ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರಕ್ಷುಬ್ಧತೆ ಭಾಗ-||

ಪ್ರಕ್ಷುಬ್ಧತೆ - || #file MY ❤ [ ಹರಿಯುವ ನದಿಯು ಕೇಳಲಾರದು ಶರಧಿಯ ದಾರಿಯನ್ನು, ಹುಟ್ಟುವ ಪ್ರೀತಿಯು ಹಾಗೆ ಕಾರಣ ಹೇಳದೆ, ಅನುಮತಿ ಪಡೆಯದೆ ಹೃದಯದ ಗರ್ಭದಲ್ಲಿ ಚಿಗುರೊಡೆಯುವುದು, ಆರಂಭ ಹೇಗೆಂದು ಖಚಿತವಾಗಿ ಹೇಳಲಾಗದು ಆದರೆ ಜೊತೆಯಾದ ಸಂಗಾತಿಯ ಉಸಿರು ಸಹ ತಂಗಾಳಿಯಂತೆ ಭಾವಿಸುವಷ್ಟು ಗಾಢವಾಗಿ ಜೀವದ ಅಣುವಣುವಲ್ಲಿ ಬೆರೆತು ಹೋಗುವುದು. ನನಗೂ ಹಾಗೆ ಆಗಿತ್ತಲ್ಲವೇ ಯಾವುದೋ ಮುಸ್ಸಂಜೆ ಸಮಯದಲ್ಲಿ ಬೆಟ್ಟದ ಮೇಲೆ ಪ್ರಶಾಂತವಾಗಿ ಕುಳಿತಾಗ ಕಂಡಿದ್ದಳವಳು ಅವಳ ಮುಗ್ಧ ನೋಟ ಎದೆಗೆ ನೇರ ದಾಳಿ ಮಾಡಿದಂತಿತ್ತು. ಒಂದೇ ಕ್ಷಣ ಅವಳನ್ನ ನೋಡಿದ್ದು ಆದರೆ ನನ್ನ ಮುಖವನ್ನೇ ಮರೆಯುವಷ್ಟರ ಮಟ್ಟಿಗೆ ಮೋಡಿ ಮಾಡಿದ ಹುಡುಗಿಯವಳು! ಮತ್ತೆ ಮತ್ತೆ ನೋಡಬೇಕಿನಿಸುವ ಮನದ ಹಠಕ್ಕೆ ಕಟ್ಟು ಬಿದ್ದು ಪ್ರತಿದಿನ ಅದೇ ಸಮಯ ಅದೇ ಜಾಗಕ್ಕೆ ಹೋಗಿ ಕಾದು ಕೂರಲು ಶುರು ಮಾಡಿದ್ದೆ. ಆಫೀಸ್ ನಿಂದ ಬರುವಾಗ ದಾರಿಯಲ್ಲಿ ಬೆಟ್ಟದ ಮೇಲಿನ ದೇವಸ್ಥಾನದ ಕಟ್ಟೆಗೆ ಕೂತು ಸೂರ್ಯಾಸ್ತ ನೋಡುವುದೆಂದರೆ ನನಗೆ ತುಂಬಾ ಖುಷಿ. ಆ ದಿನಗಳಲ್ಲಿ ಅದು ನನ್ನ ದಿನಚರಿಯ ಮುಖ್ಯ ಭಾಗವಾಗಿತ್ತು. ಆದರೆ ಅವತ್ತಿನ ಸೂರ್ಯಾಸ್ತ ಎಂದಿಗಿಂತ ವಿಶೇಷವಾಗಿತ್ತು. ಕಾರಣ ಅವಳನ್ನ ಮೊದಲ ಬಾರಿ ನೋಡಿದೆ. ಹುಡುಗಿಯರ ಗುಂಪೊಂದು ದೇವಸ್ಥಾನಕ್ಕೆ ಆಗಮಿಸಿತ್ತು. ಆ ಗುಂಪಲ್ಲಿ ಅವಳೂ ಒಬ್ಬಳು. ನನ್ನ ಕಠೋರ ಹೃದಯ ಅವಳ ಕಡೆಗೆ ಆಕರ್ಷಿತವಾಗಲು ಕಾರಣ ಬಹುಶಃ ವಟವಟ ಮಾತಾಡುವ ಹುಡುಗಿಯರ ಗುಂಪಿನ ನಡ

ಪ್ರಕ್ಷುಬ್ಧತೆ

ಈ ಸಂಜೆ ಏಕೆ ಜಾರುತಿದೆ..ಸದ್ದಿಲ್ಲದಂತೆ ಸಾಗುತಿದೆ.. ಹಿತವಾದ ಹಾಡನ್ನು ಗುನುಗುತ್ತ ಸ್ನಾನ ಮಾಡುತ್ತಿದ್ದ ಮಗನನ್ನು ಅನ್ನಪೂರ್ಣಮ್ಮನವರು ಕೂಗಿ ಹೇಳಿದರು "ವಿಶ್ವಾ..ನಾಳೆ ಅಂಬುಜಾ ಅತ್ತೆ ಮಗಳು ದಿಪ್ತಿ ಮದುವೆ ಇದೆ ಕಣೋ ನಾನು ನಿಮ್ಮಪ್ಪಾಜಿ ಇವತ್ತು ಮಧ್ಯಾಹ್ನ ಹೊರಡ್ತಾ ಇದೀವಿ. ನಿಂಗೆ ರಾತ್ರಿ ಅಡಿಗೆನೂ ರೇಡಿ ಮಾಡಿ ಫ್ರೀಜ್ ನಲ್ಲಿ ಇಟ್ಟಿದೀನಿ, ಬಿಸಿ ಮಾಡ್ಕೊಂಡು ತಿನ್ನು, ಆಚೆ ಎಲ್ಲೂ ತಿನ್ನಕ್ಕೆ ಹೋಗ್ಬೇಡ, ನಿಂಗೆ ಹೊರಗಿನ ಊಟಾ ಒಗ್ಗಲ್ಲ! ನೀನೂ ನಾಳೆ ಬೆಳಿಗ್ಗೆನೇ ಮದುವೆಗೆ ಬಂದ್ಬಿಡು ಆಯ್ತಾ." "ಅಮ್ಮಾss.. ಎಷ್ಟು ಸಲ ಹೇಳೋದು, ನಂಗೆ ಈ ಮದುವೆ, ಫಂಕ್ಷನ್ ಅಂದ್ರೆ ಆಗಲ್ಲ ಅಂತ. ನೀನು ಅಪ್ಪ ಹೋಗ್ಬನ್ನಿ ನಾನಂತೂ ಬರಲ್ಲ.. ಬರಲ್ಲ ಅಂದ್ರೆ ಬರಲ್ಲ ಅಷ್ಟೇ!" ಖಡಾಖಂಡಿತವಾಗಿ ಹೇಳಿದ ವಿಶ್ವಾಸ್. ಲೋ ಮಗನೇ ನೀನು ಮೊಂಡು ಅಂದ್ರೆ ನಿಮ್ಮಮ್ಮ ನಾನು ಜಗಮೊಂಡು, ನಿನ್ನ ಹೇಗೆ ಕರ್ಸಿಕೊಳ್ಳೊದು ಅಂತ ನಂಗೊತ್ತಿಲ್ವ, ಅಂದುಕೊಂಡು ಮನಸ್ಸಲ್ಲೇ ನಕ್ಕರು ಅನ್ನಪೂರ್ಣಮ್ಮ.                     ******* ಆಫೀಸಿನಿಂದ ಬಂದವನೇ ಬೆಡ್ ಮೇಲೆ ಮೈ ಚೆಲ್ಲಿದ ವಿಶ್ವಾಸ್. ಅಮ್ಮಾ.. ಎಂದು ಕೂಗುವಷ್ಟರಲ್ಲಿ ಬೆಳಗ್ಗೆ ಅಮ್ಮ ಹೇಳಿದ್ದು ನೆನಪಾಗಿ ಥೋ..ಮದುವೆಗೆ ಹೋಗಿದಾರಲ್ಲಾ ಎಂದುಕೊಂಡು ಸುಮ್ಮನಾದ.  ಆಗಲೇ ಫೋನ್ ರಿಂಗಣಿಸಿತು. ರೀಸಿವ್ ಮಾಡಿ ಹಲೋ.. ಎನ್ನಲು, "ಲೋ ವಿಶ್ವಾ ಬೇಜಾರ್ ಮಾಡ್ಕೊಬೇಡ್ವೋ ಮಧ್ಯ

ಗುಜಾರಿಷ್

ಲೈಫ್ ಬಹುತ್ ಛೋಟಿ ಹೇ ದೋಸ್ತೋ... ಪರ್ ದಿಲ್ ಸೇ ಜಿಯೋ ತೋ ಬಹುತ್ ಹೇ..   so go on.. break the rules, forgive quickly, love truly and never regret anything that made you smile ಹೀಗೆ ಬದುಕಿನ ಬಗ್ಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿ ತನ್ನ ಶೋತೃಗಳಿಗೆ ಬಹು ಮೆಚ್ಚಿನ RJ ಯಾಗಿದ್ದ ನಾಯಕ ಈಥನ್ ಮಾಸ್ಕರೇನಸ್. ಈಥನ್,  ಒಂದು ಕಾಲದಲ್ಲಿ ಜಗತ್ತಿನ ಪ್ರಖ್ಯಾತ ನಂಬರ್ ಒನ್ ಮ್ಯಾಜಿಶಿಯನ್! ಗಾಳಿಯಲ್ಲಿ ಹಾರುವುದು, ನೀರಿನಲ್ಲೂ ದೀಪ ಉರಿಸುವುದು, ಖಂಡ ತುಂಡ ಮಾಡಿದ ದೇಹವನ್ನು ಮತ್ತೆ ಜೋಡಿಸುವುದು ಹೀಗೆ ಅನೇಕಾನೇಕ ಚಿತ್ರ ವಿಚಿತ್ರ ಪ್ರದರ್ಶನಗಳ ಮೂಲಕ ಮನರಂಜನೆ ನೀಡಿ ಜನಮನವನ್ನು ಗೆದ್ದವನು. ಆದರೆ ಅದೇ ಮ್ಯಾಜಿಕ್ ಆತನ ಜೀವನವನ್ನು ಬದುಕಿದ್ದು ಸತ್ತಹಾಗೆ ನಿರ್ಜೀವನನ್ನಾಗಿ ಮಾಡಿಬಿಡುತ್ತದೆ. ಹೌದು ಸ್ನೇಹಿತರೇ.... ಮ್ಯಾಜಿಕ್ ಟ್ರಿಕ್ ಮಾಡುವ ಸಂಧರ್ಭದಲ್ಲಿ ನಡೆದ ಒಂದು ದುರ್ಘಟನೆಯಲ್ಲಿ ಮೇಲಿನಿಂದ ಅನಾಮತ್ತಾಗಿ ಕೆಳಗೆ ಬಿದ್ದ ಈಥನ್, ಎರಡು ವರ್ಷಗಳ ಸತತ ಚಿಕಿತ್ಸೆಯ ನಂತರ ಜೀವಂತವಾಗೇನೊ ಉಳಿಯುತ್ತಾನೆ.  ಆದರೆ ಬೆನ್ನಿನ ಮೂಳೆಗೆ ಪೆಟ್ಟಾದ ಕಾರಣ ತನ್ನ ಕೈಕಾಲು ದೇಹದ ಸಂಪೂರ್ಣ ಸ್ವಾಧೀನತೆಯನ್ನು ಕಳೆದುಕೊಳ್ಳುತ್ತಾನೆ. ಕತ್ತನ್ನು ಹೊರತುಪಡಿಸಿ ದೇಹದ ಯಾವುದೇ ಭಾಗವನ್ನು ಹೊರಳಾಡಿಸಲಾಗದ ಅಸಹಾಯಕ ಹಂತವನ್ನು ತಲುಪುತ್ತಾನೆ. ಎಷ್ಟರಮಟ್ಟಿಗೆ ಎಂದರೆ ಬಿಸಿ ತಂಪು ಯಾವುದೇ ರೀತಿಯ ಸ್ಪರ್ಶ ಜ್ಞಾನ ಕೂಡ ಆತನ ಚ

ಕ್ಷಿತಿಜಾ

     ಅವತ್ತು ಫ್ರೆಂಡ್ ಶಿಪ್ ಡೇ ಇಡೀ ಕಾಲೇಜ್ ಸ್ನೇಹದ ಕಡಲಲ್ಲಿ ಮಿಂದೆಳುತಿತ್ತು. ಎಲ್ಲರೂ ಒಬ್ಬರ ಕೈಗೊಬ್ಬರು ಬ್ಯಾಂಡ್ ಕಟ್ಟುತ್ತಾ ಉಡುಗೊರೆ ವಿನಿಮಯ ಮಾಡಿಕೊಳ್ಳುವ ಭರದಲ್ಲಿದ್ದರು. ನನ್ನ ಹೊರತು, ಕಾರಿಡಾರ್ ನ ಒಂದು ಮೂಲೆಯಲ್ಲಿ ಒಬ್ಬಳೇ ಕೂತು ಗೋಡೆಗೆ ತಲೆಯಾನಿಸಿ ನಡೆಯುತ್ತಿದ್ದ ಸಂಭ್ರಮವನ್ನು ಮನಸ್ಸಿಲ್ಲದ ಮನಸ್ಸಿನಿಂದ ನೋಡುತ್ತಾ ಕುಳಿತಿದ್ದೆ. ನನಗ್ಯಾರು ಫ್ರೆಂಡ್ಸ್ ಇಲ್ಲ ಅಂತಲ್ಲ, ಇದ್ದ ಒಬ್ಬ ಸ್ನೇಹಿತನ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದೆ. ಅವನಿಲ್ಲದೆ ಎಲ್ಲ ಸಂಭ್ರಮಗಳು ಶೂನ್ಯವಾಗಿ, ನನಗೆ ನಾನೇ ಅಪರಿಚಿತಳೆನ್ನುವಷ್ಟು ಒಂಟಿತನ‌. ಬಾಹ್ಯ ಪ್ರಪಂಚಕ್ಕೆ ಕಣ್ಣು ತೆರೆದಿದ್ದವು, ಅಂತರಂಗದಲ್ಲಿ ನೆನಪುಗಳ ಮೆರವಣಿಗೆ ನಡೆದಿತ್ತು.      ನನಗಿನ್ನು ನೆನಪಿದೆ ಅವತ್ತು ಬೋರ್ಡಿಂಗ್ ಸ್ಕೂಲ್ ನಲ್ಲಿ ನನ್ನ ಮೊದಲ ದಿನ. ಯಾರೊಬ್ಬರೂ ಪರಿಚಯವಿರಲಿಲ್ಲ. ಅಪರಿಚಿತರ ಮಧ್ಯೆ  ವ್ಯಾಸಂಗ ಮುಂದುವರಿಸಬೇಕಿತ್ತು‌. 7 ನೇ ತರಗತಿವರೆಗೂ ಸ್ವಚ್ಛಂದವಾಗಿ ಹಾರಾಡಿಕೊಂಡು ಊಟ ಪಾಠ ಮಾಡಿಕೊಂಡಿದ್ದವಳಿಗೆ ಪಂಜರದಲ್ಲಿ ಹಾಕಿದಂತೆ ಅನಿಸಿದ್ದು ಸುಳ್ಳಲ್ಲ. ನನಗೆ ಬೋರ್ಡಿಂಗ್ ಹೋಗೋಕೆ ಇಷ್ಟ ಇಲ್ಲ ಅಂತ ಅಪ್ಪ-ಅಮ್ಮನ್ನ ಕೇಳ್ಕೊಂಡು ಸಾಕಾಗಿತ್ತು. ಆದರೆ ಅವರು ಕೇಳಬೇಕಲ್ಲ, "ಇಲ್ಲೇ ಇದ್ರೆ ಮುದ್ದಿನಿಂದ ಹಾಳಾಗೋಗ್ತಿಯಾ ಇಂಡಿಪೆಂಡೆಂಟ್ ಆಗೋದ್ಯಾವಾಗ ಅಂತ.. ಅಲ್ಲಿ ನಿನ್ನ ಹಾಗೆ ಎಷ್ಟೋ ಜನ ಮಕ್ಕಳು ಬಂದಿರ್ತಾರೆ. ಅವರ ಜೊತೆ ಆಟ-ಪಾಟ ಎಷ್ಟು ಚೆನ್ನಾಗಿ

ಪರಿಭ್ರಮಣ

ಜಿಟಿ ಜಿಟಿ ಮಳೆಯಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದೆ. ಅವತ್ತು ಬೆಳಗ್ಗೆ ಏಳೋದು ಸ್ವಲ್ಪ ತಡವಾದ ಕಾರಣ ಮೊದಲನೇ ಬಸ್ ಮಿಸ್ ಆಗಿತ್ತು. ಮುಂದಿನ ಬಸ್ ಬರೋವರ್ಗು ಕಾಯ್ಲೇ ಬೇಕು. ತಡವಾಗಿ ಹೋಗಿದ್ದಕ್ಕೆ ಭೂತದ ಬಾಯಿಂದ ಸಹಸ್ರಾರ್ಚನೆ ಬೇರೆ ಕೇಳಬೇಕು. ಯಾಕ್ ಬೇಕು ಈ ಕೆಲಸ ಸುಮ್ನೆ ಚೆನ್ನಾಗಿರೋ ಹುಡುಗನ್ನ ಮದುವೆ ಆಗಿ ಸೆಟ್ಲ್ ಆಗ್ಬಾರ್ದೆನೋ ಅನ್ನೋ ಅಮ್ಮನ ಮಾತು ನೆನಪಾಯ್ತು. ಮದುವೆ ಆದ್ರೆ ಕೆಲಸಾನೇ ಇರಲ್ವ ಅಲ್ಲಿಯೂ ಜವಾಬ್ದಾರಿ ಹೇಗಲೇರಿದ ಶನಿ ಹಾಗೆ ಗಂಡನ ಸಮಾನವಾಗಿ ದುಡಿದ್ರು ಮನೆಗೆಲಸ ಹಗುರ ಅನ್ನೋ ಹಗುರವಾದ ಮಾತು ಸಂಬಳವಿಲ್ಲದ ಜೀತ, ಕನಿಷ್ಟ ಹೊಗಳಿಕೆ ಇಲ್ಲದ ಪಟ್ಟಾಭಿಷೇಕ, ಆದ್ರೆ ನಾನು ಮದುವೆಯಿಂದ ಮಾರು ದೂರ ಹೋಗೋದು ಇದಕ್ಕಲ್ಲ, ಕಾಯ್ತಿದ್ದೆ ಅವನಿಗೋಸ್ಕರ.. ಅವನಿ.. ಅವನಿ.. ಸಂಧ್ಯಾ ಕೂಗಿದ ಧ್ವನಿಗೆ ಇಡೀ ಬಸ್ ಸ್ಟ್ಯಾಂಡ್ ನಮ್ ಕಡೆ ತಿರುಗಿ ನೋಡ್ತಿತ್ತು. ಯಪ್ಪಾ ಏನ್ ಬಾಯಿನೆ ನಿಂದು!! ಲೌಡ್ ಸ್ಪೀಕರ್ ಬೇಡ, ನೀನಿದ್ರೆ ಮುಗಿತು ಅಂದೆ. "ಓಹ್ ನಿನ್ ಮದ್ವೆಲಿ ಆರ್ಕೆಸ್ಟ್ರಾ ಕರಿಸೋ ಬದ್ಲು ನಂಗೇ ಆರ್ಡರ್ ಕೊಡು ನಾ ಹಾಡ್ತಿನಿ" "ಹ್ಮೂ..ನಿನ್ನ ಹಾಡು ಕೇಳಿ ಜನ ಊಟಾ ಮಾಡದೆ ಮುಯ್ಯಿ ಕೊಟ್ಟು ಹೊಗ್ತಾರೆ ಅಷ್ಟೇ" "ಅದ್ಯಾಕೆ ಊಟಾ ಮಾಡ್ದೆ ಮುಯ್ಯಿ ಕೊಡ್ತಾರೆ" " ನಿನ್ನ ಹಾಡು ನಿಲ್ಲಿಸು ತಾಯೇ ಅಂತಾ.!!" ನಕ್ಕೆ. ಅವಳು ಮುಖ ಗಂಟು ಹಾಕ್ಕೊಂಡ್ಳು ನಾನು ರಮಿಸೋಕೆ ಹೋಗಲಿಲ್ಲ. ಗೊತ್