ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕಾದಂಬರಿ ಪ್ರೀತಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನೀ ನನ್ನ ಒಲವು..❤ ಸಂಚಿಕೆ-52

ಪ್ಯಾರಡೈಸ್ ಗ್ಲಾಸ್ ಹೌಸ್ ಹಿಂದೊಮ್ಮೆ ಹರ್ಷನನ್ನ ಭೇಟಿಯಾಗುವ ಕನಸು ಹೊತ್ತು ಕಾಲಿಟ್ಟ ಅದೇ ಮದುವೆ ಮಂಟಪ. ಸ್ವರ್ಗವೇ ಧರೆಗಿಳಿದಂತೆ ಜಗಮಗ ಬೆಳಕು,  ಹೂವಿನ ರಾಶಿ ರಾಶಿ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ಹಿಡಿದು ಎಲ್ಲೆಡೆಯೂ  ಅಥ್ರೇಯನ ಸೆಕ್ಯೂರಿಟಿಗಳ ಗುಂಪು ಪಹರೆ ಕಾಯುತ್ತಿದ್ದರು. ರೆಡ್ ಯುನಿಫಾರ್ಮ್ ಧರಿಸಿದ ಮ್ಯಾರೇಜ್ ಮ್ಯಾನೇಜ್ಮೆಂಟ್ ಟೀಮಿನವರು ತಮ್ಮ ಕಾರ್ಯಗಳಲ್ಲಿ ನಿರತರಾಗಿ ಲವಲವಿಕೆಯಿಂದ ಓಡಾಡುತ್ತಿದ್ದರು. ಬಂಧುಗಳು ಹಾಗೂ ಆಮಂತ್ರಿತ ಗಣ್ಯರ ಹೊರತು ಒಂದು ನೊಣ ಕೂಡ ಒಳಗೆ ಬರಲು ಅವಕಾಶವಿರದಂತೆ ಬಿಗಿ ಭದ್ರತೆಯನ್ನು ವಹಿಸಲಾಗಿತ್ತು.  ಆಗರ್ಭ ಶ್ರೀಮಂತ ರಘುನಂದನ್ ಏಕಮೇವ ಸುಪುತ್ರಿಯ ಮದುವೆಗೆ ಆಯ್ದ ಗಣ್ಯಾತಿಗಣ್ಯರ ಆಗಮನವೂ ಆಗಿತ್ತು. ಸೋದರ ಸಂಬಂಧಿಗಳು ಸ್ನೇಹಿತರ ಒಡನಾಟ ಓಡಾಟ ಸಂಭ್ರಮದ ಮೆರುಗು ಹೆಚ್ಚಿಸಿತ್ತು.  ಪರಿ ಎಲ್ಲೆಡೆಗೂ ದೃಷ್ಟಿ ಹಾಯಿಸಿದಳು. ಆಡಂಬರದ ಮದುವೆ ಮಂಟಪ ಬಿಕೋ ಎನ್ನಿಸಿತ್ತು. ಅವಕಾಶಗಳು ವಿಫಲವಾದರೆ, ಮಾಡಿದ ಉಪಾಯಗಳು ಕೈ ತಪ್ಪಿದರೆ, ವಿಧಿಯ ನಿರ್ಧಾರ ಬೇರೆಯೇ ಆಗಿದ್ದರೆ ಇದೇ ಮಂಟಪದಲ್ಲಿ ಹರ್ಷ ಮಾನ್ವಿಯ ಮದುವೆ ನಿಶ್ಚಿತ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ ಹರ್ಷ ತನ್ನವನಾಗಬಹುದು. ಆದರೆ ಮಾನ್ವಿಯ ಜೀವನ?? ಅವಳ ಚಿಂತೆಯನ್ನು ಗ್ರಹಿಸಿದ ಸಂಜೀವಿನಿ ಪರಿಯ ಕೈ ಅಮುಕಿದಳು. ಎಲ್ಲ ಒಳ್ಳೆಯದೇ ಆಗುತ್ತೆ. ಭರವಸೆಯ ಸ್ಪರ್ಶವದು. ಕಣ್ಣಲ್ಲೇ ...

ನೀ ನನ್ನ ಒಲವು..❤ ಸಂಚಿಕೆ-51

  ಆಸ್ಪತ್ರೆಯಿಂದ ಮನೆಗೆ ಬಂದ ಮಾನ್ವಿಯನ್ನು ಹೊಸ್ತಿಲಲ್ಲೇ ನಿಲ್ಲಿಸಿ ಆರತಿ ತರಲು ಹೇಳಿದರು ಅವಳ ತಾಯಿ ಮಾನಸ. ಮಿಸೆಸ್ ಅರುಣಾರ (ಅಥ್ರೇಯನ ಪತ್ನಿ) ಪ್ರಕಾರ  ಈ ಆಚರಣೆ ಸಂಪ್ರದಾಯ ಎಲ್ಲಾ ಟೈಮ್ ವೇಸ್ಟ್‌!! ಆದರೂ ಸಂಬಂಧಿ ಮನದಿಚ್ಚೆಯನುಸಾರ ಬಿಗುಮಾನದಲ್ಲಿ ತಾವು ಆರತಿಗೆ ಕೈ ಜೋಡಿಸಿದ್ದರು. ಒಳಗೆ ಬಂದ ಮಾನ್ವಿಯ ಯೋಗಕ್ಷೇಮ ವಿಚಾರಿಸಿದರು. ಕೇವಲ ಫಾರ್ಮ್ಯಾಲಿಟಿಗೆ!! ಮಾತಿನಲ್ಲಿ ಆಸಕ್ತಿಯೇ ಇರಲಿಲ್ಲ. ಅರುಣಾ ಅವರನ್ನು ಮೊದಲ ಬಾರಿಗೆ ನೋಡುತ್ತಿದ್ದಂತೆ ಅಚೇತನನಾದ ಪ್ರಸನ್ನ ಅನ್ಯಮನಸ್ಕನಾಗಿ  ಹೆಜ್ಜೆ  ಹಿಂದೆ ಹಾಕಿದ್ದ. ಯಾವುದೋ ಟ್ರಾನ್ಸ್ ನಲ್ಲಿದ್ದಂತೆ ಶ್ವಾಸಿಸುವದನ್ನು ಮರೆತು ಪಕ್ಕಕ್ಕೆ ಜರುಗಿ, ಕೆಟ್ಟ ಕನಸಿನಿಂದ ಎಚ್ಚರಗೊಂಡಂತೆ ಗಂಭೀರ ನಿಟ್ಟುಸಿರು ಬಿಟ್ಟ‌. ಅವನ ಮನಸ್ಸು ಹತೋಟಿಗೆ ಬರಲು ಕೆಲವು ಕ್ಷಣಗಳೇ ಹಿಡಿದವು. ಅವನನ್ನೇ ಗಮನಿಸುತ್ತಿದ್ದ ಪರಿಗೆ ಅವನ ಬದಲಾದ ವರ್ತನೆ ಸಂಶಯ ಹುಟ್ಟು ಹಾಕಿತು. ಹರ್ಷನ ಬಳಿ ಬಂದ ಅರುಣಾ ಅವನ ಭುಜಕ್ಕೆ ಕೈಹಾಕಿ "ಹೌ ಆರ್ ಯು ಸನ್?" ಕೇಳಿದರು. ಅವರದ್ದೇನಿದ್ದರೂ  ಜನನಿಮಿತ್ಯ ಒಂದೆರಡು ಕಳಕಳಿಯ ಮಾತುಗಳು. "ಗುಡ್ ಮಾಮ್" ಅಷ್ಟೇ ಕ್ಲುಪ್ತವಾಗಿ ಉತ್ತರಿಸಿದ  ಹರ್ಷನಿಗೆ ನಿಜವಾದ ಸಂಕಲ್ಪ್ ನ ಬಗ್ಗೆ ಕನಿಕರ ಉಂಟಾಯಿತು.  ಮಾನ್ವಿಯ ಬಳಿ ಬಂದ ಅಥ್ರೇಯ ಅವಳನ್ನು ಬಳಸಿ "ಡಿಯರ್, ನನ್ನ ಫ್ರೆಂಡ್ ರಘು,  ನಿನ್ನ ಮತ್ತು ಸಂಕಲ್ಪ್ ಮದುವೆಯನ್ನು ...

ನೀ ನನ್ನ ಒಲವು..❤ ಸಂಚಿಕೆ-50

ಹೊಸ ಹೊಸ ಕನಸು ಹೊತ್ತ ಮುಂಜಾವಿನ ಕಿರಣಗಳು ಯತಾರೀತಿ ಭೂಮಿ ಸ್ಪರ್ಶಿಸಿದವು. ಕವಲೊಡೆದ ಮನಸ್ಸಿನ ಹಾದಿಗಳು ಯಾವುದೋ ಒಂದು ತಿರುವಿನಲ್ಲಿ ಒಂದಾಗುವ ನಿರೀಕ್ಷೆಯಲ್ಲಿ ಇದ್ದವು. ಬೆಳಗಿನ ಆರು-ಆರುವರೆ ಸಮಯ.. ರಾತ್ರಿಯಿಡೀ ಸರದಿ ಪ್ರಕಾರ ರಣಹದ್ದಿನಂತೆ ಕಣ್ಣು ಬಿಟ್ಟುಕೊಂಡು ಕಾವಲು ಕಾಯುತ್ತಿದ್ದ ಸೆಕ್ಯೂರಿಟಿಸ಼್ ಆಕಳಿಸುತ್ತ, ಕಣ್ಣು ಮುಚ್ಚಲಾರದಂತೆ ಹರಸಾಹಸ ಪಡುತ್ತಿದ್ದರು ನಿದಿರೆ ಮಂಪರಿನಲ್ಲಿದ್ದವರನ್ನು ಯಾಮಾರಿಸುವುದು ಕಷ್ಟದ ಕೆಲಸವೇನು ಆಗಿರಲಿಲ್ಲ.  ಕುರ್ಚಿಗೊರಗಿ ಕಣ್ಣು ಮುಚ್ಚಿ ವಿಶ್ರಮಿಸುತ್ತಿದ್ದ ಹರ್ಷ ಮೆಲ್ಲಗೆ ಕಣ್ಣುಜ್ಜಿಕೊಳ್ಳುತ್ತ ಎದ್ದು ಕುಳಿತು ಸುತ್ತಲಿನ ವಾತಾವರಣ ಗಮನಿಸಿದ. ಧುಡುಗ್ಗನೇ ಎದ್ದು ಆಸ್ಪತ್ರೆಯ ಕಾರಿಡಾರ್ ಕಡೆಗೆ ಹೆಜ್ಜೆ ಹಾಕಿದ. ಅಲರ್ಟಾದ ಇಬ್ಬರು ಗಾರ್ಡ್ಗಳು ಅವನನ್ನೇ ಹಿಂಬಾಲಿಸಿದರು. ಮುಂದೆ ಮುಂದೆ ಅವಸರದಲ್ಲಿ ಹೆಜ್ಜೆ ಹಾಕುತ್ತಿದ್ದ ಹರ್ಷ ಅಕಸ್ಮಾತ್ತಾಗಿ ಫೋನ್‌ಲ್ಲಿ ವ್ಯಸ್ತನಾಗಿದ್ದ ವ್ಯಕ್ತಿಯೊಬ್ಬನಿಗೆ ಢಿಕ್ಕಿ ಹೊಡೆದು ಬಿಟ್ಟ.  ಕ್ಷಮೆ ಕೇಳಿದ್ದರೆ ವಿಷಯ ಅಲ್ಲಿಗೆ ಮುಗಿದು ಹೋಗಿರುತ್ತಿತ್ತೇನೋ.... ಆದರೆ ಹರ್ಷ ಬೇಕೆಂದೇ ತಪ್ಪೆಲ್ಲ ಎದುರು ವ್ಯಕ್ತಿಯ ಮೇಲೆ ಹಾಕಿ ಜಗಳಕ್ಕೆ ನಾಂದಿ ಹಾಡಿದ್ದ. ಚಿಕ್ಕ ವಿಷಯ ಕಲಾಪವಾಗಿ ಬೆಳೆಯಿತು. ಉಳಿದ ಸೆಕ್ಯೂರಿಟಿ ಗಾರ್ಡ್ಸ್ ಹಾಗೂ ಡೇವಿಡ್ ಗಮನ ಕೂಡ ಈಕಡೆಗೆ ಕೇಂದ್ರಿಕೃತವಾಯಿತು. ಅವರೂ ಓಡಿ ಬಂದರು.  ಕೊನೆಗೆ ನಡೆಯುತ್ತಿದ್ದ ಗ...

ನೀ ನನ್ನ ಒಲವು..❤ ಸಂಚಿಕೆ-49

ಅಥ್ರೇಯನ ನೋಡಿದ್ದೇ ಹರ್ಷನ ಕೋಪ ರೋಷ ಉಕ್ಕಿ ಬಂದಿತ್ತು. ಅವನ ಕೋಟ್ ಗಟ್ಟಿಯಾಗಿ ಹಿಡಿದೆಳೆದು ದವಡೆಗಚ್ಚಿ ಸಿಟ್ಟನ್ನು ತೀರಿಸಿಕೊಳ್ಳುವ ಮೊದಲೇ ಅಥ್ರೇಯ ಜೋರಾಗಿ ನಕ್ಕು...  "ಯಾಕೋ ಮೈ ಡಿಯರ್ ಸನ್... ಇಷ್ಟೊಂದು ಕೋಪ?? ವೆರಿ ಬ್ಯಾಡ್!! ಕೈ ಬಿಡು ಕಂದಾ.." ಪುಟ್ಟ ಮಗುವನ್ನು ರಮಿಸುವಂತೆ ನಟಿಸಿ ಕೈ ತೆಗೆಯಲು ಹೋದ. ಹರ್ಷನ ಸಿಟ್ಟು ಅತೀರೇಕವಾಗಿ ಕುತ್ತಿಗೆಗೆ ಕೈ ಬಿಗಿದವು. ಅಥ್ರೇಯನ ಹಿಂದಿದ್ದ ಅವನ ರೌಡಿ ಬಳಗ ಧಾವಿಸಿ ಬಂದು ಹರ್ಷನನ್ನ ದೂರ ಎಳೆದರು. "ಅಂದರೆ.. ಮೀಟಿಂಗ್ ನಲ್ಲಿ ನಮ್ಮ ಡ್ಯುಪ್ಲಿಕೇಟ್  ಸಂಕಲ್ಪ್ ಗೆ ಎಲ್ಲಾ ನಿಜ ಗೊತ್ತಾಗಿದೆ ಅಂತಾಯ್ತು. " ಮಣಮಣಿಸಿದ ಅಥ್ರೇಯ. "ಥೂ.... ನಿನ್ನಂತವನನ್ನ ಅಪ್ಪ ಎಂದುಕೊಂಡು ಗೌರವದಿಂದ ನೋಡಿದ್ನಾ? ನೀನು ಹೇಳಿದ ಪ್ರತಿಯೊಂದು ಕೆಲಸವನ್ನು ಚಾಚೂ ತಪ್ಪದೇ ಪಾಲಿಸಿದ್ದೆನಾ? ಏನೋ ದ್ರೋಹ ಮಾಡಿದ್ದೇ ನಾ ನಿನಗೆ? ಯಾಕೆ ನನ್ನ ಬದುಕನ್ನು ಹೀಗೆ ಇಂಚಿಂಚಾಗಿ ಕೊಲ್ತಿದೀಯಾ? " ಹರ್ಷನ ಆವೇಶ ಮಾತಿಗಿಳಿದು ಹೀನಾಮಾನವಾಗಿ ಬೈದಿತ್ತು. "ಪ್ಚ್.. ಪ್ಚ್... ಇಷ್ಟೊಂದು ಉದ್ವೇಗ ಒಳ್ಳೆಯದಲ್ಲ ಕಂದಾ.. ಕೂಲ್....  ಇದರಲ್ಲಿ ನಿನ್ನದೂ ತಪ್ಪಿದೆ‌. ಒಂದಲ್ಲ ಎರಡು!! ನನ್ನ ಮಗನ ಹೋಲಿಕೆಯನ್ನೇ ಪಡೆದು ಹುಟ್ಟಿರೋದು ನಿನ್ನ ಮೊದಲನೇ ತಪ್ಪು. ಎರಡನೇಯದು, ಆ ರಾತ್ರಿ ನನ್ನ ವ್ಯವಹಾರದ ಬಗ್ಗೆ ಪೋಲಿಸರಿಗೆ ದೂರು ನೀಡಿದ್ದು!!" ಅಥ್ರೇಯನ ಧ್ವನಿ ಗಡುಸಾಯಿತ...

ನೀ ನನ್ನ ಒಲವು..❤ ಸಂಚಿಕೆ-48

ಪ್ರಸನ್ನ ಕೋಪದಿಂದ ಆ ಅದ್ವೈತ್‌ನ ದವಡೆಗೆ ಬಾರಿಸಿ 'ಈ ಸರಿರಾತ್ರಿಯಲ್ಲಿ ಈ ರೀತಿ ಡಾಕ್ಟರ್ ವೇಷದಲ್ಲಿ ಮಾನ್ವಿ ನೋಡಲು ಯಾಕೆ ಬಂದೆ? ಯಾರು ನೀನು?' ಎಂದು ಕೇಳಿದ್ದ. ಆಗ ಅದ್ವೈತ ಕೂಲಾಗಿ.... " ರಿಲ್ಯಾಕ್ಸ್ ಡ್ಯುಡ್, ಅದನ್ನ ಹೇಳೋಕೆ ತಾನೇ ಇಷ್ಟು ದೂರ ಓಡಿಸ್ಕೊಂಡು ಬಂದಿದ್ದು, ಹೇಳ್ತೆನೆ ತಾಳು ಗುರುವೇ.." ಮಾತು ಶುರುವಿಟ್ಟ. "ನಾನು ಇಲ್ಲೇ ಭಾರತದ ಒಂದು ಪ್ರೈವೇಟ್ ಡಿಟೆಕ್ಟಿವ್‌ ಏಜೆನ್ಸಿಯಲ್ಲಿ ಕೆಲಸ ಮಾಡ್ತಿದೀನಿ. ಎರಡು ವರ್ಷಗಳ ಹಿಂದೆ ಒಂದು ಕೇಸ್ ವಿಷಯವಾಗಿ ಕೆನಡಾದ 'ರಾಯಲ್ ಜುಬ್ಲಿ' ಆಸ್ಪತ್ರೆಗೆ ಹೋಗಿದ್ದಾಗ ಮೊದಲನೇ ಸಲ ಡಾ.ಮಾನ್ವಿನಾ ಭೇಟಿಯಾಗಿದ್ದೆ. ಹಾಗೆ ಸ್ನೇಹ ಶುರುವಾಗಿತ್ತು. ಅವಳದು ಮಾತು ಕಡಿಮೆ, ನಾನೇ ಏನೇನೋ ಹೇಳ್ತಾ ಅವಳೊಂದಿಗೆ ಇರೋಕೆ ಇಷ್ಟ ಪಡ್ತಿದ್ದೆ. ನನ್ನ ಕೇಸ್ ಸಂಪೂರ್ಣವಾಗಿ ಮುಗಿದು ಹೋದ್ರು ಕೂಡ ನನಗೆ ಅವಳನ್ನ ಒಂದಿನ ನೋಡದೆ ಇರೋಕೆ ಆಗ್ತಿರಲಿಲ್ಲ. ಏನೋ ನೆಪ ಮಾಡಿಕೊಂಡು ದಿನಕ್ಕೊಮ್ಮೆ ಅವಳನ್ನ ಭೇಟಿ ಮಾಡ್ತಿದ್ದೆ. ಮಾನ್ವಿಗೆ ಅದು ಸರಿ ಬರಲಿಲ್ಲ. ಒಮ್ಮೆ ನೇರಾನೇರ ಕೇಳಿಯೇ ಬಿಟ್ಟಳು.. 'ಏನು ಲವ್ವಾ?' ಅಂತ. ನನಗೆ ಅವಳ ಬೋಲ್ಡ್ ಆ್ಯಟಿಟ್ಯುಡ್  ಮತ್ತೂ ಇಷ್ಟವಾಯ್ತು. ಮೌನವಾಗೇ ಮುಗುಳ್ನಕ್ಕಿದ್ದೆ. ಅವಳ ಬದುಕಲ್ಲಿ ಈ ಪ್ರೀತಿ ಪ್ರೇಮ ಅನ್ನೋ ಪದಗಳೆಲ್ಲ ಯಾವತ್ತೋ ಡಿಲಿಟ್ ಆಗೋಗಿವೆ. ಅವಳ ಸಲುವಾಗಿ ನನ್ನ ಸಮಯ ಹಾಳು ಮಾಡ್ಕೊಬೇಡವೆಂದು ಸಾರಾಸಗಟಾಗ...