ಹೊಸ ಹೊಸ ಕನಸು ಹೊತ್ತ ಮುಂಜಾವಿನ ಕಿರಣಗಳು ಯತಾರೀತಿ ಭೂಮಿ ಸ್ಪರ್ಶಿಸಿದವು. ಕವಲೊಡೆದ ಮನಸ್ಸಿನ ಹಾದಿಗಳು ಯಾವುದೋ ಒಂದು ತಿರುವಿನಲ್ಲಿ ಒಂದಾಗುವ ನಿರೀಕ್ಷೆಯಲ್ಲಿ ಇದ್ದವು. ಬೆಳಗಿನ ಆರು-ಆರುವರೆ ಸಮಯ.. ರಾತ್ರಿಯಿಡೀ ಸರದಿ ಪ್ರಕಾರ ರಣಹದ್ದಿನಂತೆ ಕಣ್ಣು ಬಿಟ್ಟುಕೊಂಡು ಕಾವಲು ಕಾಯುತ್ತಿದ್ದ ಸೆಕ್ಯೂರಿಟಿಸ಼್ ಆಕಳಿಸುತ್ತ, ಕಣ್ಣು ಮುಚ್ಚಲಾರದಂತೆ ಹರಸಾಹಸ ಪಡುತ್ತಿದ್ದರು ನಿದಿರೆ ಮಂಪರಿನಲ್ಲಿದ್ದವರನ್ನು ಯಾಮಾರಿಸುವುದು ಕಷ್ಟದ ಕೆಲಸವೇನು ಆಗಿರಲಿಲ್ಲ. ಕುರ್ಚಿಗೊರಗಿ ಕಣ್ಣು ಮುಚ್ಚಿ ವಿಶ್ರಮಿಸುತ್ತಿದ್ದ ಹರ್ಷ ಮೆಲ್ಲಗೆ ಕಣ್ಣುಜ್ಜಿಕೊಳ್ಳುತ್ತ ಎದ್ದು ಕುಳಿತು ಸುತ್ತಲಿನ ವಾತಾವರಣ ಗಮನಿಸಿದ. ಧುಡುಗ್ಗನೇ ಎದ್ದು ಆಸ್ಪತ್ರೆಯ ಕಾರಿಡಾರ್ ಕಡೆಗೆ ಹೆಜ್ಜೆ ಹಾಕಿದ. ಅಲರ್ಟಾದ ಇಬ್ಬರು ಗಾರ್ಡ್ಗಳು ಅವನನ್ನೇ ಹಿಂಬಾಲಿಸಿದರು. ಮುಂದೆ ಮುಂದೆ ಅವಸರದಲ್ಲಿ ಹೆಜ್ಜೆ ಹಾಕುತ್ತಿದ್ದ ಹರ್ಷ ಅಕಸ್ಮಾತ್ತಾಗಿ ಫೋನ್‌ಲ್ಲಿ ವ್ಯಸ್ತನಾಗಿದ್ದ ವ್ಯಕ್ತಿಯೊಬ್ಬನಿಗೆ ಢಿಕ್ಕಿ ಹೊಡೆದು ಬಿಟ್ಟ. ಕ್ಷಮೆ ಕೇಳಿದ್ದರೆ ವಿಷಯ ಅಲ್ಲಿಗೆ ಮುಗಿದು ಹೋಗಿರುತ್ತಿತ್ತೇನೋ.... ಆದರೆ ಹರ್ಷ ಬೇಕೆಂದೇ ತಪ್ಪೆಲ್ಲ ಎದುರು ವ್ಯಕ್ತಿಯ ಮೇಲೆ ಹಾಕಿ ಜಗಳಕ್ಕೆ ನಾಂದಿ ಹಾಡಿದ್ದ. ಚಿಕ್ಕ ವಿಷಯ ಕಲಾಪವಾಗಿ ಬೆಳೆಯಿತು. ಉಳಿದ ಸೆಕ್ಯೂರಿಟಿ ಗಾರ್ಡ್ಸ್ ಹಾಗೂ ಡೇವಿಡ್ ಗಮನ ಕೂಡ ಈಕಡೆಗೆ ಕೇಂದ್ರಿಕೃತವಾಯಿತು. ಅವರೂ ಓಡಿ ಬಂದರು. ಕೊನೆಗೆ ನಡೆಯುತ್ತಿದ್ದ ಗ...
ಆಗಾಗ ಮನದಲ್ಲಿ ಪುಟಿಯುವ ಭಾವನೆಗಳಿಗೆ ಅಕ್ಷರಗಳ ಬಣ್ಣ ಬಳಿಯುವ ಹವ್ಯಾಸಿಯ ಪದಗಳ ಪಯಣ..