ಪ್ರಕ್ಷುಬ್ಧತೆ - || #file MY ❤ [ ಹರಿಯುವ ನದಿಯು ಕೇಳಲಾರದು ಶರಧಿಯ ದಾರಿಯನ್ನು, ಹುಟ್ಟುವ ಪ್ರೀತಿಯು ಹಾಗೆ ಕಾರಣ ಹೇಳದೆ, ಅನುಮತಿ ಪಡೆಯದೆ ಹೃದಯದ ಗರ್ಭದಲ್ಲಿ ಚಿಗುರೊಡೆಯುವುದು, ಆರಂಭ ಹೇಗೆಂದು ಖಚಿತವಾಗಿ ಹೇಳಲಾಗದು ಆದರೆ ಜೊತೆಯಾದ ಸಂಗಾತಿಯ ಉಸಿರು ಸಹ ತಂಗಾಳಿಯಂತೆ ಭಾವಿಸುವಷ್ಟು ಗಾಢವಾಗಿ ಜೀವದ ಅಣುವಣುವಲ್ಲಿ ಬೆರೆತು ಹೋಗುವುದು. ನನಗೂ ಹಾಗೆ ಆಗಿತ್ತಲ್ಲವೇ ಯಾವುದೋ ಮುಸ್ಸಂಜೆ ಸಮಯದಲ್ಲಿ ಬೆಟ್ಟದ ಮೇಲೆ ಪ್ರಶಾಂತವಾಗಿ ಕುಳಿತಾಗ ಕಂಡಿದ್ದಳವಳು ಅವಳ ಮುಗ್ಧ ನೋಟ ಎದೆಗೆ ನೇರ ದಾಳಿ ಮಾಡಿದಂತಿತ್ತು. ಒಂದೇ ಕ್ಷಣ ಅವಳನ್ನ ನೋಡಿದ್ದು ಆದರೆ ನನ್ನ ಮುಖವನ್ನೇ ಮರೆಯುವಷ್ಟರ ಮಟ್ಟಿಗೆ ಮೋಡಿ ಮಾಡಿದ ಹುಡುಗಿಯವಳು! ಮತ್ತೆ ಮತ್ತೆ ನೋಡಬೇಕಿನಿಸುವ ಮನದ ಹಠಕ್ಕೆ ಕಟ್ಟು ಬಿದ್ದು ಪ್ರತಿದಿನ ಅದೇ ಸಮಯ ಅದೇ ಜಾಗಕ್ಕೆ ಹೋಗಿ ಕಾದು ಕೂರಲು ಶುರು ಮಾಡಿದ್ದೆ. ಆಫೀಸ್ ನಿಂದ ಬರುವಾಗ ದಾರಿಯಲ್ಲಿ ಬೆಟ್ಟದ ಮೇಲಿನ ದೇವಸ್ಥಾನದ ಕಟ್ಟೆಗೆ ಕೂತು ಸೂರ್ಯಾಸ್ತ ನೋಡುವುದೆಂದರೆ ನನಗೆ ತುಂಬಾ ಖುಷಿ. ಆ ದಿನಗಳಲ್ಲಿ ಅದು ನನ್ನ ದಿನಚರಿಯ ಮುಖ್ಯ ಭಾಗವಾಗಿತ್ತು. ಆದರೆ ಅವತ್ತಿನ ಸೂರ್ಯಾಸ್ತ ಎಂದಿಗಿಂತ ವಿಶೇಷವಾಗಿತ್ತು. ಕಾರಣ ಅವಳನ್ನ ಮೊದಲ ಬಾರಿ ನೋಡಿದೆ. ಹುಡುಗಿಯರ ಗುಂಪೊಂದು ದೇವಸ್ಥಾನಕ್ಕೆ ಆಗಮಿಸಿತ್ತು. ಆ ಗುಂಪಲ್ಲಿ ಅವಳೂ ಒಬ್ಬಳು. ನನ್ನ ಕಠೋರ ಹೃದಯ ಅವಳ ಕಡೆಗೆ ಆಕರ್ಷಿತವಾಗಲು ಕಾರಣ ಬಹುಶಃ ವಟವಟ ಮಾತಾಡುವ ಹುಡುಗಿಯರ ಗುಂಪಿನ ನಡ...
ಆಗಾಗ ಮನದಲ್ಲಿ ಪುಟಿಯುವ ಭಾವನೆಗಳಿಗೆ ಅಕ್ಷರಗಳ ಬಣ್ಣ ಬಳಿಯುವ ಹವ್ಯಾಸಿಯ ಪದಗಳ ಪಯಣ..