ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಚಲನಚಿತ್ರ ವಿಮರ್ಶೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಚಾರ್ಲಿ

ಪ್ರೀತಿಯನ್ನು ಅತಿಯಾಗಿ ಅದಮ್ಯವಾಗಿ ಪ್ರೀತಿಸುವವರು ಅದರ ಪೂರ್ಣ-ಅಪೂರ್ಣ ಕಥೆಗಳನ್ನು ಅಪ್ಯಾಯವಾಗಿ ಪ್ರೀತಿಸುತ್ತಾರಂತೆ. ನಾನೂ ಅದೇ ಗುಂಪಿಗೆ ಸೇರಿದವಳು‌. ಅಸಂಖ್ಯ ಪ್ರೇಮಕಥೆಗಳು. ಜೀವಂತ ನಿದರ್ಶನಗಳು. ಕೆಲವು ಸುಮಧುರ ಭಾಂಧವ್ಯದಲ್ಲಿ ಬೆಸೆದರೆ, ಕೆಲವು ನಡುವಲ್ಲೇ ಸೂಜಿಮಲ್ಲಿಗೆ ಕಂಪು ಸೂಸಿ ಕೊನೆಯಾಗುವಂತವು. ಒಂದಷ್ಟು ಮಧುರ ಪ್ರಣಯ, ದುಖಃತಪ್ತ ವಿರಹ, ಆಡಂಬರದ ವಿವಾಹ, ಅನುಮಾನದಲ್ಲಿ ದಹಿಸಿ ಹೋಗುವ ಪ್ರವರ, ಸ್ಪರ್ಶದ ಅನುಭೂತಿ, ಕಿರುಬೆರಳ ವಚನ, ಒಂದು ಕುಡಿ ನೋಟ, ಪತ್ರಗಳ ಅಲೆದಾಟ, ಮುನಿಸುಗಳಲ್ಲೇ ಮೊದಲಾಗುವ ಒಲವಿನ ಪಯಣ, ಭಾವಗಳ ಸಮ್ಮಿಲನ, ವಿರಹದಲ್ಲೂ ಮುದನೀಡುವ ಕವನ-ಗಾಯನ, ಗತಜನ್ಮಗಳ ಪ್ರೇಮ ಪ್ರಕರಣ  ಹೀಗೆ ಎಲ್ಲೋ ಅಂಕುರಿಸುವ ಎಲ್ಲೋ ಶುರುವಾಗಿ ಇನ್ನೆಲ್ಲೋ ಒಂದಾಗುವ, ದೂರಾಗುವ, ದೂರಾದರೂ ಮನಸ್ಸಲ್ಲೇ ಪ್ರೀತಿಯ ನವಿರಾದ ಹೆಜ್ಜೆ ಗುರುತು ಉಳಿಸಿ ಹೋಗುವ ಪ್ರೇಮಕಥೆಗಳ ಮಧ್ಯೆ ತನ್ನದೇಯಾದ ವಿಭಿನ್ನ ಛಾಪು ಮೂಡಿಸುವಂತಹ ಚಿತ್ರ ಮಲಯಾಳಂನ "ಚಾರ್ಲಿ" (2015)  ಸಹಜವಾದ ಜೀವನವನ್ನು ಇಷ್ಟ ಪಡದೆ ಸದಾ ಅಲೆಯುವ, ಹೊಸತನವನ್ನು ಹುಡುಕುವ ಉತ್ಸಾಹಿ ತರುಣಿ  ಥೆಸ್ಸಾ ಕಥೆಯ ನಾಯಕಿ. ಶ್ರೀಮಂತ ಮನೆತನದ ಥೆಸ್ಸಾ ವೃತ್ತಿಯಲ್ಲಿ ಗ್ರಾಫಿಕ್ ಡಿಸೈನರ್. ಅಮ್ಮನ ಶಿಸ್ತು ಕಟ್ಟುಪಾಡುಗಳಿಗೆ ತದ್ವಿರುದ್ಧ ಜೀವನಶೈಲಿ ಥೆಸ್ಸಾಳದ್ದು.  ಅಮ್ಮ ತೋರಿಸುವ ಹುಡುಗನನ್ನು ಮದುವೆಯಾಗಲು ಒಪ್ಪಿಗೆ ಇರದ ಥೆಸ್ಸಾ  ಮನೆಯಿಂದ ದ...

ಗುಜಾರಿಷ್

ಲೈಫ್ ಬಹುತ್ ಛೋಟಿ ಹೇ ದೋಸ್ತೋ... ಪರ್ ದಿಲ್ ಸೇ ಜಿಯೋ ತೋ ಬಹುತ್ ಹೇ..   so go on.. break the rules, forgive quickly, love truly and never regret anything that made you smile ಹೀಗೆ ಬದುಕಿನ ಬಗ್ಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿ ತನ್ನ ಶೋತೃಗಳಿಗೆ ಬಹು ಮೆಚ್ಚಿನ RJ ಯಾಗಿದ್ದ ನಾಯಕ ಈಥನ್ ಮಾಸ್ಕರೇನಸ್. ಈಥನ್,  ಒಂದು ಕಾಲದಲ್ಲಿ ಜಗತ್ತಿನ ಪ್ರಖ್ಯಾತ ನಂಬರ್ ಒನ್ ಮ್ಯಾಜಿಶಿಯನ್! ಗಾಳಿಯಲ್ಲಿ ಹಾರುವುದು, ನೀರಿನಲ್ಲೂ ದೀಪ ಉರಿಸುವುದು, ಖಂಡ ತುಂಡ ಮಾಡಿದ ದೇಹವನ್ನು ಮತ್ತೆ ಜೋಡಿಸುವುದು ಹೀಗೆ ಅನೇಕಾನೇಕ ಚಿತ್ರ ವಿಚಿತ್ರ ಪ್ರದರ್ಶನಗಳ ಮೂಲಕ ಮನರಂಜನೆ ನೀಡಿ ಜನಮನವನ್ನು ಗೆದ್ದವನು. ಆದರೆ ಅದೇ ಮ್ಯಾಜಿಕ್ ಆತನ ಜೀವನವನ್ನು ಬದುಕಿದ್ದು ಸತ್ತಹಾಗೆ ನಿರ್ಜೀವನನ್ನಾಗಿ ಮಾಡಿಬಿಡುತ್ತದೆ. ಹೌದು ಸ್ನೇಹಿತರೇ.... ಮ್ಯಾಜಿಕ್ ಟ್ರಿಕ್ ಮಾಡುವ ಸಂಧರ್ಭದಲ್ಲಿ ನಡೆದ ಒಂದು ದುರ್ಘಟನೆಯಲ್ಲಿ ಮೇಲಿನಿಂದ ಅನಾಮತ್ತಾಗಿ ಕೆಳಗೆ ಬಿದ್ದ ಈಥನ್, ಎರಡು ವರ್ಷಗಳ ಸತತ ಚಿಕಿತ್ಸೆಯ ನಂತರ ಜೀವಂತವಾಗೇನೊ ಉಳಿಯುತ್ತಾನೆ.  ಆದರೆ ಬೆನ್ನಿನ ಮೂಳೆಗೆ ಪೆಟ್ಟಾದ ಕಾರಣ ತನ್ನ ಕೈಕಾಲು ದೇಹದ ಸಂಪೂರ್ಣ ಸ್ವಾಧೀನತೆಯನ್ನು ಕಳೆದುಕೊಳ್ಳುತ್ತಾನೆ. ಕತ್ತನ್ನು ಹೊರತುಪಡಿಸಿ ದೇಹದ ಯಾವುದೇ ಭಾಗವನ್ನು ಹೊರಳಾಡಿಸಲಾಗದ ಅಸಹಾಯಕ ಹಂತವನ್ನು ತಲುಪುತ್ತಾನೆ. ಎಷ್ಟರಮಟ್ಟಿಗೆ ಎಂದರೆ ಬಿಸಿ ತಂಪು ಯಾವುದೇ ರೀತಿಯ ಸ್ಪ...