ವಿಷಯಕ್ಕೆ ಹೋಗಿ

ನೀ ನನ್ನ ಒಲವು..❤ ಸಂಚಿಕೆ-30


"ಆ ಲೆಟರ್ ನಲ್ಲಿ ಏನಿತ್ತು? " ಪ್ರಸನ್ನನ ಕೈ ಹಿಡಿದು ಹೊರಗೆ ಎಳೆದುಕೊಂಡು ಬಂದ ಮಾನ್ವಿ ಕೇಳಿದಳು.

"ಆ್ಮ್ಮ... ಈ ಜನ್ಮದಲ್ಲಂತೂ ಹರ್ಷ ನಿನಗೆ ಸಿಗೋದಿಲ್ಲ. ಹೋಗಿ ನೇಣು ಹಾಕ್ಕೊಂಡು ಸಾಯಿ ಅಂತ ಬರ್ದಿತ್ತು" ಅವಳ ಕೈಯನ್ನು ಬಿಡಿಸಿಕೊಳ್ಳುತ್ತ ರೇಗಿದ. "ಅಷ್ಟೊಂದು ಆಸಕ್ತಿ ಇದ್ರೆ ನೇರವಾಗಿ ಓದಬಹುದಿತ್ತಲ್ಲ"

"ಅದು ಸಾಧ್ಯವಿಲ್ವಲ್ಲ,, ಅವನ ದೃಷ್ಟಿಯಲ್ಲಿ ಆ ಲೆಟರ್ ಬರೆದಿರೋದು ನಾನು. ನಾನೇ ಬರೆದದ್ದನ್ನ ನಾನೇ ಹೇಗೆ ಓದೋದು.. ಅವನು ಅಷ್ಟೊಂದು ಖುಷಿಯಾಗುವಂತದ್ದು ಏನಿದೆ ಅದರಲ್ಲಿ?" ಯೋಚಿಸುತ್ತ ಕೇಳಿದಳು

"ಅಂದ್ರೆ ಅದನ್ನು ನೀನು ಬರ್ದಿಲ್ವಾ??" ಅಚ್ಚರಿಗೊಂಡಂತೆ ನಟಿಸಿದ. ಮಾನ್ವಿ ಉಗುಳು ನುಂಗಿದಳು.

"ಅದೂ... ನಾನೇ ಬರೆದೆ. ಆದರೆ... ಮರ್ತೋಗಿದೆ" ತೊದಲಿದಳು.

"ನಿನಗೂ ನೆನಪಿನ ಶಕ್ತಿ ಕಡಿಮೆನಾ?? ನಾನೇನಿಲ್ಲಿ ನಿನಗೆ ಅಸಿಸ್ಟೆಂಟ್ ಕೆಲಸ ಮಾಡೋಕೆ ಬಂದಿದ್ದಿನಿ ಅನ್ಕೊಂಡಿದೀಯಾ? ಹೋಗೆಲೆ.. ಬೇಕಿದ್ದರೆ ನೀನೇ ಹೋಗಿ ಓದ್ಕೊ." ಎನ್ನುತ್ತಾ ಜಾಗಿಂಗ್ ಸೂಟ್ ಬಿಚ್ಚಿ ಕೈಯಲ್ಲಿ ಹಿಡಿದು
"ಡೇವಿಡ್, ಮೇರಾ ರೂಂ ರೆಡಿ ಹೋಗಯಾ ನಾ? ಮುಜೆ ನಹಾನಾ ಹೈ ಜಲ್ದಿ." ಸ್ಟೈಲಾಗಿ ನುಡಿದ

ಅವನೆಡೆಗೆ ತಿರಸ್ಕಾರದಿಂದ ನೋಡಿ "ಇನ್ಮುಂದೆ ನಾನು ಇಲ್ಲೇ ಇರ್ತೆನೆ. ನೋಡ್ತಿರು ಎರಡೇ ದಿನದಲ್ಲಿ ನಿನ್ನ ಇಲ್ಲಿಂದ ಸಾಗಿಹಾಕ್ದಿದ್ರೆ!!" ಎಚ್ಚರಿಸಿ, ಅಲ್ಲಿಂದ ಹೊರಟ ಮಾನ್ವಿ ಕೆಳಗೆ ಡೇವಿಡ್ ಬಳಿ ಬಂದು ಏನೋ ಕಿವಿಯುದಿದಳು.


"ಸಂಕು... ಮಾಮ್ ಕಾಲ್ ಮಾಡಿದ್ರು, ಮನೇಲಿ ಡೆಕೊರೆಷನ್ ವರ್ಕ್ ನಡಿತಿದೆಯಂತೆ. ನನಗೆ ಅಂತಹ ಗದ್ದಲದಲ್ಲಿ ಇರೋಕಾಗೊಲ್ಲ, ಸೋ.. ಟು-ಥ್ರೀ ಡೆಯ್ಸ್ ಇಲ್ಲೇ ಸ್ಟೇ ಮಾಡ್ತಿನಿ. ಆಗಬಹುದಾ?" ಹರ್ಷನ ರೂಮಿಗೆ ಬಂದ ಮಾನ್ವಿ ನುಡಿದಳು.

"ನೀನು ಇಲ್ಲಿಯೇ ಇರೋ ವಿಷಯ ನನಗೆ ಹೇಳ್ತಿದಿಯೋ? ಅಥವಾ ನನ್ನ ಹತ್ರ ಪರ್ಮಿಶನ್ ಕೇಳ್ತಿದೀಯೋ?" ಕಬೋರ್ಡ್ ನಿಂದ ಬಟ್ಟೆ ತೆಗೆದುಕೊಳ್ಳುತ್ತ ಕೇಳಿದ.

"ನಾನು ಇಲ್ಲಿರೋದು ನಿನಗೆ ಇಷ್ಟ ಇಲ್ಲಾಂದ್ರೆ ಬೇಡ ಬಿಡು. ಯಾವುದಾದರೂ ಹೋಟೆಲ್ ರೂಂ ನೋಡ್ಕೊಂಡ್ರಾಯ್ತು. ನನಗೆ ಬೇಜಾರೇನಿಲ್ಲ" ಬೇಸರದಿ ಪ್ಚ್.. ಮಾಡಿದಳು.

"ನಾನ್ಯಾವಾಗ ಬೇಡ ಅಂದೆ. ಆದರೆ ಮದುವೆಗೆ ಮುಂಚೆ ಹೀಗೆ ಒಂದೇ ಮನೆಯಲ್ಲಿ.....  ಹೋಗ್ಲಿ ಬಿಡು, ಮೇಲ್ಗಡೆ ರೂಂ ನೂ ಕ್ಲೀನ್ ಮಾಡೋಕೆ ಹೇಳು ಡೆವಿಡ್ ಗೆ. ಆ ಅಡಿಗೆಯವ್ರಿದ್ದಾರಲ್ಲ ಅವರನ್ನು ಇನ್ಮುಂದೆ ಮನೆಲೇ ಇರೋಕೆ ಹೇಳು ಒಕೆ." ಕಾಳಜಿಯಿಂದ ಹೇಳಿದವ ಹ್ಯಾಂಗರ್ ಸಮೇತ ಇಸ್ತ್ರಿ ಮಾಡಿದ ಬಟ್ಟೆ ಹಿಡಿದು ಆಚೆ ಹೊರಟಿದ್ದ. ಎಲ್ಲಿಗೆಂದು ಮಾನ್ವಿ ಕೇಳಲು, ಅವು ಪ್ರಸನ್ನನಿಗೆ ಕೊಡಲೆಂದು ಉತ್ತರಿಸಿದ. ತಕ್ಷಣ ಮಾನ್ವಿ ಅವನ ಕೈಯಿಂದ ಬಟ್ಟೆ ಕಸಿದುಕೊಂಡು ನಾನು ಕೊಡ್ತಿನಿ ನೀನು ಹೋಗಿ ಸ್ನಾನ ಮಾಡು ಎಂದು ಅವನನ್ನು ತಡೆದು ತಾನೇ ಬಟ್ಟೆ ಕೊಡಲು ಹೋದಳು.

                           *********

ಹರ್ಷ ಸ್ನಾನ ಮುಗಿಸಿ ವೈಟ್ ಶರ್ಟ್, ಬ್ಲೂ ಕೋಟ್ ಧರಿಸಿ ರೆಡಿಯಾಗುವಷ್ಟರಲ್ಲಿ ಜಾನಕಮ್ಮ ಬಂದು ಬಿಸಿ ಬಿಸಿ ಚಹಾ ಅವನ ಮುಂದಿಟ್ಟರು. ಕಪ್ ಎತ್ತಿಕೊಂಡ ಹರ್ಷ ಒಂದು ಸಿಪ್ ಗುಟುಕರಿಸಿ ಅವರತ್ತ ನಗುವೊಂದು ಬೀರಿದ. ಅವನ ನಗು  ನೋಡಿ ಅವರ ಕಣ್ಣಲ್ಲಿಯೂ ಆಶ್ಚರ್ಯ. ಇದುವರೆಗೆ ಒಮ್ಮೆಯೂ ಅವರನ್ನು ಕತ್ತೆತ್ತಿಯೂ ಸಹ ನೋಡದವ, ಯಾವತ್ತೂ ಗಜಗಾಂಭಿರ್ಯದಂತಿದ್ದ  ಶ್ರೀಮಂತ ಹುಡುಗನ ಮೇಲಿದ್ದ ಭಯ, ಅವನ ನಗುಮೊಗ ನೋಡಿ ಕೊಂಚ ಕಡಿಮೆಯಾಯಿತು. ಅವರು ಮುಗುಳ್ನಕ್ಕರು. ಇನ್ನೇನು ಅವರು ಅಲ್ಲಿಂದ ಹೊರಡುವಾಗ ಹರ್ಷ ಅವರನ್ನು ಕೂಗಿದ. " ಸುನಿಯೇ‌ ಮಾಜಿ.. ಚಾಯ್ ಬಹುತ್ ಅಚ್ಚಾ ಬನಾ ಹೈ! ಆಪ್ನೆ ಹೀ ಬನಾಯಾ?" ಅವನ ಪ್ರಶ್ನೆಯಲ್ಲಿ ಅನುಮಾನವಿತ್ತು.

"ನಹಿ, ಬೇಟಾ  ಮೇ ನಹೀ, ವೋ ಜೊ ಚೋರಿ ಆಯಿಥಿ ನಾ ಸುಭಾಃ,, ಉಸ್ನೆ ಬನಾಯಾ ಥಾ! ಮೇ ಸಿರ್ಫ್ ಗರಂ ಕರ್ಕೆ ಲಾಯಿ. ಬೋಲ್ ರಹಿ ಥಿ, ತುಮೆ ಅದ್ರಕ್ ಕಿ ಚಾಯ್ ಬಹುತ್ ಪಸಂದ ಹೈ!! ಔರ್ ತುಮೆ ಖಾನೆ ಮೆ ಆಲೂ ಪರೋಟಾ ಬನಾನೆ ಕೊ ಬೋಲಿ" ಅವರ ಮಾತು ಕೇಳಿ ಅವನ ಕುತೂಹಲ ಮತ್ತೆ ಹೆಚ್ಚಾಯಿತು. 'ನನಗೇ ನೆನಪಿಲ್ಲದ ನನ್ನಿಷ್ಟಗಳೆಲ್ಲ ಗೊತ್ತಾ ಅವಳಿಗೆ? ಅಥವಾ ಮಾನ್ವಿ ಹೇಳಿದ್ದಳಾ? ಇದನ್ನೆಲ್ಲ ಇಷ್ಟು ದಿನ ನನ್ಮುಂದೆ ಯಾಕೆ ಹೇಳ್ಲಿಲ್ಲ ಮಾನ್ವಿ? Something fishy!!' ಮನಸ್ಸು ದ್ವಂದ್ವ..

"ಮಾಜಿ... ವೋ ದೇಖ್ನೆ ಮೆ ಕೇಸಿ ಥಿ?" ಕುತೂಹಲ ತಾಳದೆ ಕೇಳಿಯೇ ಬಿಟ್ಟ.

"ಬಹುತ್ ಹಿ ಪ್ಯಾರಿ ಥಿ ಬೇಟಾ. ಬಾತೇ ಭಿ ಕಿತ್ನಿ ಮೀಟಿ ಮೀಟಿ ಕರ್ ರಹಿ ಥಿ. ತುಮ್ಹಾರೆ ಬಾರೇ ಮೆ ಪೂಚ ರಹೀ ಥಿ ಬಹುತ್, ಔರ್ ತುಮ್ಹಾರಾ ಕಯಾಲ್ ರಖ್ನೆ ಕೊ ಬೊಲ್ ಕೆ ಗಯಿ ಹೈ. ಅಚ್ಚಾ ಮೇ ಚಲ್ತಿ ಹ್ಮೂ ಬೇಟಾ.. ಆಪ್ಕೆ ಲಿಯೆ ಅಭಿ ನಾಷ್ಟಾ ಭಿ ತಯಾರ್ ಕರ್ನಾ ಹೈ.." ಇಷ್ಟು ಹೇಳಿ ಅವರಲ್ಲಿಂದ ಹೊರಟು ಹೋದರು‌. ಆದರೆ ಅವನ ಮನಸ್ಸಲ್ಲಿ ಸುಳಿದಾಡುತ್ತಿದ್ದ ಸಂಶಯದ ಕಿಡಿಗೆ ಅವರ ಮಾತುಗಳು ಗಾಳಿ ಬೀಸಿದಂತಿದ್ದವು. ರೂಮನ್ನು ಮತ್ತೊಮ್ಮೆ ಪರಿಶೀಲಿಸಿ ನೋಡಿದ. ಅವಳು ಬಂದು ಹೋದ ಅನುಭೂತಿ ಸಹ ಅವನ ಮನಸ್ಸಿಗೆ ತುಂಬಾ ಆಹ್ಲಾದವೆನಿಸಿತು. ಅವಳ ಮೃದು ಪಾದಗಳ ಹೆಜ್ಜೆ ಗುರುತಿನ ಸ್ಪರ್ಶ ಸಹ ಅವನಿಗೆ ಅಪೂರ್ವ. ಅಂಗೈ ಅಗಲದ ದೂರದಲ್ಲಿ ನಿಂತ ಕನಸೊಂದು ಕೂಗಿ ಕರೆದಂತ ಭಾವ. ಕೈಗೆಟುಕುತಿಲ್ಲ. ಕಣ್ಣಿಗೆ ಎಟುಕುತಿಲ್ಲ. ಆದರೆ ಮನಸ್ಸಿಗೆ ತೀರ ಸನಿಹ!!  ಹಿಂದೆ ನಿಂತಿದ್ದ ಡೇವಿಡ್ ಅವರ ಸಂಭಾಷಣೆ ಎಲ್ಲವನ್ನೂ ಕೇಳಿಸಿಕೊಂಡ. ನಿಜವಾದ ಬೆಂಕಿ ಈಗ ಹೊತ್ತಿಕೊಂಡಿತು. ಶೀತಲ ಕೋಲಾಹಲವೊಂದು ಭುಗಿಲೆದ್ದಿತು. ಯಾರಿಗೂ ಅದರ ಸುಳಿವಿರಲಿಲ್ಲ. ಸ್ವತಃ ಹರ್ಷನಿಗೂ ಸಹ..

                         *********

ಮಾನ್ವಿ ತನ್ನ ಲಗೇಜ್ ಗಾಗಿ ಕಾಯುತ್ತಾ, ಡೈನಿಂಗ್ ಟೇಬಲ್ ಎದುರು ನ್ಯೂಸ್ ಪೇಪರ್ ಓದುತ್ತಾ ಕುಳಿತಿದ್ದಳು. ಆಗಸ ಬಣ್ಣದ ಶರ್ಟ್ ಕಪ್ಪು ಪ್ಯಾಂಟ್ ಧರಿಸಿ ಶಿಸ್ತಾಗಿ ಸಿದ್ದನಾಗಿ ಬಂದ ಪ್ರಸನ್ನ ಅವಳ ಎದುರಿನ ಕುರ್ಚಿಯಲ್ಲಿ ಕುಳಿತು 'ತಿಂಡಿ ಏನಿದೆಯೆಂದು' ಕೇಳಿದ. ಮಾನ್ವಿ ಕೇಳಿಯೂ ಕೇಳಿಸದಂತೆ ಪೇಪರ್ ನೊಳಗೆ ಮುಳುಗಿದಳು. ಅದೇ ಪ್ರಶ್ನೆಯನ್ನು ಅಡುಗೆ ಮನೆಯಲ್ಲಿದ್ದ ಜಾನಕಮ್ಮಗೆ ಜೋರಾಗಿ ಕೂಗಿ ಕೇಳಿದ. "ಆಲೂ ಪರೋಟಾ ಬೇಟಾ" ಅವರು ಕೂಗಿ ಉತ್ತರಿಸಿದರು.
"ಓಹೋಹೋ.. ಆಲೂ ಪರೋಟಾ!! ಮಾನು ಫೇವರೆಟ್! ಶಿ ಲವ್ಸ್ ಆಲೂ ವೆರಿ ಮಚ್ ಮಾಜಿ.. 'ಮಾನು ಆ್ಯಂಡ್ ಆಲೂ'- ಏಕ್ ಅಧೂರಿ ಪ್ರೇಮಕಥಾ! ಮೂವಿ ದೇಖಿ ಹೈ ಆಪ್ನೆ" ಬೊಬ್ಬೆಯಿಟ್ಟ.

ಮಾನ್ವಿಗೆ ಮತ್ತೊಂದು ಹೊಡೆತ. 'ತಾನು ಆಲಾಪ್ ನನ್ನು ಪ್ರೀತಿಸ್ತಿದ್ದ ವಿಷಯ ಇವನಿಗೇನಾದ್ರೂ ಗೊತ್ತಾಗಿದೆಯಾ? ಆಲಾಪ್ ಹೆಸರಿನಿಂದ ರೇಗಿಸುತ್ತಿದ್ದಾನಾ ಅಥವಾ ಸುಮ್ನೆ ನನ್ನ ಗೋಳಾಡಿಸೋಕೆ ಹೀಗೆ ಹೇಳ್ತಿದ್ದಾನಾ? ನೋ.... ಪರಿ ಹೊರತಾಗಿ ತನ್ನ ವಿಷಯ ಬೇರಾರಿಗೂ ಗೊತ್ತಿಲ್ಲ. ಇವನನ್ನ ಪರಿ ಕಳಿಸಿರ್ಬಹುದಾ' ಸಂಶಯ ನಿವಾರಿಸಲು ಎದ್ದು ಹೊರನಡೆದು ಪರಿಗೆ ಫೋನ್ ಮಾಡಿದಳು. ಒಂದು ವೇಳೆ ಪರಿ ಆಕ್ಷಣ ಮಾತನಾಡಿದ್ದರೆ ಪ್ರಸನ್ನನ ಆಟ ಅಲ್ಲಿಗೆ ಸಮಾಪ್ತಿಯಾಗಿರುತ್ತಿತ್ತೇನೋ!! ಆದರೆ ಆಕಡೆಗೆ ರಿಂಗಾಯ್ತೆ ವಿನಃ ಪ್ರತಿ ಸಲ ಕರೆಯನ್ನು ತುಂಡರಿಸಲಾಯಿತು.'ಇವಳಿಗೂ ಪೊಗರು ಹೆಚ್ಚಾಗಿದೆ' ಸಿಟ್ಟಿನಲ್ಲಿ ಮಾನ್ವಿಯ ಪ್ರಯತ್ನ ಅಲ್ಲಿಗೆ ನಿಂತಿತು. ಅವಳು ಒಳಬಂದಾಗ ಹರ್ಷ ಕೂಡ ಸ್ನಾನ ಮುಗಿಸಿ ಸಿದ್ದವಾಗಿ ಪ್ರಸನ್ನನ ಪಕ್ಕ ಬಂದು ಕುಳಿತಿದ್ದ. ಮಾನ್ವಿ ಅವರೆದುರು ಹೋಗಿ ಕೂರುತ್ತಿದ್ದಂತೆ ಅವಳನ್ನು ಕಂಡ ಪ್ರಸನ್ನ ಕಿಸಕ್ಕನೆ ನಕ್ಕ. ಮಾನ್ವಿ ಕಣ್ಣು ಕೆಕ್ಕರಿಸಿ ಅವನನ್ನೇ ದುರುಗುಟ್ಟಿ "ಏನಾಯ್ತಿವಾಗ" ಕೇಳಿದಳು. ಹರ್ಷ ತನ್ನ ಕೈಯಲ್ಲಿದ್ದ ಫೈಲ್ ಮುಚ್ಚಿ ಅವನತ್ತ ನೋಡಿದ.

"ಹೈಸ್ಕೂಲ್‌ನ ಘಟನೆಯೊಂದು ನೆನಪಾಯ್ತು ಬ್ರೋ.. ಇಟ್ಸ್ ಸೋ ಫನ್ನಿ ಗೊತ್ತಾ‌..." ನಗುತ್ತಲೇ ಹೇಳಿದ.. ಹರ್ಷನ ಗಮನ ಅವನೆಡೆಗೆ ಕೇಂದ್ರಿತವಾಯಿತು. 'ಈಗೇನು ಕಥೆ ಶುರುಮಾಡಿದನೋ ಪಾಪಿ' ಮಾನ್ವಿ ಶಪಿಸಿದಳು‌.

"ಒಮ್ಮೆ ಕನ್ನಡ ವೈವಾದಲ್ಲಿ 'ಮದರ್ ರೂಟ್ ನಾ ಕನ್ನಡದಲ್ಲಿ ಏನಂತಾರೆ?' ಅಂತ ಮಿಸ್ ಇವ್ಳನ್ನ ಕೇಳಿದ್ರು.. ಈ ಬೆಪ್ಪು ಉತ್ತರ ಗೊತ್ತಿಲ್ದೆ ಹ್ಯಾಪು ಮೊರೆ ಹಾಕ್ಕೊಂಡು ನಿಂತಿದ್ಲು. ಪಕ್ಕದಲ್ಲೇ ಇದ್ವಲ್ಲಾ ನಾವಿಬ್ರೂ,, ಹೆಲ್ಪ್ ಮಾಡೋಣಾ ಅನ್ಕೊಂಡು ಪಿಸುಮಾತಲ್ಲಿ 'ತಾಯಿ ಬೇರು' ಅಂತ ಉತ್ತರ ಹೇಳ್ಕೊಟ್ವಿ. ಇವ್ಳ ಕಿವಿಗೆ ಅದು ಏನಂತ ಕೇಳಿಸ್ತೋ ಏನೋ,, ಇವ್ಳು 'ಆಯಿ ಬೇರು ಮಿಸ್' ಅಂತ ಹೇಳ್ಬಿಡೋದಾ.
ಅದ್ಕೆ ಮಿಸ್ 'ಯಾಕೆ ಅಜ್ಜನ ಬೇರು ಅಲ್ವಾ' ಅಂತ ಕೇಳ್ಬಿಟ್ರು. ಇಡೀ ಕ್ಲಾಸ್ ಗೊಳ್ ಅಂತ ನಗ್ತಿತ್ತು. (ಹರ್ಷ ಕೂಡ ನಗು ತಾಳದಾದ) ಆದ್ರೆ ನಾವಿಬ್ರೂ ಇವ್ಳಿಗೆ ಹೆಲ್ಪ್ ಮಾಡ್ಲೇ ಬೇಕು ಅನ್ಕೊಂಡು ಮತ್ತೊಮ್ಮೆ ಪಿಸುಮಾತಲ್ಲಿ 'ಆಯಿ ಅಲ್ಲಾ ಕಣೇ, ತಾಯಿ.. ತಾಯಿ ಬೇರು' ಅಂತ ಮತ್ತೆ ಹೇಳಿಕೊಟ್ವಿ. ಆಗ ಇವ್ಳು ಕೊಟ್ಟ ಉತ್ತರ ಏನ್ ಗೊತ್ತಾ?" ಈ ಮಧ್ಯೆ ಜಾನಕಮ್ಮ ಅವನ ತಟ್ಟೆಗೆ ಬಿಸಿ ಪರೋಟಾ, ತುಪ್ಪ ಬಡಿಸಿ, ಹರ್ಷನಿಗೂ ತರಲು ಒಳಹೋದರು.

ಮಾನ್ವಿ ಕಡೆಗೊಮ್ಮೆ ನೋಡಿದ ಹರ್ಷ 'ಏನು?' ಎಂಬಂತೆ ಕೇಳಿದ. ಘಟನೆಯ ತಲೆ ಬುಡ ಅರ್ಥವಾಗದ ಮಾನ್ವಿ ಮನಸ್ಸಲ್ಲೇ ಪ್ರಸನ್ನನನ್ನು ಶಪಿಸುತ್ತ ಪೇಲವನಗೆ ನಕ್ಕಳು. ಅವರಿಬ್ಬರ ಒಗಟು ಮುಖ ನೋಡಿ ಪರೋಟಾ ತುಣುಕೊಂದು ಬಾಯಿಗಿಡುತ್ತ ಪ್ರಸನ್ನನೇ ನುಡಿದ..
"ನಾವು ತಾಯಿಬೇರು ಅಂತ ಹೇಳಿದ್ರೆ ಇವಳು.... 'ನಾಯಿಬೇರು  ಮಿಸ್' ಅಂತ ಅಂದ್ಬಿಡೋದಾ!! ಇಡೀ ಕ್ಲಾಸ್ ಬಿದ್ದು ಬಿದ್ದು ನಗ್ತಿತ್ತು " ಪ್ರಸನ್ನ ಟೇಬಲ್ ಕುಟ್ಟಿ ಕುಟ್ಟಿ ನಗತೊಡಗಿದ. ಹರ್ಷನ ನಗು ಕೂಡ ಜೊತೆಸೇರಿತು.
ಇಬ್ಬರೂ ಕೈ ಕೈ ತಟ್ಟಿ ನಗುತ್ತಿದ್ದರೆ ಜೋಕಿಗೆ ಭಾಜನಳಾದ ಮಾನ್ವಿ ಮುಷ್ಟಿ ಬಿಗಿದು ಕೋಪದಿಂದ ಕುದ್ದು ಹೋದಳು. ಟೇಬಲ್ ಕೆಳಗಿನಿಂದ ಪ್ರಸನ್ನನ ಕಾಲಿಗೆ ಜೋರಾಗಿ ಒದ್ದಳು. ತನ್ನ ಕಾಲು ಹಿಂದಕ್ಕೆ ಸರಿಸಿಕೊಂಡ ಪ್ರಸನ್ನ ಹೇಳಿದ..

"ಕನ್ನಡದಲ್ಲಿ ಇಂತಹ ಪಂಡಿತೆಯಾಗಿದ್ದವಳು, ಈಗ ಇಷ್ಟು ಚಂದ ಸಾಹಿತ್ಯಿಕವಾಗಿ ಪತ್ರ ಹೇಗೆ ಬರೆದಳು ಅನ್ನೋದೆ ಡೌಟು‌‌ ಕಣೋ!!" ಹಾಸ್ಯದ ಪೀಠಿಕೆಯೊಂದಿಗೆ ಅವಳ ಕುಣಿಕೆಗೆ ಹಗ್ಗ ಸಿದ್ದಮಾಡಿದ್ದ. ಯಾವುದನ್ನೂ ನೇರವಾಗಿ ಹೇಳದೆ, ಹರ್ಷ ಸ್ವತಃ ತನ್ನ ಅಸ್ತಿತ್ವವನ್ನು ಅರಸುವಂತೆ ಮಾಡುವುದು ಅವನ ಉದ್ದೇಶವಾಗಿತ್ತು. ಮಾನ್ವಿಗೆ ಅವನ ಮಾತುಗಳು ಯಾವುದೂ ಕ್ಷುಲ್ಲಕವಾಗಿರಲಿಲ್ಲ ಎಂದು ಈಗನ್ನಿಸಿತು. ಉಸಿರು ಬಿಸಿಯಾಯಿತು‌. ಹರ್ಷನ ಮುಖದಲ್ಲಿ ಸಂಶಯದ ಗೆರೆಗಳು.

"ಮಾನು.. ನಿಜವಾಗಿಯೂ ಆ ಲೆಟರ್ ನೀನೇ ಬರೆದದ್ದಾ ಅಥವಾ ಅದನ್ನೂ ಆ ಡೆಕೊರೆಶನ್ ಹುಡುಗಿ ಹತ್ರನೇ ಬರೆಸಿದ್ದಾ" ಅವನ ಮಾತಿಗೆ ಅವಳು ಕಕ್ಕಾಬಿಕ್ಕಿಯಾಗಿ ನೋಡಿದಳು. "ಯಾಕೆ... ನನ್ನ ಮೇಲೆ ನಿನಗೂ ಡೌಟಾ? ಹೈಸ್ಕೂಲಿನಲ್ಲಿ ಕನ್ನಡದಲ್ಲಿ ವೀಕ್ ಅಂದಮಾತ್ರಕ್ಕೆ ಈಗಲೂ ಕನ್ನಡ ಬರಲ್ಲ ಅಂತಾನಾ?" ಗುರ್ ಎಂದಳು.

"ಹಾಗಲ್ಲ. ಆದರೆ ನೀನ್ಯಾವತ್ತು...... ಏನೋ ಹೇಳಬೇಕೆಂದವನು ಸುಮ್ಮನಾದ. ನನಗೆ ಮೂಡ್ ಹಾಳು ಮಾಡ್ಕೋಳ್ಳೋದು ಇಷ್ಟವಿಲ್ಲ. ಲೇಟಾಗ್ತಿದೆ, ನಾನಿನ್ನು ಹೊರಡ್ತಿನಿ. ಬಾಯ್" ಎದ್ದು ಹೊರಟ.

"ಓಯ್.. ಒಂದಾದರೂ ಪರೋಟಾ ತಿಂದು ಹೋಗೋ" ಪ್ರಸನ್ನ ಕೂಗಿದ.

"ಬೇಡ. ಲೇಟಾಗ್ತಿದೆ ಮೀಟಿಂಗ್ ಗೆ.."

"ನಿಂತ್ಕೊ.. ತಗೋ ಕಾರಿನಲ್ಲಿ ತಿಂದ್ಕೊಂಡು ಹೋಗು." ಎಂದು ಪರೋಟ ಸುರುಳಿ ಸುತ್ತಿ ಅವನ ಕೈಗಿಟ್ಟ. "ನಮ್ಮಮ್ಮನ ಟ್ರಿಕ್ ಇದು. ಲೇಟಾಗ್ತಿದೆ ಅಂತ ಓಡೋವಾಗೆಲ್ಲ ಹೀಗೆ ತಿನ್ನೋಕೆ ಕೊಡೊರು" ನಕ್ಕು ನುಡಿದ. ಹರ್ಷನ ಮನದಲ್ಲಿ ಏನೋ ಸಂಕಟ. ಇದೇ ಸನ್ನಿವೇಶ ಮೊದಲೆಲ್ಲೋ ತುಂಬಾ ಸಲ ಅನುಭವಿಸದಂತೆ ಭಾಸ. ಆದರೆ ಪ್ರಸನ್ನನ ಜಾಗದಲ್ಲಿ ಬೇರೆ ಯಾರೋ ಇದ್ದಂತೆ.. ಅವರು ಅಮ್ಮನಾ!! ಪ್ಚ್.. ಪಬ್ಬು, ಪಾರ್ಟಿ, ಮಧ್ಯೆ ಇದಕ್ಕೆಲ್ಲ ಟೈಮ್ ಇರುತ್ತಾ ಅವರಿಗೆ?' ವಿಷಾದದ ನಗು ಮೂಡಿ ತಲೆ ತಡವಿದ. ಹೊರಗೆ ಬಂದಾಗ ರಂಗೋಲಿಯ ಬಣ್ಣಗಳ ಮೂಕ ನರ್ತನ. ಮೊಬೈಲ್ ನಲ್ಲೊಂದು ಫೋಟೋ ಕ್ಲಿಕ್ಕಿಸಿದ. ಅದನ್ನು ನೋಡುವವನ ಯೋಚನೆಯಲ್ಲಿ ನೂರಾರು ಪ್ರಶ್ನೆಗಳು. ಮಾನ್ವಿಯನ್ನು ತನ್ನ ಕಲ್ಪನೆಯ ದೃಷ್ಟಿಗೆ ಹೋಲಿಸಿ ನೋಡಿದ ಅಜಗಜಾಂತರ ವ್ಯತ್ಯಾಸ.. ಮತ್ತೆ ಅವಳ್ಯಾರು?  ಇಷ್ಟು ದಿನ ಜೊತೆಗೆ ಇದ್ದರೂ ನನ್ನ ಬಗ್ಗೆ ಯಾವ ವಿಷಯವನ್ನು ಕೆಣಕದವಳು, ಇವತ್ತು ಹೀಗೆ ಇದ್ದಕ್ಕಿದ್ದಂತೆ ಹಳೆಯ ನೆನಪು ಮಾಡಿಸಲು ಹೊರಟಿರೋದು ಸೋಜಿಗದ ಸಂಗತಿ! ಇವೆಲ್ಲದರ ಹಿಂದೆ' ಇರೋದು ಮಾನ್ವಿನೇನಾ? ಅಥವಾ ಬೇರೆ ಯಾರೋ...?" ಅನವರತ ಯೋಚನೆಯೊಂದಿಗೆ ಕಾರು ಹತ್ತಿದ. ಕಾರು ಚಲಿಸಿತು. ಅವನ ಮನಸ್ಸು ಮಾತ್ರ ಅಲ್ಲಿಯೇ ಉಳಿದಿತ್ತು.

   

ಅವನತ್ತ ಹೋಗುತ್ತಿದ್ದಂತೆ ಮಾನ್ವಿ ಹರ್ಷನ ರೂಮಿಗೆ ಧಾವಿಸಿ ಲೆಟರ್ ಓದಲು ಹವಣಿಸಿದಳು. ಆದರೆ ಬಾಗಿಲು ಲಾಕ್ ಆಗಿತ್ತು. ಅವಳ ಪ್ರಯತ್ನ ವಿಫಲವಾಯಿತು. ಕೆಲವೇ ಸಮಯದಲ್ಲಿ ಅವಳ ಲಗೇಜ್ ಸಮೇತ ಇನ್ನೊಬ್ಬ ಅತಿಥಿ ಸಹ ಮನೆಗೆ ಪ್ರವೇಶ ಮಾಡಿತು. 'ಸ್ಟೋನಿ' ಅಚ್ಚ ಬಿಳಿಯ, ತುಂಬು ತುಪ್ಪಳದ ಸ್ಯಾಮೊಯ್ಡ್ ತಳಿಯ ನಾಯಿ. ಮಾನ್ವಿಯ ಮುದ್ದಿನ ಜೀವ. ಬರುತ್ತಿದ್ದಂತೆ ಅದನ್ನು ಎತ್ತಿ ಎದೆಗಪ್ಪಿ ಲೊಚಲೊಚನೆ ಮುದ್ದಾಡಿ ಸಂಭ್ರಮಿಸಿದಳು. "ನಾಯಿ ಬೇರೆ ಸಾಕಿದ್ದಿಯಾ?? ಯಾವಾಗಿನಿಂದ..?" ಕೇಳಿದ ಪ್ರಸನ್ನ

"ಮನುಷ್ಯರು ಯಾರೂ ನಂಬಿಕೆಗೆ ಯೋಗ್ಯರಲ್ಲ ಅಂತ ಗೊತ್ತಾದಾಗಿನಿಂದ.." ಅವಳ  ಧ್ವನಿ ಗಂಭೀರವಾಗಿತ್ತು. ಅವಳ ಮಾತಲ್ಲಿದ್ದ ನೋವನ್ನೂ ಆತ ಗ್ರಹಿಸಿದ. ಏನೋ ಹೇಳುವಷ್ಟರಲ್ಲಿ ಸ್ಟೋನಿ ಅವನನ್ನ ನೋಡಿ ಜೋರಾಗಿ ಬೊಗಳಲು ಶುರುವಿಟ್ಟಿತು. "ನಿನ್ನ ಜೊತೆಗಿದ್ದು ಇದ್ದು,, ಇದಕ್ಕೂ ನಿನ್ನ ಬುದ್ದಿನೇ ಬಂದಿದೆಯಲ್ಲೇ.." ಗೊಣಗುತ್ತ ಅಲ್ಲಿಂದ ಜಾಗ ಖಾಲಿ ಮಾಡಿದ. ಒಟ್ಟಾರೆಯಾಗಿ ಆ ಮುಂಜಾನೆ, ಸುಳ್ಳು ಬುನಾದಿಯ ಮೇಲೆ ಮೂವರ ಗೃಹಪ್ರವೇಶ ಯಶಸ್ವಿಯಾಗಿ ನಡೆದಿತ್ತು. ಮುಂದಿನ ಕದನ ಕೌತುಕಗಳು, ರಹಸ್ಯವಾಗಿ ಘಳಿಗೆ ಬಟ್ಟಲಿನಲ್ಲಿ ಅವಿತು ಕೂತಿದ್ದವು,, ತಮಗೇ ತಾವೇ ಅಪರಿಚಿತವಾಗಿ..

                          ********

ತನ್ನ ಲಗೇಜ್ ತೆಗೆದುಕೊಂಡು ಹೋಗಲು ಅಪಾರ್ಟ್ಮೆಂಟ್ ಗೆ ಬಂದ ಪ್ರಸನ್ನ ಪರಿಧಿಯನ್ನು ಭೇಟಿಯಾದ. ಅವಳದೋ ಅದೇ ಮುದ್ದು ಮುಖ, ಮುಗ್ಧ ಮುಗುಳ್ನಗು.. ಮನಸ್ಸಿನ ತುಂಬಾ ಭಾರವಾದ ನೋವನ್ನು ಅವಿತಿಟ್ಟು ಹೇಗೆ ನಗುತ್ತೆ ಈ ಹುಡುಗಿ? ಅವಳನ್ನ ಕಂಡರೆ ಅವನ ಜಡ ಮನಸ್ಸು ಕೂಡ ಆರ್ಧ್ರ.. ಮಕ್ಕಳಿಬ್ಬರೂ ಅವಳ ಮೊಬೈಲ್ ನಲ್ಲಿ ಆಟವಾಡುತ್ತ ಕುಳಿತಿದ್ದರು.
"ಎಲ್ಲೋಗಿದ್ರಿ ಬೆಳಿಗ್ಗೆಯಿಂದ" ಕೇಳಿದಳು
"ನಿಮ್ಮ ಹರ್ಷನ್ನ ನೋಡೋಕೆ" ಕುಳಿತುಕೊಳ್ಳುತ್ತಾ ಹೇಳಿದ
"ವ್ಹಾಟ್... ನಿಜವಾಗ್ಲೂ ಹರ್ಷನ್ನ ಭೇಟಿಯಾದ್ರಾ? ಹೇಗೆ?" ಅವಳಿಗೆ ಪರಮಾಶ್ಚರ್ಯ.

"ಹೇಗೋ ಆಯ್ತು ಪರಿ. ಅದಲ್ಲ ಮುಖ್ಯ. ಈಗ ನಾನು ಹರ್ಷನ ಜೊತೆಗೆ ಇರೋಕೆ ಹೊರಟಿದ್ದಿನಿ. ಅವನ ಮನೆಯಲ್ಲಿ. ಮಾನ್ವಿ ಕೂಡ ಅಲ್ಲಿಯೇ ಬಂದಿದ್ದಾಳೆ. ಅವಳಿಗೆ ಯಾವುದೇ ಕಾರಣಕ್ಕೂ ನಾನು ನಿಮ್ಮ ಜೊತೆ ಇಲ್ಲಿಗೆ ಬಂದಿದ್ದು ಅನ್ನೋ ವಿಷಯ ಗೊತ್ತಾಗಕೂಡದು. ಗೊತ್ತಾದ್ರೆ ಮತ್ತೊಂದು ಹೊಸ ರಗಳೆ. ಹರ್ಷನ ಸ್ಥಿತಿ ಸುಧಾರಿಸೋವರೆಗೂ ನೀವ್ಯಾರೋ ನಾನ್ಯಾರೋ!! ಅನ್ನೋ ಹಾಗಿರಿ."
"ಸರಿ. ಹರ್ಷ ಹೇಗಿದ್ದಾನೆ? ಅವನಿಗೆ ಅಲ್ಪ ಸ್ವಲ್ಪನಾದ್ರೂ ನೆನಪಿದೆಯಾ ಮನೆ ಬಗ್ಗೆ"

"ಚೂರು ನೆನಪು ಇರಬಹುದು. ಅವನು ಮನಸ್ಸು ಬಿಚ್ಚಿ ಮಾತಾಡಿದ್ರೆ ಗೊತ್ತಾಗುತ್ತೆ. ಅವನೊಂದು ರೀತಿಯ ಅಪನಂಬಿಕೆಗೆ ಒಳಗಾಗಿದ್ದಾನೆ, ಯಾರನ್ನು ನಂಬೋದು! ಯಾರನ್ನು ನಂಬಬಾರದು! ಅನ್ನೋ ಗೊಂದಲದ ಸ್ಥಿತಿಯಲ್ಲಿ!  ಈಗಷ್ಟೇ ನಮ್ಮ ಸ್ನೇಹ ಶುರುವಾಗಿದೆ. ಹೋಗ್ತಾ ಹೋಗ್ತಾ ಅವನ ಮನಸ್ಸಲ್ಲೇನಿದೆ ತಿಳಿಬೇಕು. ಆದರೆ ಒಂದಂತೂ ಕ್ಲಿಯರ್.. ಸದ್ಯಕ್ಕೆ ತಾನಿರುವ ಸ್ಥಿತಿ, ವಾತಾವರಣ ಜನರು ಯಾರಿಗೂ ಅವನು ಹೊಂದಾಣಿಕೆಯಾಗಿಲ್ಲ. ಅದೆಲ್ಲ ಒಗಟು ಅನ್ನುವಂತೆ ಬದುಕ್ತಿದಾನೆ"

"ಬೆಳಿಗ್ಗೆ, ವಿವೇಕ್ ಹೆಲ್ಪ್ ನಿಂದ ಹರ್ಷ ಇರೋ ಜಾಗಕ್ಕೆ ಹೋಗಿದ್ದೆ"

"ಹ್ಮಾ, ಗೊತ್ತು. ನಿಮ್ಮ ಲೆಟರ್ ಓದಿ ಸರ್ಪ್ರೈಜ್ ನೋಡಿ ಅವನಿಗೆ ಸಂತೋಷ ಏನೋ ಆಯ್ತು, ಆದರೆ ಅದನ್ನೆಲ್ಲ ಮಾನ್ವಿ ಮಾಡಿದ್ದಾಳೆ ಅನ್ನೋ ಭ್ರಮೆ! ಬೇಜಾರಾಯ್ತು. ಅವರು ಜಾಗಿಂಗ್ ಹೋಗೋ ವಿಷಯ ನಿಮಗೆ ಹೇಗೆ ಗೊತ್ತಾಯ್ತು?"

"ಮೈಥಿಲಿ ನಿನ್ನೆ ರಾತ್ರಿ ಯಾವುದೋ ಕಾನ್ಫರೆನ್ಸ್ ಗೆ ಹಾಸ್ಪಿಟಲ್ ಹೋಗಿದ್ರಂತೆ. ಆಗ ಮಾನ್ವಿ ಶೆಡ್ಯೂಲ್ ಕೇಳಿದಾಗ ಏಳು ಗಂಟೆಗೆ ಮರೀನ್ ಬೀಚ್ ಜಾಗಿಂಗ್ ಅಂತ ಕೋಪದಿಂದ ಹೇಳಿದ್ಲಂತೆ. ಆಗಲೇ ನಮ್ಮ ಪ್ರೋಗ್ರಾಂ ಸ್ಟಾರ್ಟ್ ಆಯ್ತು. ನಾನು ಬೆಳಿಗ್ಗೆ ನಿಮ್ಮ ರೂಮಿಗೆ ಬಂದಾಗ ನೀವಿನ್ನು ಮಲ್ಗಿದ್ರಿ ಸೋ, ವಿವೇಕ್ ನನ್ನ ಜೊತೆ ಬರೋಕೆ ರೆಡಿಯಾದ್ರು. ಸರಿಯಾಗಿ ಟೈಮಿಂಗ್ ಪ್ರಕಾರ ಅವರು ಅಲ್ಲಿಂದ ಬೀಚ್ ಹೋಗಿ ಬರೋಕೆ ಕನಿಷ್ಟ ಎರಡು ಗಂಟೆ ಬೇಕಾಗುತ್ತೆ. ಅಷ್ಟರಲ್ಲಿ ನಾವು ನಾವು ಕೆಲಸ ಮುಗಿಸಿ ವಾಪಸ್ ಹೊರಟ್ವಿ. ಮನೆ ಒಳಗೆ ಹೋಗೋಕೆ ರೋಹಿತ್ ಡಬ್ಬಿಂಗ್ ವಾಯ್ಸ್ ಕೂಡ ತುಂಬಾ ಹೆಲ್ಪ್ ಆಯ್ತು." ಧೀರ್ಘ ಉಸಿರೆಳೆದಳು.

" ವೆಲ್ ಡನ್ ಪರಿ!!" ಮೆಚ್ಚುಗೆ ಸೂಚಿಸಿದ. " ಆದರೆ ಸಮಯ ತುಂಬಾ ಕಡಿಮೆ ಇದೆ. ಹೇಗಾದ್ರೂ ಮಾಡಿ ಹರ್ಷನಿಗೆ ಅವನ ಗತಜೀವನ ನೆನಪಿಸ್ಲೇಬೇಕು. ಸಂಜೆ ವಾಟರ್ ಪಾರ್ಕ್ ನಲ್ಲಿ ಏನ್ ಪ್ಲ್ಯಾನ್ ಮಾಡಿದಿರಾ?"

"ಕೆಲವು ಪುಸ್ತಕಗಳಲ್ಲಿ ಓದಿದ್ದೆ. ಹಳೆಯ ನೆನಪುಗಳನ್ನು ಮರಳಿಸುವ ಸಲುವಾಗಿ ಕೆಲವು ಸನ್ನಿವೇಶಗಳನ್ನು ಘಟನೆಗಳನ್ನು ಮತ್ತೆ ಕಣ್ಮುಂದೆ ಬರೋ ಹಾಗೆ ಮಾಡಲಾಗುತ್ತಂತೆ. ಅದೇ ರಿಕ್ರಿಯೆಟಿಂಗ್ ಓಲ್ಡ್ ಮೆಮೊರಿಸ್"

"ಹ್ಮ್.. ಗುಡ್ ಐಡಿಯಾ! ಆದರೆ ಮಾನ್ವಿ ಇದಕ್ಕೆ ಅವಕಾಶ ಕೊಡಲ್ವೆನೋ. ಹರ್ಷನ್ನ ಪಾರ್ಕಿಗೆ ಬಿಡಲ್ಲ ಅನಿಸ್ತಿದೆ. ಬಟ್ ಡೋಂಟ್ ವರಿ.. ನಾನು ಇರೋವಾಗ ಅವಳ ಆಟ ಗೆಲ್ಲೋಕೆ ಸಾಧ್ಯಾನೆ ಇಲ್ಲ ಬಿಡಿ. ನೀವು ನಿಮ್ಮ ಪ್ರಯತ್ನ ಮುಂದುವರೆಸಿ, ನಾನು ನನ್ನ ಪ್ರಯತ್ನ ಮಾಡ್ತಿನಿ. ನೋಡೋಣ ಏನಾಗತ್ತೋ!" ಧೈರ್ಯ ನೀಡಿದ ಪ್ರಸನ್ನ, ಪರಿಗೆ ಬಾಯ್ ತಿಳಿಸಿ ತನ್ನ ಲಗೇಜ್ ತೆಗೆದುಕೊಳ್ಳಲು ವಿವೇಕ್ ರೂಮಿಗೆ ಹೊರಟ.

"ಹರ್ಷನ್ನ ಹುಷಾರಾಗಿ ನೋಡ್ಕೊಳ್ಳಿ.." ಅವಳ ಧ್ವನಿಯಲ್ಲಿ ಕಂಪನವಿತ್ತು.

"ನೀವು ನಿಶ್ಚಿಂತವಾಗಿರಿ. ಅವನ ಜೊತೆಗೆ ನಾನಿದ್ದೇನೆ.." ಅವನ ಮಾತಲ್ಲಿ ಪ್ರತಿಸ್ಪಂದನವಿತ್ತು. ಅವನು ಅಲ್ಲಿಂದ ನಿರ್ಗಮಿಸಿದ.

ಮುಂದುವರೆಯುವುದು..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೀ ನನ್ನ ಒಲವು..❤ ಸಂಚಿಕೆ-20

ಮನೆಗೆ ಮರಳಿದ ಪರಿಧಿ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕ್ಷಣಕಾಲ ಕಣ್ಣು ಮುಚ್ಚಿ ಸೋಫಾ ಮೇಲೆ ಒರಗಿ ಬಿಟ್ಟಿದ್ದಳು. ಹುಡುಕಾಟದ ಆರಂಭ ಎಲ್ಲಿಂದ? ಹೇಗೆ? ಮನೆಯಲ್ಲಿ ಏನೆಂದು ಹೇಳಿ ಹೊರಡುವುದು? ಸಹಾಯ ನಿರೀಕ್ಷೆ ಇದ್ದದ್ದು ಪ್ರಸನ್ನನಿಂದ ಮಾತ್ರ,, ಈಗ ಅವರು ತನಗೆ ಬೆಂಬಲಕ್ಕೆ ನಿಲ್ಲದೆ ವ್ಯತಿರಿಕ್ತವಾಗೇ ವರ್ತಿಸಿದರು. ಮುಂದೆ ಏನು ಮಾಡಬೇಕೆಂದು ತಿಳಿಯದೆ ನಿತ್ರಾಣಳಾಗಿ ಕುಳಿತು  ಬಿಟ್ಟಿದ್ದಳು. "ಯಾಕೆ?? ಸುಮ್ಮನೆ ಕುಳಿತೇ..!  ಇಷ್ಟು ಬೇಗ ಸೋತು ಹೋದೆಯಾ.."  ಹರ್ಷ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಿಯೇ ಸುತ್ತ ಮುತ್ತ ನಿಂತು ಚಪ್ಪಾಳೆ ತಟ್ಟಿ ನನ್ನ ಹುಡುಕು ನೋಡೋಣ ಎಂದು ಅಣಗಿಸಿದಂತಾಯಿತು ಪರಿಧಿಗೆ. ತಕ್ಷಣ ಕಣ್ಣು ತೆರೆದು ಬೆಚ್ಚಿದ್ದಳು ಹರ್ಷ... ಅವಳ ಸೋತ ಮನಸ್ಸಿಗೆ ಅವನ ನೆನಪೇ ಚೈತನ್ಯ ತುಂಬಿತ್ತು. ಅರಿಯದ ಮುಂದಿನ ಕತ್ತಲೆಯ ದಾರಿಯಲ್ಲಿ ಅವನ ಇರುವಿಕೆಯೇ ಬೆಳಕಿನ ದೀವಿಗೆಯಾಗಿತ್ತು. ಆ ಕೂಡಲೇ ಆಕೆ ಪಾದರಸದಂತೆ ಮುಂದಿನ ಯೋಜನೆಗಳನ್ನು ರೂಪಿಸಿದಳು. ಹಳೆಯ ಸ್ನೇಹಿತೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾನ್ಚಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ಎಣಿಕೆ ಪ್ರಕಾರ ಮಾನ್ವಿ ಬಗ್ಗೆ ಸದ್ಯದ ಮಾಹಿತಿಗಳೇನೂ ಲಭೀಸಲಿಲ್ಲ‌. ಇನ್ನೂ ಮುಂಬೈನ ಎಂ.ಆರ್ ಹಾಸ್ಪಿಟಲ್‌ನಿಂದಲೇ ಮುಂದಿನ ಕೆಲಸ ಸಾಧ್ಯವೆಂದು ಅರಿತ ಮೇಲೆ ಅತ್ತೆ ಸುಲೋಚನರ ಬಳಿ ಕೂತು ಮಾತಾಡಿ ತಾನು ಕೆಲವು ದಿನಗಳ ಮಟ್ಟಿಗೆ ತ...

ನೀ ನನ್ನ ಒಲವು..❤ ಸಂಚಿಕೆ- 54

ಅಂದು ಆಸ್ಪತ್ರೆಯಲ್ಲಿ ಮಾನ್ವಿಯ ಮೊದಲ ದಿನ. ಅದೂ ಡಾ.ಪ್ರಸನ್ನನ ಅರ್ಧಾಂಗಿಯಾಗಿ.  ಪ್ರಸನ್ನನ ಕರ್ಕಶ ಸದ್ದಿನ ಬೈಕ್ ಮೇಲೆ ಇಬ್ಬರೂ ಆಸ್ಪತ್ರೆಗೆ ಬಂದು ಇಳಿಯುತ್ತಿದ್ದಂತೆ "Congratulations sir.." ಶಿಷ್ಯರ ಒಕ್ಕೊರಲಿನ ಕೂಗು ಕೇಳಿ ಬಂದಿತು. ಎದುರಿಗೆ ಒಂದೇ ಒಂದು ಕೆಂಗುಲಾಬಿಗೆ ಮೂರು ಕೈಗಳು ಬಡಿದಾಡುತ್ತಿದ್ದವು.  ಹೂಗುಚ್ಚ ಮರೆತಿದ್ದರೇನೋ ಪಾಪ ಸಿಕ್ಕ ಒಂದು ಗುಲಾಬಿಯ ಬೇಡಿಕೆ ಜಾಸ್ತಿಯಾಗಿತ್ತು‌. ಜಿಪುಣ ಗುರುವಿನ ಹಾದಿಯಲ್ಲಿ ನಡೆಯುವ ಶಿಷ್ಯರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇನ್ನೊಬ್ಬ ಪರಮ ಆದ್ಯ ಶಿಷ್ಯೋತ್ತಮ ಎಲ್ಲೂ ಕಾಣಲಿಲ್ಲ. ಅತ್ತಿತ್ತ ನೋಡಿದ ಪ್ರಸನ್ನ.  " ಎಲ್ಲಿ ? ವಿಜ್ಞಾನಿಗಳು ಕಾಣಿಸ್ತಿಲ್ಲವಲ್ಲ?" ಹೂ ತೆಗೆದುಕೊಳ್ಳುತ್ತಾ ಕೇಳಿದ. "ಅವನಿಗೆ ಬೆಳಿಗ್ಗೆ ಬೆಳಿಗ್ಗೆ ಡಾ.ಕುಮಾರ್ ಕಡೆಯಿಂದ ಮಂಗಳಾರತಿ ನಡಿತಿದೆ ಪಾಪ" ನಕ್ಕು ನುಡಿದ ಧೃವ. " ಯಾಕೆ? ಅವರ ಮೇಲೆ ಏನಾದ್ರೂ ಎಕ್ಸ್ಪೆರಿಮೆಂಟ್ ಮಾಡಿದ್ನಾ?"  "ಎಕ್ಸ್ಪೆರಿಮೆಂಟ್ ಗುಂಗಿನಲ್ಲಿ ರಿಪೋರ್ಟ್ ಅದಲು ಬದಲು ಮಾಡಿದ್ದಾನಂತೆ. ಅದೂ ಯಾರದೋ ಡೆತ್ ರಿಪೋರ್ಟ್‌ನ್ನು ಆಗತಾನೇ ಚೆಕ್‌ಪ್‌ಗೆ ಹೋಗಿರುವ ವ್ಯಕ್ತಿ ಕಡೆಯವರ ಕೈಯಲ್ಲಿ ಇಟ್ಟವ್ನೆ‌. ಆ ಪುಣ್ಯಾತ್ಮರು ಒಂದು ಕ್ಷಣ ಷಾಕ್ ಆಗಿ ಇವನಿಗೆ ಬಾಯಿಗೆ ಬಂದಹಾಗೆ ಉಗಿದು ಡಾ.ಕುಮಾರ್ ಹತ್ತಿರ ದೂರು ಕೊಟ್ಟಿದ್ದಾರೆ. " " irresponsible fellow...

ನೀ ನನ್ನ ಒಲವು..❤ ಸಂಚಿಕೆ- 55

                ಕೆಲವು ದಿನಗಳ ನಂತರ ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ.  ಮಾನ್ವಿ, ಹರ್ಷ ಪರಿಧಿ ಹರಿಣಿ  ಮತ್ತು ಅವರಿಬ್ಬರನ್ನೂ ಶತಾಯಗತಾಯ ಒಂದು ಮಾಡುವ ಪಣ ತೊಟ್ಟಿದ್ದ ಪ್ರಸನ್ನನ ಚತುರ್ ಶಿಷ್ಯವೃಂದ ಕೂಡ ಅವತ್ತು ಆಶ್ರಮಕ್ಕೆ ಬಂದಿದ್ದು ಅವತ್ತಿನ ವಿಶೇಷ.  ಆಶ್ರಮದ ಮಕ್ಕಳಲ್ಲೂ ಏನೋ ಸಂಭ್ರಮದ ವಾತಾವರಣ. ಆಟ ಓಟ ಜೂಟಾಟ, ಹಾಡು ಹರಟೆ ಭರದಿಂದ ಸಾಗಿದ್ದವು.  ಎರಡು ಟೀಮ್ ಮಾಡಲಾಗಿತ್ತು. ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಯಿತು. ಗೆದ್ದ ತಂಡ ಸೋತ ತಂಡಕ್ಕೆ ತಮಗಿಷ್ಟ ಬಂದ ಶಿಕ್ಷೆ ವಿಧಿಸಬಹುದಾಗಿತ್ತು. ಪ್ರಸನ್ನ ಮತ್ತು ಮಾನ್ವಿಯದು ಯಾವತ್ತಿಗೂ ವಿರೋಧ ಪಕ್ಷವೇ. ರೋಹಿತ್ ಆಟದ ನಿಯಮಗಳನ್ನು ವಿವರಿಸಿದ "ಒಕೆ ಒಕೆ " ಒಕ್ಕೊರಲಿನ ಒಪ್ಪಿಗೆಯಾಯಿತು. ಮಕ್ಕಳ ಮುಂದಾಳತ್ವದಲ್ಲಿ ಕೆಲವು ಆಟಗಳನ್ನು ಆಡಲಾಯಿತು. ಪ್ರತಿಬಾರಿ ಸೋಲು ಗೆಲುವಿನ ವಿಷಯದಲ್ಲಿ ಮಾನ್ವಿ ಪ್ರಸನ್ನನದು ಇಲ್ಲದ ಒಣರಗಳೆ. ಅವರ ವಿಶ್ವವ್ಯಾಪಿ ಕದನ ನೋಡಿ ಮಕ್ಕಳಿಗೆ ಶತಪ್ರತಿಶತ ಮನೋರಂಜನೆಯಾದರೆ,  ಹರ್ಷ, ರೋಹಿತ್ ಸೇರಿದಂತೆ ಇತರರಿಗೆ ದೊಡ್ಡ ತಲೆ ನೋವಇರ್ಹೀಗ  "ಇವರಿಬ್ಬರ ಜಗಳ ಈ ಜನ್ಮದಲ್ಲಿ ಸರಿಹೋಗೋ ತರ ಕಾಣ್ತಿಲ್ಲ " ಬಿಸಿಲ ಶಾಖಕ್ಕೆ ದಣಿದು ಬೇಸತ್ತು ನೆಲಕ್ಕೆ ಪಟ್ಟು ಹಾಕಿ  ಕುಳಿತು ಬಿಟ್ಟ ಹರ್ಷ.  "ಹೇಳೊಕಾಗಲ್ಲ, ಇ...