಕ್ಷಣದವರೆಗೂ ಜೊತೆಗೆ ಬಾಳಬೇಕೆಂಬ ನಿಯಮವೇನು ಇಲ್ಲವಲ್ಲ. ಸ್ವಾರ್ಥವಿಲ್ಲದ ಪ್ರೀತಿ ಎಲ್ಲಿದ್ದರೂ ಜೀವಂತವೆಂದು..


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತನ್ನ

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow

ನೀ ನನ್ನ ಒಲವು..❤ ಸಂಚಿಕೆ-52

ಪ್ಯಾರಡೈಸ್ ಗ್ಲಾಸ್ ಹೌಸ್ ಹಿಂದೊಮ್ಮೆ ಹರ್ಷನನ್ನ ಭೇಟಿಯಾಗುವ ಕನಸು ಹೊತ್ತು ಕಾಲಿಟ್ಟ ಅದೇ ಮದುವೆ ಮಂಟಪ. ಸ್ವರ್ಗವೇ ಧರೆಗಿಳಿದಂತೆ ಜಗಮಗ ಬೆಳಕು,  ಹೂವಿನ ರಾಶಿ ರಾಶಿ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ಹಿಡಿದು ಎಲ್ಲೆಡೆಯೂ  ಅಥ್ರೇಯನ ಸೆಕ್ಯೂರಿಟಿಗಳ ಗುಂಪು ಪಹರೆ ಕಾಯುತ್ತಿದ್ದರು. ರೆಡ್ ಯುನಿಫಾರ್ಮ್ ಧರಿಸಿದ ಮ್ಯಾರೇಜ್ ಮ್ಯಾನೇಜ್ಮೆಂಟ್ ಟೀಮಿನವರು ತಮ್ಮ ಕಾರ್ಯಗಳಲ್ಲಿ ನಿರತರಾಗಿ ಲವಲವಿಕೆಯಿಂದ ಓಡಾಡುತ್ತಿದ್ದರು. ಬಂಧುಗಳು ಹಾಗೂ ಆಮಂತ್ರಿತ ಗಣ್ಯರ ಹೊರತು ಒಂದು ನೊಣ ಕೂಡ ಒಳಗೆ ಬರಲು ಅವಕಾಶವಿರದಂತೆ ಬಿಗಿ ಭದ್ರತೆಯನ್ನು ವಹಿಸಲಾಗಿತ್ತು.  ಆಗರ್ಭ ಶ್ರೀಮಂತ ರಘುನಂದನ್ ಏಕಮೇವ ಸುಪುತ್ರಿಯ ಮದುವೆಗೆ ಆಯ್ದ ಗಣ್ಯಾತಿಗಣ್ಯರ ಆಗಮನವೂ ಆಗಿತ್ತು. ಸೋದರ ಸಂಬಂಧಿಗಳು ಸ್ನೇಹಿತರ ಒಡನಾಟ ಓಡಾಟ ಸಂಭ್ರಮದ ಮೆರುಗು ಹೆಚ್ಚಿಸಿತ್ತು.  ಪರಿ ಎಲ್ಲೆಡೆಗೂ ದೃಷ್ಟಿ ಹಾಯಿಸಿದಳು. ಆಡಂಬರದ ಮದುವೆ ಮಂಟಪ ಬಿಕೋ ಎನ್ನಿಸಿತ್ತು. ಅವಕಾಶಗಳು ವಿಫಲವಾದರೆ, ಮಾಡಿದ ಉಪಾಯಗಳು ಕೈ ತಪ್ಪಿದರೆ, ವಿಧಿಯ ನಿರ್ಧಾರ ಬೇರೆಯೇ ಆಗಿದ್ದರೆ ಇದೇ ಮಂಟಪದಲ್ಲಿ ಹರ್ಷ ಮಾನ್ವಿಯ ಮದುವೆ ನಿಶ್ಚಿತ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ ಹರ್ಷ ತನ್ನವನಾಗಬಹುದು. ಆದರೆ ಮಾನ್ವಿಯ ಜೀವನ?? ಅವಳ ಚಿಂತೆಯನ್ನು ಗ್ರಹಿಸಿದ ಸಂಜೀವಿನಿ ಪರಿಯ ಕೈ ಅಮುಕಿದಳು. ಎಲ್ಲ ಒಳ್ಳೆಯದೇ ಆಗುತ್ತೆ. ಭರವಸೆಯ ಸ್ಪರ್ಶವದು. ಕಣ್ಣಲ್ಲೇ ಮುಗುಳ್ನಕ್ಕಳು ಪರಿ.